‘ಸಲಗ’ ಖ್ಯಾತಿಯ ಕೆಂಡ-ಶೆಟ್ಟಿ ಕಾಂಬಿನೇಷನ್ನಲ್ಲಿ ಬರ್ತಿದೆ ಹೊಸ ಚಿತ್ರ; ಮಾರ್ಚ್ನಲ್ಲಿ ರಿಲೀಸ್
ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಜನವರಿ 28ಕ್ಕೆ ಬಿಡುಗಡೆಯಾಗಲಿದೆ. ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗದೆ, ಚಿತ್ರಮಂದಿರಗಳಲ್ಲೇ ಬಿಡುಗಡೆ ಆಗುತ್ತಿರುವುದು ವಿಶೇಷ.
ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿದ್ದ ‘ಸಲಗ’ ಸಿನಿಮಾ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಯಶ್ ಶೆಟ್ಟಿ ಹಾಗೂ ಕೆಂಡ ಶ್ರೇಷ್ಠ ಮಿಂಚಿದ್ದರು. ಈಗ ಇವರ ಕಾಂಬಿನೇಷನ್ನಲ್ಲಿ ‘ಇನ್‌ಸ್ಟಂಟ್ ಕರ್ಮ’ ಸಿನಿಮಾ ಸಿದ್ಧಗೊಂಡಿದೆ. ಸಂದೀಪ್ ಮಹಾಂತೇಶ್ ನಿರ್ದೇಶನದ ಈ ಚಿತ್ರ ಈ ವರ್ಷ ಮಾರ್ಚ್ ತಿಂಗಳಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ‘ಬ್ರೇಕ್ ಫ್ರೀ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಸಂತೋಷ್ ಮಹಾಂತೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗ್ಯಾಂಗ್‌ಸ್ಟರ್ ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿರುವ ಈ ಚಿತ್ರಕ್ಕೆ ಭಾಸ್ಕರ್ ರೆಡ್ಡಿ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಸೂರಜ್ ಜೋಯಿಸ್ ಸಂಗೀತ ನಿರ್ದೇಶನ ಇದೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಜನವರಿ 28ಕ್ಕೆ ಬಿಡುಗಡೆಯಾಗಲಿದೆ. ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗದೆ, ಚಿತ್ರಮಂದಿರಗಳಲ್ಲೇ ಬಿಡುಗಡೆ ಆಗುತ್ತಿರುವುದು ವಿಶೇಷ. ಮಾರ್ಚ್ ತಿಂಗಳಲ್ಲಿ ಬಿಗ್ ಬಜೆಟ್ ಚಿತ್ರಗಳು ಬರುವ ನಿರೀಕ್ಷೆ ಇದೆ. ಈ ಚಿತ್ರಗಳ ಜತೆ ‘ಇನ್‌ಸ್ಟಂಟ್ ಕರ್ಮ’ ಸ್ಪರ್ಧಿಸಲಿದೆ.
ಇದನ್ನೂ ಓದಿ: ‘ಶಿವಣ್ಣ ಮತ್ತು ಅವರ ಕುಟುಂಬಕ್ಕೆ ನಾನು ಚಿರಋಣಿ’; ಸಲಗ ಗೆಲುವಿನಲ್ಲಿ ದುನಿಯಾ ವಿಜಯ್ ಧನ್ಯವಾದ
ಮೇಕೆದಾಟು ಪಾದಯಾತ್ರೆಯಲ್ಲಿ ದುನಿಯಾ ವಿಜಯ್ ಭಾಗಿ; ನೀರಿಗಾಗಿ ಹೋರಾಟಕ್ಕೆ ‘ಸಲಗ’ ಬೆಂಬಲ