ಕಾರವಾರ: ರಾಜ್ಯದ ಹಲವೆಡೆ ರೈತರು ಅಡಿಕೆ ಕೊಯ್ಲು ನಡೆಸುವ ಮೂಲಕ ಫುಲ್ ಬ್ಯುಸಿ ಆಗಿದ್ದಾರೆ. ಅದೇ ರೀತಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ಕೂಡಾ ತೋಟದ ಕೆಲಸದಲ್ಲಿ ನಿರತರಾಗಿದ್ದಾರೆ. ಪಂಚೆ ಕಟ್ಟಿ ತೋಟಕ್ಕಿಳಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಅಡಿಕೆ ಕೊನೆ ಹಿಡಿಯಲು ನಿಂತಿದ್ದಾರೆ. ಶಿರಸಿಯ ತಮ್ಮ ತೋಟದಲ್ಲಿ ಅಡಿಕೆ ಮರದ ಕೆಳಗೆ ಹಗ್ಗ ಹಿಡಿದು ಅಡಿಕೆ ಕೊನೆ ಇಳಿಸಿದ್ದಾರೆ. ಕೊನೆಗಾರ ಅಡಕೆ ಮರದ ತುದಿಯಲ್ಲಿ ನಿಂತು ಕೊನೆಗಳನ್ನ ಹಗ್ಗದ ಮುಖಾಂತರ ಕೆಳಗು ಕೊಡುತ್ತಾರೆ. ಹಗ್ಗದಲ್ಲಿ ಬಂದ ಕೊನೆಗಳನ್ನ ಸ್ಪೀಕರ್ (Speaker) ಹಿಡಿದು ಕೆಳಗೆ ಹಾಕುತ್ತಾರೆ. ಇದೇ ರೀರಿ ಸ್ವಲ್ಪ ಹೊತ್ತು ಕೆಲಸಗಾರರೊಂದಿಗೆ ಕಾಲ ಕಳೆಯುತ್ತಾರೆ.
ಇದನ್ನೂ ಓದಿ
Republic Day 2022: ಗಣರಾಜ್ಯೋತ್ಸವದ ಹಿನ್ನೆಲೆ, ಸಂವಿಧಾನದ ಬಗ್ಗೆ ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು
ನಾನು ಮುಸ್ಲಿಂ ಎಂಬ ಕಾರಣಕ್ಕೆ ನನ್ನನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದರು: ಬ್ರಿಟನ್ ಮಾಜಿ ಸಚಿವೆ ನುಸ್ರತ್ ಘನಿ