- Kannada News Photo gallery Samsung Galaxy A52s reportedly enjoying a massive price cut Should you buy it now
Samsung Galaxy A52s: ಸ್ಯಾಮ್ಸಂಗ್ನಿಂದ ಶಾಕಿಂಗ್ ಪ್ರೈಸ್ ಕಟ್: ಈ ಫೋನ್ ಮೇಲೆ 5,000 ರೂ. ಕಡಿತ
Samsung Galaxy A52s Price Cut: ಸ್ಯಾಮ್ಸಂಗ್ ಕಂಪನಿ ಈಗೀಗ ತನ್ನ ಫೋನ್ಗಳ ಬೆಲೆಯನ್ನು ಇಳಿಕೆ ಮಾಡುತ್ತಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ A52s ಬೆಲೆಯಲ್ಲಿ ಬರೋಬ್ಬರಿ 5000 ರೂ. ಕಡಿತ ಮಾಡಿದೆ. ಇದರ ಮೂಲ ರೂಪಾಂತರ 6GB RAM ಮತ್ತು 128GB ಸ್ಟೋರೇಜ್ ಮಾದರಿಯ ಪೋನ್ ಬೆಲೆ ಈ ಮೊದಲು 35,999 ರೂ.ಗಳಾಗಿತ್ತು.
Updated on: Jan 23, 2022 | 1:24 PM

ಸ್ಮಾರ್ಟ್ಫೋನ್ ದೈತ್ಯ ಸ್ಯಾಮ್ಸಂಗ್ (Samsung) ಕಂಪನಿ ಈಗೀಗ ತನ್ನ ಫೋನ್ಗಳ ಬೆಲೆಯನ್ನು ಉಳಿಕೆ ಮಾಡುತ್ತಿದೆ. ಇತ್ತೀಚೆಗಷ್ಟೆ ಗ್ಯಾಲಕ್ಸಿ A12 ಫೋನ್ ಬೆಲೆಯಲ್ಲಿ 1000 ರೂ. ಖಡಿತ ಮಾಡಿತ್ತು. ಎರಡು ದಿನಗಳ ಹಿಂದೆಯಷ್ಟೆ ಗ್ಯಾಲಕ್ಸಿ S21 FE 5G ಸ್ಮಾರ್ಟ್ಫೋನ್ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಿಸಿತ್ತು. ಇದೀಗ ಗ್ಯಾಲಕ್ಸಿ A52s ಸ್ಮಾರ್ಟ್ಫೋನ್ನ ಸರದಿ. ಈ ಸ್ಮಾರ್ಟ್ಫೋನ್ನ ಬೆಲೆ ಗಣನೀಯವಾಗಿ ಕಡಿತಗೊಂಡಿದೆ. ಇದರ ಮೇಲೆ 5,000 ರೂ. ಗಳ ಭಾರೀ ಬೆಲೆ ಕಡಿತವನ್ನು ಸ್ಯಾಮ್ಸಂಗ್ ಪ್ರಕಟಿಸಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ A52s ಸ್ಮಾರ್ಟ್ಫೋನ್ನ ಬೆಲೆ ಕಡಿತವನ್ನು ನೋಡುವುದಾದರೆ, ಇದರ ಮೂಲ ರೂಪಾಂತರ 6GB RAM ಮತ್ತು 128GB ಸ್ಟೋರೇಜ್ ಮಾದರಿಯ ಪೋನ್ ಬೆಲೆ ಈ ಮೊದಲು 35,999 ರೂ.ಗಳಾಗಿತ್ತು. ಇದೀಗ 5,000 ರೂ.ಗಳ ಬಾರೀ ಬೆಲೆ ಕಡಿತವನ್ನು 30,999 ರೂ.ಗಳಿಗೆ ಖರೀದಿಸಬಹುದು.

ಅಂತೆಯೇ, ಉನ್ನತ-ಮಟ್ಟದ 8GB RAM ಮತ್ತು 128GB ಸ್ಟೋರೇಜ್ ಮಾದರಿಯ ಸ್ಮಾರ್ಟ್ಫೋನ್ ಬೆಲೆ ಈ ಮೊದಲು 37,499 ರೂ.ಗಳಾಗಿತ್ತು. ಆದರೆ, ಇದೀಗ ಈ ಮಾದರಿ ಫೋನನ್ನು 32,499 ರೂ.ಗಳಿಗೆ ಖರೀದಿಸಬಹುದು. ಈ ಬೆಲೆ ಕಡಿತವು ಕೇವಲ ಆಫ್ಲೈನ್ ಖರೀದಿಗಳಿಗೆ ಮಾತ್ರ ಇದ್ದು, ಶೀಘ್ರದಲ್ಲೇ ಆನ್ಲೈನ್ ಬೆಲೆಗಳು ಕೂಡ ಕಡಿಮೆಯಾಗಲಿದೆ ಎನ್ನಲಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ A52s 5G ಸ್ಮಾರ್ಟ್ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ ಫುಲ್ ಹೆಚ್ಡಿ+ ಡಿಸ್ ಪ್ಲೇ ಹೊಂದಿದೆ. ಇದು ಸೂಪರ್ ಅಮೋಲೆಡ್ ಇನ್ಫಿನಿಟಿ-O ಡಿಸ್ ಪ್ಲೇ ಆಗಿದೆ. ಇನ್ನು ಈ ಡಿಸ್ ಪ್ಲೇ 120Hz ರಿಫ್ರೆಶ್ ರೇಟ್ ಹೊಂದಿದೆ.

ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778G SoC ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ ಒಂದು UI 3 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಹೊಂದಿದೆ. ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸರ್, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಸಹ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಪಡೆದುಕೊಂಡಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ A52s 5G ಸ್ಮಾರ್ಟ್ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದುದು 25W ಸೂಪರ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS/ A-GPS, NFC ಮತ್ತು USB Type-C ಪೋರ್ಟ್ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್ಫೋನ್ ಇನ್-ಡಿಸ್ ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ನೊಂದಿಗೆ ಬರುತ್ತದೆ.



















