‘ಆರ್​ಆರ್​ಆರ್​’ ಹೊಸ ರಿಲೀಸ್​ ದಿನಾಂಕ ಘೋಷಣೆ; ಆದರೂ ಮುಗಿಯಲಿಲ್ಲ ಗೊಂದಲ

ಕೊವಿಡ್​ ಅತಿಯಾಗಿ ಹೆಚ್ಚುತ್ತಿದೆಯಾದರೂ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡಿಲ್ಲ. ಹೀಗಾಗಿ, ಜನರು ಕೊರೊನಾ ಜತೆಯೇ ಜೀವಿಸುವುದನ್ನು ಕಲಿಯುತ್ತಿದ್ದಾರೆ. ಹೀಗಾಗಿ, ಮುಂದಿನ ಕೆಲವೇ ತಿಂಗಳಲ್ಲಿ ಪರಿಸ್ಥಿತಿ ಸಮಸ್ಥಿತಿಗೆ ಬರಬಹುದು ಎನ್ನುವ ನಿರೀಕ್ಷೆ ಎಲ್ಲರಲ್ಲಿಯೂ ಇದೆ.

‘ಆರ್​ಆರ್​ಆರ್​’ ಹೊಸ ರಿಲೀಸ್​ ದಿನಾಂಕ ಘೋಷಣೆ; ಆದರೂ ಮುಗಿಯಲಿಲ್ಲ ಗೊಂದಲ
ಆರ್​ಆರ್​ಆರ್​ ಪೋಸ್ಟರ್​​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 21, 2022 | 8:23 PM

ಭಾರತದಲ್ಲಿ ಕೊವಿಡ್ ಸಂಖ್ಯೆ (Covid Cases) ಹೆಚ್ಚುತ್ತಿದೆ. ಆದರೆ, ಕೊರೊನಾದ ತೀವ್ರತೆ ಮೊದಲಿನಷ್ಟಿಲ್ಲ. ಸಾವುಗಳು ಹೆಚ್ಚು ಸಂಭವಿಸುತ್ತಿಲ್ಲ. ಇದರಿಂದ ಜನರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ನಾನಾ ರಾಜ್ಯಗಳಲ್ಲಿ ಜಾರಿಗೆ ತರಲಾದ ಕಠಿಣ ನಿಯಮಗಳನ್ನು ದಿನ ಕಳೆದಂತೆ ಸಡಿಲಿಕೆ ಮಾಡಲಾಗುತ್ತಿದೆ. ಹೀಗಾಗಿ, ಚಿತ್ರರಂಗ ಮತ್ತೆ ಆ್ಯಕ್ಟೀವ್​ ಆಗುತ್ತಿದೆ. ಶೀಘ್ರವೇ ಎಲ್ಲವೂ ಸಮಸ್ಥಿತಿಗೆ ಮರಳುವ ನಿರೀಕ್ಷೆ ಇದೆ. ಹೀಗಾಗಿ, ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟ ಬಿಗ್​ ಬಜೆಟ್​ ಚಿತ್ರಗಳು ಸಿನಿಮಾ ರಿಲೀಸ್​ ದಿನಾಂಕ ಘೋಷಣೆ ಮಾಡಿಕೊಳ್ಳುತ್ತಿವೆ. ‘ಆರ್​ಆರ್​​ಆರ್​’ ಚಿತ್ರತಂಡ (RRR Team) ಹೊಸ ರಿಲೀಸ್​ ದಿನಾಂಕ ಘೋಷಣೆ ಮಾಡಿದೆ. ಆದರೆ, ಇಲ್ಲಿಯೂ ಗೊಂದಲ ಮುಂದುವರಿದಿದೆ.

