AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hightest Smartphone Sale: 2021ರಲ್ಲಿ ಭಾರತದಲ್ಲಿ ಮಾರಾಟವಾದ ಸ್ಮಾರ್ಟ್​ಫೋನ್ ಎಷ್ಟು ಕೋಟಿ ಗೊತ್ತೇ?: ಶಾಕ್ ಆಗ್ತೀರಾ

Hightest Smartphone Sale: 2021ರಲ್ಲಿ ಭಾರತದಲ್ಲಿ ಮಾರಾಟವಾದ ಸ್ಮಾರ್ಟ್​ಫೋನ್ ಎಷ್ಟು ಕೋಟಿ ಗೊತ್ತೇ?: ಶಾಕ್ ಆಗ್ತೀರಾ

TV9 Web
| Updated By: Vinay Bhat|

Updated on: Jan 23, 2022 | 3:20 PM

Share

ಅಚ್ಚರಿ ಎಂಬಂತೆ ಒಂದೇ ವರ್ಷ ವಿಶ್ವದಲ್ಲಿ ಹಿಂದೆಂದೂ ಇಲ್ಲದಷ್ಟು ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಮಾರಾಟವಾಗಿದೆ. 2021ರಲ್ಲಿ ಭಾರತದಲ್ಲಿ ಬರೋಬ್ಬರಿ ಸುಮಾರು 17 ಕೋಟಿ ಸ್ಮಾರ್ಟ್​ಫೋನ್​ಗಳು ಸೇಲ್ ಆಗಿವೆ.

ಭಾರತ ಈಗ ಸ್ಮಾರ್ಟ್​ಫೋನ್​ಗಳ (Smartphone) ದೊಡ್ಡ ಮಾರುಕಟ್ಟೆಯಾಗಿ ರೂಪುಗೊಂಡಿದೆ. ಕಳೆದ ವರ್ಷದಲ್ಲಿ ಕೊರೊನಾ, ಲಾಕ್​ಡೌನ್ ಇದ್ದು ಜನರು ಕೆಲಸವಿಲ್ಲದೆ ಪರದಾಡಿದ್ದರೂ ಭಾರತ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ನೂತನ ದಾಖಲೆ ಬರೆದಿದೆ. ಅಚ್ಚರಿ ಎಂಬಂತೆ ಒಂದೇ ವರ್ಷ ವಿಶ್ವದಲ್ಲಿ ಹಿಂದೆಂದೂ ಇಲ್ಲದಷ್ಟು ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಮಾರಾಟವಾಗಿದೆ. 2021ರಲ್ಲಿ ಭಾರತದಲ್ಲಿ ಬರೋಬ್ಬರಿ ಸುಮಾರು 17 ಕೋಟಿ ಸ್ಮಾರ್ಟ್​ಫೋನ್​ಗಳು ಸೇಲ್ ಆಗಿವೆ. ಕಳೆದ ಒಂದು ವರ್ಷದಲ್ಲಿ ಮಾರುಕಟ್ಟೆಯು ಹೆಚ್ಚಿನ ಏರು ತಗ್ಗುಗಳನ್ನು ಕಂಡಿದೆ. ಕೊರೊನ (Corona) ಎರಡು ಹಾಗೂ ಮೂರನೇ ಅಲೆ, ಲಾಕ್ ಡೌನ್ ಹೀಗೆ ಅನೇಕ ಕಾರಣಗಳಿಂದ ಮೊಬೈಲ್ ದರಗಳು ಸಹ ಏರಿವೆ. ಹೀಗಿದ್ದರೂ ದಾಖಲೆಯ ಮಟ್ಟದಲ್ಲಿ ದೇಶದಲ್ಲಿ ಫೋನ್​ಗಳು ಮಾರಾಟ ಆಗಿವೆ. 5G ಸ್ಮಾರ್ಟ್‌ಫೋನ್‌ಗಳು 2021ರಲ್ಲಿ ಶೇಕಡಾ 17 ರಷ್ಟು ವಹಿವಾಟು ಆಗಿವೆ.  ಗ್ರಾಹಕರ ಬೇಡಿಕೆಯು 2021 ರಲ್ಲಿ ಪ್ರೀಮಿಯಂ ಬೆಲೆ ಶ್ರೇಣಿಗಳಲ್ಲಿ (ರೂ. 30,000 ಕ್ಕಿಂತ ಹೆಚ್ಚು) ಹೆಚ್ಚಾಗಿತ್ತು. ರೂ. 10,000 ಕ್ಕಿಂತ ಕಡಿಮೆ ಇರುವ ವರ್ಗವು ಶೇ. 30 ಮಾರುಕಟ್ಟೆ ಪಾಲನ್ನು ಹೊಂದಿದೆ. 10,000-20,000 ವಿಭಾಗ ಶೇ. 47 ಪಾಲುದಾರಿಕೆ ಪಡೆದುಕೊಂಡಿದೆ.

ನಿಮ್ಮ ಫೋನನ್ನು ಬೇರೆಯವರಿಗೆ ಕೊಡುವಾಗ ಹೀಗೆ ಮಾಡಿ: ಅವರೇನು ಮಾಡಿದ್ರು ಎಲ್ಲ ತಿಳಿಯುತ್ತೆ

Samsung Galaxy A52s: ಸ್ಯಾಮ್​ಸಂಗ್​ನಿಂದ ಶಾಕಿಂಗ್ ಪ್ರೈಸ್ ಕಟ್: ಈ ಫೋನ್ ಮೇಲೆ 5,000 ರೂ. ಕಡಿತ