ನಿಮ್ಮ ಫೋನನ್ನು ಬೇರೆಯವರಿಗೆ ಕೊಡುವಾಗ ಹೀಗೆ ಮಾಡಿ: ಅವರೇನು ಮಾಡಿದ್ರು ಎಲ್ಲ ತಿಳಿಯುತ್ತೆ

ಸಾಮಾನ್ಯವಾಗಿ ಬಹುತೇಕರು ತಮ್ಮ ಸ್ಮಾರ್ಟ್​ಫೋನ್ ಅನ್ನು ಇನ್ನೊಬ್ಬರಿಗೆ ನೀಡುವಾಗ ಒಮ್ಮೆ ಯೋಚಿಸದೆ ಇರಲಾರರು. ಹಾಗಂತ ಅವರಿಗೆ “ನಾನು ಕೋಡುವುದಿಲ್ಲ” ಎಂದು ಹೇಳಲೂ ಸಾಧ್ಯವಿಲ್ಲ. ಕೊಟ್ಟ ಬಳಿಕ ಅವರೇನು ಓಪನರ್ ಮಾಡಿದ್ರು?, ಏನು ನೋಡಿದ್ರು? ಎಂಬ ಕುತೂಹಲ ಕೂಡ ಇರುತ್ತದೆ. ಇದನ್ನು ತಿಳಿಯಲು ಒಂದು ಮಾರ್ಗವಿದೆ.

ನಿಮ್ಮ ಫೋನನ್ನು ಬೇರೆಯವರಿಗೆ ಕೊಡುವಾಗ ಹೀಗೆ ಮಾಡಿ: ಅವರೇನು ಮಾಡಿದ್ರು ಎಲ್ಲ ತಿಳಿಯುತ್ತೆ
Smartphone Tips
Follow us
TV9 Web
| Updated By: Vinay Bhat

Updated on: Jan 23, 2022 | 2:32 PM

ಸಾಮಾನ್ಯವಾಗಿ ಬಹುತೇಕರು ತಮ್ಮ ಸ್ಮಾರ್ಟ್​ಫೋನ್ ಅನ್ನು ಇನ್ನೊಬ್ಬರಿಗೆ ನೀಡುವಾಗ ಒಮ್ಮೆ ಯೋಚಿಸದೆ ಇರಲಾರರು. ಯಾಕಂದ್ರೆ ಆ ಫೋನಿನಲ್ಲಿ ಅವರ ಖಾಸಗಿ ವಿಚಾರಗಳು ಇರುತ್ತವೆ. ಹಾಗಂತ ಅವರಿಗೆ “ನಾನು ಕೋಡುವುದಿಲ್ಲ” ಎಂದು ಹೇಳಲೂ ಸಾಧ್ಯವಿಲ್ಲ. ಕೊಟ್ಟ ಬಳಿಕ ಅವರೇನು ಓಪನರ್ ಮಾಡಿದ್ರು?, ಏನು ನೋಡಿದ್ರು? ಎಂಬ ಕುತೂಹಲ ಕೂಡ ಇರುತ್ತದೆ. ಇದನ್ನು ತಿಳಿಯಲು ಒಂದು ಮಾರ್ಗವಿದೆ. ಅದುವೇ ಸ್ಕ್ರೀನ್ ರೆಕಾರ್ಡ್ ಮಾಡುವುದು. ಇದಕ್ಕೆ ನೀವು ಗೂಗಲ್ ಪ್ಲೇ ಸ್ಟೋರ್ (Goolge Play store) ಮೂಲಕ ಥರ್ಡ್ ಪಾರ್ಟಿ ಅಪ್ಲಿಕೇಷನ್ ಒಂದರ ಸಹಾಯ ಪಡೆದು ಮಾಡಬೇಕಾಗುತ್ತದೆ. ಹಾಗಾಗಿ ನಾವಿಲ್ಲಿ ಇವತ್ತು, ಯಾವ ಆ್ಯಪ್ ಬಳಸಿ ನೀವು ಈ ಕೆಲಸವನ್ನು ಸುಲಭದಲ್ಲಿ ಮಾಡಬಹುದು, ಆಂಡ್ರಾಯ್ಡ್ ನಲ್ಲಿ ನಿಮ್ಮ ಫೋನಿನ ಸ್ಕ್ರೀನ್ ರೆಕಾರ್ಡಿಂಗ್ (Screen recording) ಮಾಡಲು ಬೆಸ್ಟ್ ಆಗಿರುವ ಆ್ಯಪ್ ಗಳು ಯಾವುದು ಎಂಬುದನ್ನು ತಿಳಿಸಲಿದ್ದೇವೆ.

