ಮತ್ತೆ ನಾಗ ಚೈತನ್ಯ ಜೊತೆ ಸಂಸಾರ ಮಾಡ್ತಾರಾ ಸಮಂತಾ? ವಿಚ್ಛೇದನದ ಪೋಸ್ಟ್​ ಏಕಾಏಕಿ ಡಿಲೀಟ್​

ಮತ್ತೆ ನಾಗ ಚೈತನ್ಯ ಜೊತೆ ಸಂಸಾರ ಮಾಡ್ತಾರಾ ಸಮಂತಾ? ವಿಚ್ಛೇದನದ ಪೋಸ್ಟ್​ ಏಕಾಏಕಿ ಡಿಲೀಟ್​
ನಾಗ ಚೈತನ್ಯ, ಸಮಂತಾ

ಸಮಂತಾ ಅವರ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಮಾತ್ರ ಈ ಪೋಸ್ಟ್​ ಮಾಯವಾಗಿದೆ. ಆದರೆ ನಾಗ ಚೈತನ್ಯ ಅವರ ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ನಲ್ಲಿ ಹಾಗೆಯೇ ಇದೆ.

TV9kannada Web Team

| Edited By: Rajesh Duggumane

Jan 21, 2022 | 5:42 PM

ನಟಿ ಸಮಂತಾ (Samantha) ಅವರು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ನಾಗ ಚೈತನ್ಯ (Naga Chaitanya) ಜೊತೆ ಮದುವೆ ಆದ ಬಳಿಕವೂ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದರು. ಇತ್ತೀಚೆಗೆ ವಿಚ್ಛೇದನ ಪಡೆದ ನಂತರ ಅವರ ಸಿನಿಮಾ ಜರ್ನಿಗೆ ಇನ್ನಷ್ಟು ವೇಗ ಸಿಕ್ಕಿತು. ತಮ್ಮ ಮನಸ್ಸಿಗೆ ಹಿಡಿಸುವಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಆರಂಭಿಸಿದರು. ‘ಪುಷ್ಪ’ ಸಿನಿಮಾದ ‘ಹು ಅಂತೀಯಾ ಮಾವ..’ ಹಾಡಿನ ಮೂಲಕ ಧೂಳೆಬ್ಬಿಸಿದರು. ಇಷ್ಟೆಲ್ಲ ಸೌಂಡು ಮಾಡುತ್ತಿರುವ ಅವರು ಮತ್ತೆ ನಾಗ ಚೈತನ್ಯ ಜೊತೆ ಸಂಸಾರ ಶುರು ಮಾಡುತ್ತಾರಾ? ಅದು ದೂರದ ಮಾತು. ಹಾಗಿದ್ದರೂ ಕೂಡ ನೆಟ್ಟಿಗರಿಗೆ ಇಂಥದ್ದೊಂದು ಅನುಮಾನ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಸಮಂತಾ ಅವರ ನಡೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ (Samantha Naga Chaitanya Divorce) ಬಳಿಕ ಇನ್​ಸ್ಟಾಗ್ರಾಮ್​ನಲ್ಲಿ ಸಮಂತಾ ಪೋಸ್ಟ್​ ಹಾಕಿದ್ದರು. ಆದರೆ ಆ ಪೋಸ್ಟ್​ ಈಗ ಡಿಲೀಟ್​​ ಆಗಿದೆ. ನಟಿಯ ಈ ನಡೆಯಿಂದಾಗಿ ಎಲ್ಲರಿಗೂ ಅಚ್ಚರಿ ಆಗಿದೆ.

ನಾಗ ಚೈತನ್ಯ ಮತ್ತು ಸಮಂತಾ ಪರಸ್ಪರ ಪ್ರೀತಿ ಮದುವೆ ಆದವರು. ಹಲವು ವರ್ಷಗಳ ಕಾಲ ಪ್ರೀತಿಸಿದ್ದ ಅವರು ನಾಲ್ಕು ವರ್ಷ ಸಂಸಾರ ನಡೆಸಿದರು. ಆದರೆ ಇದ್ದಕ್ಕಿಂತೆಯೇ ಅವರ ಕುಟುಂಬದಲ್ಲಿ ಬಿರುಕು ಮೂಡಿತ್ತು. ಹಾಗಾಗಿ ವಿಚ್ಛೇದನದಲ್ಲಿ ಅವರ ಸಂಬಂಧ ಅಂತ್ಯವಾಯ್ತು. ಈ ರೀತಿ ಆಗುತ್ತದೆ ಎಂದು ಅವರ ಅಭಿಮಾನಿಗಳಾಗಲೀ, ಸೆಲೆಬ್ರಿಟಿಗಳಾಗಲೀ ಖಂಡಿತಾ ಊಹಿಸಿರಲಿಲ್ಲ. ಈಗ ಸಮಂತಾ ಅವರು ವಿಚ್ಛೇದನದ ಕುರಿತ ಪೋಸ್ಟ್​ ಅನ್ನು ಡಿಲೀಟ್​ ಮಾಡಿರುವುದು ಯಾಕೆ ಎಂಬುದು ತಿಳಿದುಬಂದಿಲ್ಲ.

ಸಮಂತಾ ಅವರ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಮಾತ್ರ ಈ ಪೋಸ್ಟ್​ ಮಾಯವಾಗಿದೆ. ಆದರೆ ನಾಗ ಚೈತನ್ಯ ಅವರ ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ನಲ್ಲಿ ಹಾಗೆಯೇ ಇದೆ. ‘ಸಾಕಷ್ಟು ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧ ಇರಲಿದೆ ಎಂದು ನಂಬಿದ್ದೇವೆ. ಈ ಕಷ್ಟದ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿ ಅಂತ ಅಭಿಮಾನಿಗಳು, ಮಾಧ್ಯಮದವರು ಮತ್ತು ಹಿತೈಷಿಗಳಲ್ಲಿ ಮನವಿ ಮಾಡುತ್ತೇವೆ. ಜೀವನದಲ್ಲಿ ಮುಂದಕ್ಕೆ ಸಾಗಲು ನಮಗೆ ಬೇಕಾಗಿರುವ ಖಾಸಗಿತನಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳಿಕೊಳ್ಳುತ್ತೇವೆ’ ಎಂದು ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು.

ಈ ಸ್ಟಾರ್​ ಜೋಡಿಯ ವಿಚ್ಛೇದನದ ಬಗ್ಗೆ ಹರಿದಾಡಿದ ಸುದ್ದಿಗಳು ಒಂದೆರಡಲ್ಲ. ಆದರೆ ಅವುಗಳಿಗೆ ಸಮಂತಾ ಅವರಾಗಲೀ, ನಾಗ ಚೈತನ್ಯ ಅವರಾಗಲೀ ಪ್ರತಿಕ್ರಿಯೆ ನೀಡಿದ್ದು ತೀರಾ ಕಡಿಮೆ. ಸಮಂತಾ ಈಗ ಸಂಪೂರ್ಣವಾಗಿ ವೃತ್ತಿ ಜೀವನದ ಬಗ್ಗೆ ಗಮನ ಹರಿಸಿದ್ದಾರೆ. ಡಿವೋರ್ಸ್​ ಪಡೆದ ನಂತರ ನಾಗ ಚೈತನ್ಯ ಅವರ ಎಲ್ಲ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಿಂದ ಸಮಂತಾ ಡಿಲೀಟ್​ ಮಾಡಿದ್ದರು.

ಇದನ್ನೂ ಓದಿ:

ಸಮಂತಾ ದೂರಾದ ಬಳಿಕ ನಾಗ ಚೈತನ್ಯ ಜತೆ ಖಾಸಗಿ ವಿಮಾನದಲ್ಲಿ ಕಾಣಿಸಿಕೊಂಡ ಈ ಸುಂದರಿ ಯಾರು?

‘ಹೂ ಅಂತೀಯಾ ಮಾವ..’ ಹಾಡಿಗಾಗಿ ಸಮಂತಾಗೆ 5 ಕೋಟಿ ರೂ. ಸಂಭಾವನೆ? ಅಷ್ಟು ದುಬಾರಿ ಯಾಕೆ?

Follow us on

Related Stories

Most Read Stories

Click on your DTH Provider to Add TV9 Kannada