ದೇಶದಲ್ಲಿ ಅನಿಶ್ಚಿತತೆ ಮುಂದುವರಿದಿದೆ. ಕೊವಿಡ್​ ಅತಿಯಾಗಿ ಹೆಚ್ಚುತ್ತಿದೆಯಾದರೂ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡಿಲ್ಲ. ಹೀಗಾಗಿ, ಜನರು ಕೊರೊನಾ ಜತೆಯೇ ಜೀವಿಸುವುದನ್ನು ಕಲಿಯುತ್ತಿದ್ದಾರೆ. ಹೀಗಾಗಿ, ಮುಂದಿನ ಕೆಲವೇ ತಿಂಗಳಲ್ಲಿ ಪರಿಸ್ಥಿತಿ ಸಮಸ್ಥಿತಿಗೆ ಬರಬಹುದು ಎನ್ನುವ ನಿರೀಕ್ಷೆ ಎಲ್ಲರಲ್ಲಿಯೂ ಇದೆ. ಈ ಕಾರಣಕ್ಕೆ ‘ಆರ್​ಆರ್​ಆರ್​’ ತಂಡ ಹೊಸ ರಿಲೀಸ್​ ದಿನಾಂಕ ಘೋಷಣೆ ಮಾಡಿದೆ.

ಇಂದು (ಜನವರಿ 21) ‘ಆರ್​ಆರ್​ಆರ್​’ ತಂಡ ರಿಲೀಸ್​ ದಿನಾಂಕ ಘೋಷಣೆ ಮಾಡಿದೆ. ‘ಆರ್​ಆರ್​ಆರ್​’ ತಂಡ ಮಾರ್ಚ್ 18ರಂದು ಸಿನಿಮಾ ರಿಲೀಸ್​ ಮಾಡಲು ನಿರ್ಧರಿಸಿದೆ. ಒಂದೊಮ್ಮೆ ಆ ದಿನಾಂಕದ ಒಳಗೆ ಪರಿಸ್ಥಿತಿ ಸಮಸ್ಥಿತಿಗೆ ಬರದಿದ್ದರೆ ಏಪ್ರಿಲ್​ 28ರಂದು ಚಿತ್ರ ರಿಲೀಸ್​ ಆಗಲಿದೆ. ‘ಆರ್​ಆರ್​ಆರ್​’ ತಂಡದಲ್ಲಿ ರಿಲೀಸ್ ದಿನಾಂಕದ ಬಗ್ಗೆ ಇನ್ನೂ ಗೊಂದಲ ಇದೆ. ಮಾರ್ಚ್​ ವೇಳೆಗೆ ಪರಿಸ್ಥಿತಿ ಸಮಸ್ಥಿತಿಗೆ ಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಎಸ್​ಎಸ್​ ರಾಜಮೌಳಿ ನಿರ್ದೇಶನ ಇರುವ ಈ ಸಿನಿಮಾದಲ್ಲಿ, ರಾಮ್​ ಚರಣ್​ ಹಾಗೂ ಜ್ಯೂ.ಎನ್​ಟಿಆರ್​ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.  ಬಾಲಿವುಡ್​ನ ಖ್ಯಾತ ನಟಿ ಆಲಿಯಾ ಭಟ್​ ಅವರು ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಟ ಅಜಯ್​ ದೇವಗನ್​ ಕೂಡ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾರೆ.  ಟ್ರೇಲರ್​ ನೋಡಿದ ಸಿನಿಪ್ರಿಯರು ಫಿದಾ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರತಂಡ ಮತ್ತೆ ಪ್ರಚಾರ ಕಾರ್ಯ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಮತ್ತೆ ನಾಗ ಚೈತನ್ಯ ಜೊತೆ ಸಂಸಾರ ಮಾಡ್ತಾರಾ ಸಮಂತಾ? ವಿಚ್ಛೇದನದ ಪೋಸ್ಟ್​ ಏಕಾಏಕಿ ಡಿಲೀಟ್​

‘ಆರ್​ಆರ್​ಆರ್​’ ಚಿತ್ರದ ಪ್ರಚಾರಕ್ಕೆ ಹಾಕಿದ ಹಣ ನಿಜಕ್ಕೂ ದೊಡ್ಡ ವ್ಯರ್ಥ ಎಂದ ಖ್ಯಾತ ನಿರ್ದೇಶಕ

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