‘ನೀವಿಲ್ಲದಿದ್ದರೆ ನಾನೇನು ಮಾಡುತ್ತಿದ್ದೆ’;  ಜೀವನದ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಪರಿಚಯಿಸಿದ ಸಮಂತಾ

ಸಮಂತಾ ಜೀವನ ಈಗ ಸಂಪೂರ್ಣವಾಗಿ ಬದಲಾಗಿದೆ. ಅವರ ಆದ್ಯತೆಗಳು ಬದಲಾಗಿವೆ. ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರದಲ್ಲಿ ಅವರು ಸುಮ್ಮನೆ ಬೇಸರ ಮಾಡಿಕೊಂಡು ಕೂತಿಲ್ಲ. ಸುತ್ತಾಟ ನಡೆಸುತ್ತಾ, ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿ ಎಲ್ಲವನ್ನೂ ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ.

‘ನೀವಿಲ್ಲದಿದ್ದರೆ ನಾನೇನು ಮಾಡುತ್ತಿದ್ದೆ’;  ಜೀವನದ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಪರಿಚಯಿಸಿದ ಸಮಂತಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 05, 2022 | 11:45 AM

ಸಮಂತಾ (Samantha) ಅವರು ಟಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಸಾಲುಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ವಿಚ್ಛೇದನದ ನಂತರದಲ್ಲಿ ಸಮಂತಾ ವೃತ್ತಿ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದರ ಜತೆಗೆ ಗೆಳೆಯರ ಜತೆಯೂ ಸಮಂತಾ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ದೇಶ, ವಿದೇಶದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಹೊಸ ವರ್ಷದ ಪ್ರಯುಕ್ತ ಗೆಳೆಯರ ಜತೆ ಅವರು ಗೋವಾಗೆ ತೆರಳಿದ್ದರು. ಅವರು ಈಗ ಅವರ ಜೀವನದ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಪರಿಚಯಿಸಿದ್ದಾರೆ. ಈ ಬಗ್ಗೆ ಅವರು ವಿಶೇಷವಾಗಿ ಬರೆದುಕೊಂಡಿದ್ದಾರೆ.

ಸಮಂತಾ ಜೀವನ ಈಗ ಸಂಪೂರ್ಣವಾಗಿ ಬದಲಾಗಿದೆ. ಅವರ ಆದ್ಯತೆಗಳು ಬದಲಾಗಿವೆ. ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರದಲ್ಲಿ ಅವರು ಸುಮ್ಮನೆ ಬೇಸರ ಮಾಡಿಕೊಂಡು ಕೂತಿಲ್ಲ. ಸುತ್ತಾಟ ನಡೆಸುತ್ತಾ, ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿ ಎಲ್ಲವನ್ನೂ ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ ಗೆಳೆಯರ ಜತೆ ಸಮಂತಾ ಹೆಚ್ಚು ಸಮಯ ಕಳೆಯುತ್ತಿದ್ದಾರೆ.

ವೆನ್ನೆಲ್ಲಾ ಕಿಶೋರ್​ ಹಾಗೂ ರಾಹುಲ್​ ರವೀಂದ್ರ ಜತೆ ಸಮಂತಾ ಹರಟೆ ಹೊಡೆಯುತ್ತಾ ಕೂತಿದ್ದಾರೆ. ಈ ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ, ‘ನೀವಿಲ್ಲದಿದ್ದರೆ ನಾನೇನು ಮಾಡುತ್ತಿದ್ದೆ’ ಎಂದು ಬರೆದುಕೊಂಡಿದ್ದಾರೆ. ಸದ್ಯ, ಈ ಫೋಟೋ ವೈರಲ್​ ಆಗಿದೆ. ಸಮಂತಾ ಅವರ ಖುಷಿಯನ್ನು ನೋಡಿ ಅಭಿಮಾನಿಗಳು ಸಂತಸಪಟ್ಟಿದ್ದಾರೆ.

ರಾಹುಲ್​ ರವೀಂದ್ರ ಅವರು ನಟ. ಸಮಂತಾ ಆಪ್ತ ಗೆಳತಿ ಚಿನ್ಮಯ್​ ಪ್ರಸಾದ್​ ಅವರ ಪತಿ. ಹೀಗಾಗಿ, ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇದೆ. ವೆನ್ನೆಲ್ಲಾ ಕಿಶೋರ್​ ಟಾಲಿವುಡ್​ನ ಖ್ಯಾತ ಕಾಮಿಡಿಯನ್​. ಸಮಂತಾ ಹಾಗೂ ಕಿಶೋರ್​ ನಡುವೆ ಒಳ್ಳೆಯ ಗೆಳೆತನ ಇದೆ.

ಸಿನಿಮಾ ವಿಚಾರದಲ್ಲಿ ಸಮಂತಾ ಬಗ್ಗೆ ಸಾಕಷ್ಟು ಸುದ್ದಿಗಳು ಹುಟ್ಟಿಕೊಂಡಿದೆ. ಜ್ಯೂ.ಎನ್​ಟಿಆರ್​, ಮಹೇಶ್​ ಬಾಬು ಮುಂದಿನ ಸಿನಿಮಾಗೆ ಸಮಂತಾ ನಾಯಕಿ ಎನ್ನಲಾಗಿದೆ. ಅಮೇಜಾನ್​ ಪ್ರೈಮ್​ನಲ್ಲಿ ಸಿದ್ಧವಾಗುತ್ತಿರುವ ವೆಬ್​ ಸೀರಿಸ್​ನಲ್ಲಿ ಸಮಂತಾ ನಟಿಸಲಿದ್ದಾರೆ ಎನ್ನಲಾಗಿದೆ. ಇದಕ್ಕೆ ರಾಜ್​ ಮತ್ತು ಡಿಕೆ ನಿರ್ದೇಶನ ಇರಲಿದೆಯಂತೆ. ಇದಲ್ಲದೆ, ಹಲವು ಸಿನಿಮಾಗಳ ಕೆಲಸಗಳು ಪ್ರಗತಿಯಲ್ಲಿವೆ. ಸಮಂತಾ ಬೇಡಿಕೆ ದಿನಕಳೆದಂತೆ ಹೆಚ್ಚುತ್ತಲೇ ಇದೆ.

ಇದನ್ನೂ ಓದಿ: ‘ನಾನು ತಪ್ಪು ಆಯ್ಕೆಗಳನ್ನು ಮಾಡುತ್ತಲೇ ಇದ್ದೆ’; ಸಮಂತಾ ಹೀಗೆ ಮರುಗಿದ್ದೇಕೆ?

ಪೂಜಾ ಹೆಗ್ಡೆ ಆಫರ್​ ಬಾಚಿಕೊಂಡ ಸಮಂತಾ; ಮಹೇಶ್​ ಬಾಬುಗೆ ಜತೆಯಾಗಲಿದ್ದಾರೆ ನಟಿ?

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್