AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆರ್​ಆರ್​ಆರ್​’ ಚಿತ್ರದ ಪ್ರಚಾರಕ್ಕೆ ಹಾಕಿದ ಹಣ ನಿಜಕ್ಕೂ ದೊಡ್ಡ ವ್ಯರ್ಥ ಎಂದ ಖ್ಯಾತ ನಿರ್ದೇಶಕ

‘ಆರ್​ಆರ್​ಆರ್​’ ತಂಡ ನಾನಾ ನಗರಗಳಿಗೆ ತೆರಳಿ ಸುದ್ದಿಗೋಷ್ಠಿ ನಡೆಸಿತ್ತು. ಮುಂಬೈ ಹಾಗೂ ಚೆನ್ನೈನಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀ-ರಿಲೀಸ್​ ಇವೆಂಟ್​ ನಡೆಸಲಾಗಿತ್ತು. ಆನ್​ಲೈನ್​ನಲ್ಲೂ ಚಿತ್ರಕ್ಕೆ ಪ್ರಚಾರ ನೀಡುವ ಕೆಲಸ ನಡೆದಿತ್ತು.

‘ಆರ್​ಆರ್​ಆರ್​’ ಚಿತ್ರದ ಪ್ರಚಾರಕ್ಕೆ ಹಾಕಿದ ಹಣ ನಿಜಕ್ಕೂ ದೊಡ್ಡ ವ್ಯರ್ಥ ಎಂದ ಖ್ಯಾತ ನಿರ್ದೇಶಕ
ರಾಜಮೌಳಿ, ಜ್ಯೂ. ಎನ್​ಟಿಆರ್​, ರಾಮ್​ ಚರಣ್​
TV9 Web
| Edited By: |

Updated on: Jan 08, 2022 | 5:01 PM

Share

ಸ್ಟಾರ್​ ನಟರ ಚಿತ್ರಗಳಲ್ಲಿ ಪ್ರಚಾರಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಸಿನಿಮಾ ದೊಡ್ಡ ಮೊತ್ತದಲ್ಲಿ ಹಣ ಗಳಿಕೆ ಮಾಡಬೇಕು ಎಂದರೆ ಪ್ರಚಾರ ಅತಿ ಮುಖ್ಯ. ಈ ಕಾರಣಕ್ಕೆ ನಿರ್ಮಾಪಕರು ಪ್ರಮೋಷನ್​ಗೂ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಟಾಲಿವುಡ್​ನಲ್ಲಿ ಸಿದ್ಧವಾಗಿರುವ ‘ಆರ್​ಆರ್​ಆರ್​’ ಚಿತ್ರದ ಪ್ರಚಾರಕ್ಕೂ ನಿರ್ಮಾಪಕರು ದೊಡ್ಡ ಮೊತ್ತದ ಹಣವನ್ನು ಖಾಲಿ ಮಾಡಿದ್ದಾರೆ. ಆದರೆ, ಸಿನಿಮಾ ರಿಲೀಸ್​​ ದಿನಾಂಕ ಮುಂದೆ ಹೋಗಿರುವುದರಿಂದ ಎಲ್ಲವೂ ವ್ಯರ್ಥವಾಗಿದೆ.

‘ಆರ್​ಆರ್​ಆರ್​’ ತಂಡ ನಾನಾ ನಗರಗಳಿಗೆ ತೆರಳಿ ಸುದ್ದಿಗೋಷ್ಠಿ ನಡೆಸಿತ್ತು. ಮುಂಬೈ ಹಾಗೂ ಚೆನ್ನೈನಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀ-ರಿಲೀಸ್​ ಇವೆಂಟ್​ ನಡೆಸಲಾಗಿತ್ತು. ಆನ್​ಲೈನ್​ನಲ್ಲೂ ಚಿತ್ರಕ್ಕೆ ಪ್ರಚಾರ ನೀಡುವ ಕೆಲಸ ನಡೆದಿತ್ತು. ಹೀಗಾಗಿ, ಈ ಸಿನಿಮಾ ಪ್ರಮೋಷನ್​ಗೆ ನಿರ್ಮಾಪಕರು 20 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಈ ಹಣವೆಲ್ಲವೂ ಈಗ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ.

