ಗೋಕರ್ಣದಲ್ಲಿ ಅಡ್ಡಾದಿಡ್ಡಿ ಬೈಕ್ ಓಡಿಸಿ, ಪೊಲೀಸರ ಜೊತೆನೇ ಯುವತಿ, ಯುವಕ ರಂಪಾಟ

ಹೈದರಾಬಾದ್​ ಮೂಲದ ಯುವಕ, ಯುವತಿ ರಂಪಾಟ. ಯುವತಿಯನ್ನು ಬೈಕ್​ನಲ್ಲಿ ಮುಂದೆ ಕೂರಿಸಿಕೊಂಡು ಯುವಕ ಚಾಲನೆ ಮಾಡುತ್ತಿದ್ದು ಅಡ್ಡಾದಿಡ್ಡಿ ಬೈಕ್ ಸವಾರಿಯಿಂದ ಜನರು ಭಯಭೀತಗೊಂಡಿದ್ದಾರೆ. ಸದ್ಯ ಸರಿಯಾಗಿ ಬೈಕ್​ ಓಡಿಸುವಂತೆ ಪೊಲೀಸರು ಸೂಚಿಸಿದ್ದಾರೆ.

TV9kannada Web Team

| Edited By: Ayesha Banu

Jan 24, 2022 | 8:05 AM

ಕುಡಿದ ಅಮಲಿನಲ್ಲಿದ್ದ ಜೋಡಿ ಪೊಲೀಸರ ಜೊತೆ ರಂಪಾಟ ಮಾಡಿರುವ ಘಟನೆ ನಡೆದಿದೆ.ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಅಡ್ಡಾದಿಡ್ಡಿ ಬೈಕ್ ಚಲಾಯಿಸಿದ ಜೋಡಿ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾರೆ. ಹೈದರಾಬಾದ್​ ಮೂಲದ ಯುವಕ, ಯುವತಿ ರಂಪಾಟ. ಯುವತಿಯನ್ನು ಬೈಕ್​ನಲ್ಲಿ ಮುಂದೆ ಕೂರಿಸಿಕೊಂಡು ಯುವಕ ಚಾಲನೆ ಮಾಡುತ್ತಿದ್ದು ಅಡ್ಡಾದಿಡ್ಡಿ ಬೈಕ್ ಸವಾರಿಯಿಂದ ಜನರು ಭಯಭೀತಗೊಂಡಿದ್ದಾರೆ. ಸದ್ಯ ಸರಿಯಾಗಿ ಬೈಕ್​ ಓಡಿಸುವಂತೆ ಪೊಲೀಸರು ಸೂಚಿಸಿದ್ದಾರೆ. ತಿಳಿಹೇಳಿದ ಪೊಲೀಸರ ವಿರುದ್ಧ ಯುವಕ, ಯುವತಿ ಆಕ್ರೋಶ ಹೊರ ಹಾಕಿದ್ದು. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Follow us on

Click on your DTH Provider to Add TV9 Kannada