ಮೇಕೆದಾಟು ಪಾದಯಾತ್ರೆಯಲ್ಲಿ ದುನಿಯಾ ವಿಜಯ್ ಭಾಗಿ; ​ನೀರಿಗಾಗಿ ಹೋರಾಟಕ್ಕೆ ‘ಸಲಗ’ ಬೆಂಬಲ

ನಟ ದುನಿಯಾ ವಿಜಯ್​ ಅವರು ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಅವರ ಪಾಲ್ಗೊಳ್ಳುವಿಕೆಯಿಂದ ಸ್ಟಾರ್​ ಮೆರುಗು ಹೆಚ್ಚಿದೆ.

TV9kannada Web Team

| Edited By: Madan Kumar

Jan 09, 2022 | 2:30 PM

ಡಿ.ಕೆ. ಶಿವಕುಮಾರ್​ ಹಾಗೂ ಕಾಂಗ್ರೆಸ್​ನ ಇನ್ನಿತರೆ ನಾಯಕರ ಮುಂದಾಳತ್ವದಲ್ಲಿ ಮೇಕೆದಾಟು ಪಾದಯಾತ್ರೆ (Mekedatu Padayatra) ಇಂದು (ಜ.9) ಆರಂಭ ಆಗಿದೆ. ಮೇಕೆದಾಟು (Mekedatu) ಯೋಜನೆ ಜಾರಿ ಆಗಬೇಕು, ಮೇಕೆದಾಟು ಅಣೆಕಟ್ಟು ನಿರ್ಮಾಣ ಆಗಬೇಕು ಎಂಬ ಉದ್ದೇಶದಿಂದ ಈ ಪಾದಯಾತ್ರೆ ಮಾಡಲಾಗುತ್ತಿದೆ. ಇದರಲ್ಲಿ ಕನ್ನಡ ಚಿತ್ರರಂಗದ ಕಲಾವಿದರು ಕೂಡ ಭಾಗವಹಿಸಬೇಕು ಎಂದು ಡಿ.ಕೆ. ಶಿವಕುಮಾರ್​ (DK Shivakumar) ಆಹ್ವಾನ ನೀಡಿದ್ದರು. ಕೆಲವು ಸ್ಟಾರ್​ ಕಲಾವಿದರಿಗೆ ಖುದ್ದು ಫೋನ್​ ಕರೆ ಮಾಡಿ ಆಹ್ವಾನ ನೀಡುವುದಾಗಿ ಅವರು ತಿಳಿಸಿದ್ದರು. ಅದರಂತೆ ಹಲವರಿಗೆ ಆಹ್ವಾನ ಹೋಗಿದೆ. ಆ ಹಿನ್ನೆಲೆಯಲ್ಲಿ ನಟ ದುನಿಯಾ ವಿಜಯ್​ (Duniya Vijay) ಅವರು ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಅವರ ಪಾಲ್ಗೊಳ್ಳುವಿಕೆಯಿಂದ ಸ್ಟಾರ್​ ಮೆರುಗು ಹೆಚ್ಚಿದೆ. ಡಿ.ಕೆ. ಶಿವಕುಮಾರ್​ ಮತ್ತು ಸಿದ್ದರಾಮಯ್ಯ ಅವರ ಜತೆ ವಿಜಯ್​ ಅವರಿಗೆ ಒಡನಾಟ ಇದೆ. ‘ಸಲಗ’ (Salaga Movie) ಚಿತ್ರದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಈ ನಾಯಕರಿಬ್ಬರು​ ಭಾಗವಹಿಸಿದ್ದನ್ನು ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ:

‘ಕಾಂಗ್ರೆಸ್​ ಸದಸ್ಯತ್ವ ನಾನು ಪಡೆದಿಲ್ಲ; ಕಲಾವಿದರಿಗೆ ಪಕ್ಷ ಇಲ್ಲ’: ಮೇಕೆದಾಟು ಪಾದಯಾತ್ರೆ ಬಗ್ಗೆ ಸಾಧು ಕೋಕಿಲ ಮಾತು

‘ನಮ್ಮ ನೀರು, ನಮ್ಮ ಹಕ್ಕು’ ಧ್ಯೇಯದೊಂದಿಗೆ ಮೇಕೆದಾಟು ಪಾದಯಾತ್ರೆ ಆರಂಭ

Follow us on

Click on your DTH Provider to Add TV9 Kannada