‘ಆರ್​ಆರ್​ಆರ್​’ ಮತ್ತು ‘ಬಚ್ಚನ್​ ಪಾಂಡೆ’ ನಡುವೆ ಏರ್ಪಡಲಿದೆ ಬಿಗ್​ ಕ್ಲ್ಯಾಶ್?

ಎರಡು ಸಂಭಾವ್ಯ ದಿನಾಂಕಗಳನ್ನು ಚಿತ್ರತಂಡ ಘೋಚಿಸಿದೆ. ಮಾರ್ಚ್​ 18 ಅಥವಾ ಏಪ್ರಿಲ್​ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಮಾ.18ರ ದಿನಾಂಕ ರಾಜಮೌಳಿ ಅವರ ಮೊದಲ ಆದ್ಯತೆ.

TV9kannada Web Team

| Edited By: Rajesh Duggumane

Jan 23, 2022 | 3:54 PM

ಕೊವಿಡ್​ ಪ್ರಕರಣ ಹೆಚ್ಚುತ್ತಿದೆ ನಿಜ. ಆದರೆ, ಸಾವಿನ ಪ್ರಮಾಣ ಕಡಿಮೆ ಇದೆ. ಈ ಕಾರಣಕ್ಕೆ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ದೇಶದ ಬಹುತೇಕರು ಕೊವಿಡ್​ ಲಸಿಕೆ ಪಡೆದಿರುವುದರಿಂದ ಸಾವಿನ ಪ್ರಮಾಣ ಕಡಿಮೆ ಆಗಿದೆ ಎನ್ನಲಾಗಿದೆ. ಹೀಗಾಗಿ, ಎಲ್ಲವೂ ಮರಳಿ ಮೊದಲಿನ ಸ್ಥಿತಿಗೆ ಬರುತ್ತಿದೆ. ದೊಡ್ಡದೊಡ್ಡ ಸಿನಿಮಾಗಳು ರಿಲೀಸ್​ ದಿನಾಂಕ ಘೋಷಣೆ ಮಾಡುತ್ತಿವೆ. ಈಗ ‘ಆರ್​ಆರ್​ಆರ್​’ ಹಾಗೂ ‘ಬಚ್ಚನ್​ ಪಾಂಡೆ’ ನಡುವೆ ಕ್ಲ್ಯಾಶ್​ ಏರ್ಪಡಲಿದೆಯೇ ಎನ್ನುವ ಕುತೂಹಲ ಮೂಡಿದೆ. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರದ ಬಿಡುಗಡೆ ದಿನಾಂಕ (RRR Movie Release Date) ಗೊಂದಲಮಯ ಆಗಿದೆ. ಎರಡು ಸಂಭಾವ್ಯ ದಿನಾಂಕಗಳನ್ನು ಚಿತ್ರತಂಡ ಘೋಚಿಸಿದೆ. ಮಾರ್ಚ್​ 18 ಅಥವಾ ಏಪ್ರಿಲ್​ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಮಾ.18ರ ದಿನಾಂಕ ರಾಜಮೌಳಿ ಅವರ ಮೊದಲ ಆದ್ಯತೆ. ಆದರೆ ಅಷ್ಟರೊಳಗೆ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಸಿಗದೇ ಇದ್ದರೆ ನಷ್ಟ ಆಗುತ್ತದೆ ಎಂಬ ಚಿಂತೆ ಕೂಡ ಅವರಿಗೆ ಇದೆ. ಹಾಗಾಗಿ ಎರಡನೇ ಆಯ್ಕೆಯಾಗಿ ಏ.28ರ ದಿನಾಂಕವನ್ನು ಅವರು ಲಾಕ್​ ಮಾಡಿದ್ದಾರೆ. ಒಂದು ವೇಳೆ ಮಾ.18ರಂದು ‘ಆರ್​ಆರ್​ಆರ್​’ ತೆರೆಕಂಡರೆ ಅಕ್ಷಯ್​ ಕುಮಾರ್​ (Akshay Kumar) ನಟನೆಯ ‘ಬಚ್ಚನ್​ ಪಾಂಡೆ’ ಚಿತ್ರದ ಜೊತೆ ಕ್ಲ್ಯಾಷ್​ ಏರ್ಪಡಲಿದೆ. ಯಾಕೆಂದರೆ, ಮಾ.18ರಂದು ಬಿಡುಗಡೆ ಆಗುವುದಾಗಿ ‘ಬಚ್ಚನ್​ ಪಾಂಡೆ’ ಸಿನಿಮಾ ಈಗಾಗಲೇ ಘೋಷಣೆ ಮಾಡಿದೆ. ಒಂದು ವೇಳೆ ಈ ಕ್ಲ್ಯಾಷ್​ ತಪ್ಪಿಸಬೇಕು ಎಂದು ಪ್ರಯತ್ನಿಸಿದರೆ ಅಜಯ್​ ದೇವಗನ್​ ನಟನೆಯ ‘ರನ್​ ವೇ 34’ ಚಿತ್ರದ ಎದುರು ‘ಆರ್​ಆರ್​ಆರ್​’ ಮುಖಾಮುಖಿ ಆಗಬೇಕಾಗುತ್ತದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ತೊಟ್ಟ ಈ ಸೀರೆಯ ಬೆಲೆಯನ್ನು ಊಹಿಸ್ತೀರಾ? ಅಬ್ಬಾಬ್ಬಾ ಇಷ್ಟೊಂದು ದುಬಾರಿಯಾ?

‘ಆರ್​ಆರ್​ಆರ್​’ ಹೊಸ ರಿಲೀಸ್​ ದಿನಾಂಕ ಘೋಷಣೆ; ಆದರೂ ಮುಗಿಯಲಿಲ್ಲ ಗೊಂದಲ

Follow us on

Click on your DTH Provider to Add TV9 Kannada