ಡಿಯು ರೆಕಾರ್ಡರ್: ಮೊದಲ ದಿ ಬೆಸ್ಟ್ ಆ್ಯಪ್ ಅಂದರೆ ಅದು ಡಿಯು ರೆಕಾರ್ಡರ್. ಇದು ತುಂಬಾ ಸರಳವಾಗಿದೆ ಮತ್ತು ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಎರಡು ರೀತಿಯಲ್ಲಿ ನೀವು ಇದರ ರೆಕಾರ್ಡಿಂಗ್ ನ್ನು ಕಂಟ್ರೋಲ್ ಮಾಡಬಹುದು. ಒಂದು ಪಾಪ್ ಅಪ್ ವಿಂಡೋ ಮೂಲಕ ಮತ್ತು ನೋಟಿಫಿಕೇಷನ್ ಬಾರ್ ಮೂಲಕ. ಇದರ ಸೆಟ್ಟಿಂಗ್ ನಲ್ಲಿ ವೀಡಿಯೋ ರೆಸೊಲ್ಯೂಷನ್ ಅನ್ನು ಕೂಡ ಬದಲಾಯಿಸಬಹುದು.

ಎಝಡ್ ಸ್ಕ್ರೀನ್ ರೆಕಾರ್ಡರ್: ಎಝಡ್ ಸ್ಕ್ರೀನ್ ರೆಕಾರ್ಡರ್ ಕೂಡ ಫ್ರೀ ಆ್ಯಪ್ ಆಗಿದೆ. ಪಾಪ್ ಅಪ್ ವಿಂಡೋ ಬರಲು ನೀವು ಪರ್ಮಿಷನ್ ನೀಡಬೇಕಾಗುತ್ತೆ. ಮತ್ತು ಆ್ಯಪ್ ನಿಮ್ಮ ಸ್ಕ್ರೀನಿನಲ್ಲಿ ಕಂಟ್ರೋಲ್ ಗಳನ್ನು ನೀಡುತ್ತೆ. ನೀವು ಅವುಗಳನ್ನು ಆಕ್ಸಿಸ್ ಮಾಡಿ ರೆಕಾರ್ಡಿಂಗ್ , ರೆಕಾರ್ಡ್ ಆದ ವೀಡಿಯೋ ಸೆಂಡ್ ಮಾಡುವ ಕೆಲಸ ಅಥವಾ ಎಡಿಟ್ ಮಾಡುವ ಕೆಲಸವನ್ನು ಏಕಮಾತ್ರ ಇಂಟರ್ ಫೇಸ್ ನಲ್ಲಿ ಮಾಡಬಹುದಾಗಿದೆ.

ಸ್ಕ್ರೀನ್ ರೆಕಾರ್ಡರ್: ಸ್ಕ್ರೀನ್ ರೆಕಾರ್ಡರ್ ಅನ್ನು ಇನ್ ಸ್ಟಾಲ್ ಮಾಡಿದರೆ ಲಾಭದಾಯಕ ಅಂತ ಹೇಳಬಹುದು. ಯಾಕಂದ್ರೆ ಇದರಲ್ಲಿ ಯಾವುದೇ ಜಾಹಿರಾತುಗಳಿರುವುದಿಲ್ಲ ಮತ್ತು ಆ್ಯಪ್ ಪರ್ಚೇಸ್ ಗಳೂ ಇರುವುದಿಲ್ಲ. ಬೇರೆ ಆ್ಯಪ್ ಗಳಂತೆ ಇದರಲ್ಲೂ ಪಾಪ್ ಅಪ್ ವಿಂಡೋ ಪರ್ಮಿಷನ್ ಬೇಕಾಗುತ್ತೆ ಅದನ್ನು ಹೊರತು ಪಡಿಸಿದರೆ ತೀರ ನೇರವಾಗಿರುವ ಆ್ಯಪ್ ಇದು. ಇದನ್ನು ಇನ್​ಸ್ಟಾಲ್ ಮಾಡಿದರೆ ಚಿಕ್ಕದೊಂದು ಟೂಲ್ ಬ್ರ್ ನಿಮ್ಮ ಸ್ಕ್ರೀನ್ ಕೆಳಭಾಗದಲ್ಲಿ ಕಾಣಿಸುತ್ತೆ. ನೀವು ಎಷ್ಟು ಹೊತ್ತು ರೆಕಾರ್ಡ್ ಮಾಡಬೇಕು ಎಂಬುದನ್ನು ಸೆಟ್ ಮಾಡಬಹುದು.

Samsung Galaxy A52s: ಸ್ಯಾಮ್​ಸಂಗ್​ನಿಂದ ಶಾಕಿಂಗ್ ಪ್ರೈಸ್ ಕಟ್: ಈ ಫೋನ್ ಮೇಲೆ 5,000 ರೂ. ಕಡಿತ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