ಮತ್ತೆ ಸದ್ದು ಮಾಡಿದ ಸಮಂತಾ; ಒಂದು ಗಂಟೆಯಲ್ಲಿ 20 ಲಕ್ಷ ವೀಕ್ಷಣೆ ಕಂಡ ವಿಡಿಯೋ ಸಾಂಗ್​

ಮತ್ತೆ ಸದ್ದು ಮಾಡಿದ ಸಮಂತಾ; ಒಂದು ಗಂಟೆಯಲ್ಲಿ 20 ಲಕ್ಷ ವೀಕ್ಷಣೆ ಕಂಡ ವಿಡಿಯೋ ಸಾಂಗ್​
ಸಮಂತಾ

‘ಊ ಅಂಟವಾ ಮಾವ.. ಊಊ ಅಂಟವಾ..’ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್​ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿನ ವಿಡಿಯೋ ಸಾಂಗ್ ರಿಲೀಸ್​​ ಆಗಿ ಸದ್ದು ಮಾಡುತ್ತಿದೆ.

TV9kannada Web Team

| Edited By: Rajesh Duggumane

Jan 07, 2022 | 7:20 PM


ಸದ್ಯ ಎಲ್ಲೆಲ್ಲೂ ಸಮಂತಾ (Samantha) ಅವರದ್ದೇ ಹವಾ. ‘ಪುಷ್ಪ’ ಸಿನಿಮಾದಲ್ಲಿ ಅವರು ಹೆಜ್ಜೆ ಹಾಕಿರುವ ‘ಊ ಅಂಟವಾ ಮಾವ.. ಊಊ ಅಂಟವಾ..’ ಹಾಡಿನ ಲಿರಿಕಲ್​ ವಿಡಿಯೋ ಸಖತ್​ ಹಿಟ್​ ಆಗಿದೆ. 12 ಕೋಟಿಗೂ ಅಧಿಕ ಜನರು ಇದನ್ನು ವೀಕ್ಷಣೆ ಮಾಡಿರುವುದು ಈ ಲಿರಿಕಲ್​ ಹಾಡಿನ ಹೆಚ್ಚುಗಾರಿಕೆ. ಈ ಹಾಡಿನಿಂದ ‘ಪುಷ್ಪ’ ಸಿನಿಮಾದ ಹವಾ ಹೆಚ್ಚಾಗಿತ್ತು ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಈಗ ಈ ಹಾಡಿನ ವಿಡಿಯೋ ಸಾಂಗ್​ ರಿಲೀಸ್​ ಮಾಡಲಾಗಿದೆ. ಈಗ ಸಮಂತಾ ಡ್ಯಾನ್ಸ್​​ಅನ್ನು ಸಂಪೂರ್ಣವಾಗಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.

‘ಊ ಅಂಟವಾ ಮಾವ.. ಊಊ ಅಂಟವಾ..’ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್​ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿನ ವಿಡಿಯೋ ಸಾಂಗ್ ರಿಲೀಸ್​​ ಆಗಿ ಸದ್ದು ಮಾಡುತ್ತಿದೆ. ಪಡ್ಡೆ ಹುಡುಗರಿಗೆ ನಶೆ ಏರಿಸುವಂತಿರುವ ಈ ವಿಡಿಯೋ ಸಾಂಗ್​​ನಲ್ಲಿ ಸಮಂತಾ ಅವರು ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ಸಾಂಗ್​ ಬಿಡುಗಡೆ ಆಗಿ ಕೇವಲ ಒಂದು ಗಂಟೆಗೆ 20 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಸಮಂತಾ ಅವರಿಗೆ ಈಗ ಭರ್ಜರಿ ಡಿಮ್ಯಾಂಡ್​ ಇದೆ. ಅದೇ ರೀತಿ ಅವರು ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ‘ಪುಷ್ಪ’ ಸಿನಿಮಾದ ಈ ಹಾಡಿನಲ್ಲಿ ನರ್ತಿಸಲು ಸಮಂತಾ ಅವರು ಬರೋಬ್ಬರಿ 1.5 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಅವರಿಗೆ ಇಷ್ಟು ದೊಡ್ಡ ಸಂಭಾವನೆ ಕೊಟ್ಟಿದ್ದಕ್ಕೂ ಸಾರ್ಥಕ ಎನ್ನುವ ಮಾತು ಅಭಿಮಾನಿಗ ವಲಯದಿಂದ ಕೇಳಿ ಬರುತ್ತಿದೆ.

‘ಊ ಅಂಟಾವಾ ಮಾವ ಊಊ ಅಂಟಾವಾ ಮಾವ’ ಹಾಡಿನಲ್ಲಿ ಗಂಡಸರ ಕುರಿತು ಸಾಹಿತ್ಯ ಬರೆಯಲಾಗಿದೆ. ಹುಡುಗಿಯರನ್ನು ನೋಡಿದಾಗ ಗಂಡಸರು ಯಾವ ರೀತಿ ವರ್ತಿಸುತ್ತಾರೆ ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ. ಗಂಡಸರೆಲ್ಲರೂ ಕಾಮುಕ ಬುದ್ಧಿಯವರು ಎಂಬರ್ಥ ಬರುವ ರೀತಿಯಲ್ಲಿ ಈ ಹಾಡಿನ ಸಾಹಿತ್ಯ ಇದೆ ಎಂದು ಕೆಲವರು ಆರೋಪಿಸಿದ್ದಾರೆ. ಹಾಗಾಗಿ, ಆಂಧ್ರ ಪ್ರದೇಶದಲ್ಲಿ ಪುರುಷರ ಸಂಘಟನೆಯೊಂದು ‘ಪುಷ್ಪ’ ಚಿತ್ರತಂಡದ ವಿರುದ್ಧ ಕೇಸ್​ ದಾಖಲಿಸಿತ್ತು.

ಇದನ್ನೂ ಓದಿ: ‘ನೀವಿಲ್ಲದಿದ್ದರೆ ನಾನೇನು ಮಾಡುತ್ತಿದ್ದೆ’;  ಜೀವನದ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಪರಿಚಯಿಸಿದ ಸಮಂತಾ 

Samantha: ‘ಹೂ ಅಂತೀಯಾ ಮಾವ..’ ಡ್ಯಾನ್ಸ್​ ಹಿಂದಿನ ಕಷ್ಟವನ್ನು ವಿಡಿಯೋ ಮೂಲಕ ವಿವರಿಸಿದ ಸಮಂತಾ  

 

Follow us on

Related Stories

Most Read Stories

Click on your DTH Provider to Add TV9 Kannada