ಬಾಲಿವುಡ್​ನ ಖ್ಯಾತ ನಿರ್ದೇಶಕ ಅನೀಸ್ ಬಾಜ್ಮೀ ಈ ಬಗ್ಗೆ ಮಾತನಾಡಿದ್ದಾರೆ. ‘ಆರ್‌ಆರ್‌ಆರ್, ‘ಜೆರ್ಸಿ’ಯಂತಹ ಚಿತ್ರಗಳ ಉದಾಹರಣೆ ತೆಗೆದುಕೊಳ್ಳಿ. ಅವರು ತಮ್ಮ ಚಿತ್ರಗಳಿಗೆ ಸಾಕಷ್ಟು ಪ್ರಚಾರಗಳನ್ನು ಮಾಡಿದ್ದಾರೆ. ಈ ಹಣ ವ್ಯರ್ಥವಾಗಿದೆ​. ಅವರು ಚಿತ್ರವನ್ನು ಬಿಡುಗಡೆ ಮಾಡಲು ಮತ್ತೆ ದಿನಾಂಕ ಘೋಷಣೆ ಮಾಡಿದಾಗ ಪ್ರಚಾರ ಮಾಡಲೇಬೇಕು. ಒಟ್ಟಾರೆ ಇದೊಂದು ದೊಡ್ಡ ನಷ್ಟ’ ಎಂದಿದ್ದಾರೆ ಅವರು.

‘ಆರ್​ಆರ್​ಆರ್​’ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ. ಈ ಸಿನಿಮಾ ಬರೋಬ್ಬರಿ 400 ಕೋಟಿ ರೂಪಾಯಿ ವೆಚ್ಛದಲ್ಲಿ ಸಿದ್ಧವಾಗಿದೆ. ಈ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ ಎಂಬುದಕ್ಕೆ ಟ್ರೇಲರ್ ಹಾಗೂ ಟೀಸರ್​ ಸಾಕ್ಷ್ಯ ನೀಡಿದೆ. ಪ್ರತಿ ದೃಶ್ಯಕ್ಕೂ ಹೆಚ್ಚು ಹಣ ಸುರಿಯಲಾಗಿದೆ. ಕೇವಲ ಭಾರತದ ಸೆಟ್​ಗಳಲ್ಲಿ ಮಾತ್ರವಲ್ಲದೆ, ವಿದೇಶದಲ್ಲೂ ಸಿನಿಮಾದ ಶೂಟಿಂಗ್​ ಮಾಡಲಾಗಿದೆ. ಇನ್ನು, ಸ್ಟಾರ್​ ನಟರ ದಂಡೇ ಚಿತ್ರದಲ್ಲಿದೆ. ಜ್ಯೂ.ಎನ್​ಟಿಆರ್​, ರಾಮ್​ ಚರಣ್​, ಆಲಿಯಾ ಭಟ್​, ಅಜಯ್​ ದೇವಗನ್​ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಇವರು ಕೂಡ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ಈ ಎಲ್ಲಾ ಕಾರಣದಿಂದ ಸಿನಿಮಾದ ಬಜೆಟ್​ 400 ಕೋಟಿ ರೂಪಾಯಿ ಮೀರಿದೆ.

ಇದನ್ನೂ ಓದಿ: ಮತ್ತೆ ಸದ್ದು ಮಾಡಿದ ಸಮಂತಾ; ಒಂದು ಗಂಟೆಯಲ್ಲಿ 20 ಲಕ್ಷ ವೀಕ್ಷಣೆ ಕಂಡ ವಿಡಿಯೋ ಸಾಂಗ್​

ಸಿನಿಪ್ರಿಯರಿಗೆ ನಿರಾಸೆ ಮೂಡಿಸಿದ ‘ಆರ್​ಆರ್​ಆರ್​’; ಅಧಿಕೃತವಾಗಿ ಚಿತ್ರದ ರಿಲೀಸ್​ ಡೇಟ್​ ಮುಂದೂಡಿಕೆ

Follow Us
TV9 Web
TV9 Web

TV9 Kannada

Read More
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