‘ನಾನು ತಪ್ಪು ಆಯ್ಕೆಗಳನ್ನು ಮಾಡುತ್ತಲೇ ಇದ್ದೆ’; ಸಮಂತಾ ಹೀಗೆ ಮರುಗಿದ್ದೇಕೆ?

‘ನಾನು ತಪ್ಪು ಆಯ್ಕೆಗಳನ್ನು ಮಾಡುತ್ತಲೇ ಇದ್ದೆ’; ಸಮಂತಾ ಹೀಗೆ ಮರುಗಿದ್ದೇಕೆ?
ಸಮಂತಾ

ಸಮಂತಾ ಅದ್ಭುತ ನಟನೆಯ ಮೂಲಕ ಮೆಚ್ಚುಗೆ ಪಡೆದರೂ ಹಿಂದಿ ಚಿತ್ರರಂಗದಿಂದ ಅವರು ಅಂತರ ಕಾಯ್ದುಕೊಂಡಿದ್ದರು. ಹೀಗೇಕೆ ಎಂದು ಕೇಳಿದ ಪ್ರಶ್ನೆಗೆ ಅವರ ಕಡೆಯಿಂದ ಉತ್ತರ ಬಂದಿದೆ.

TV9kannada Web Team

| Edited By: Rajesh Duggumane

Dec 31, 2021 | 5:01 PM

ಸಮಂತಾ (Samantha) ದಕ್ಷಿಣ ಭಾರತದಲ್ಲಿ ಸಾಕಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​ 2’ ಮೂಲಕ ಅವರು ವೆಬ್​ ಸೀರಿಸ್​ ಲೋಕಕ್ಕೂ ಕಾಲಿಟ್ಟಿದ್ದಾರೆ. ಅವರು ನಟಿಸಿದ ಪಾತ್ರಕ್ಕೆ ಬಂದ ಪ್ರತಿಕ್ರಿಯೆ ಅಷ್ಟಿಷ್ಟಲ್ಲ. ಅವರು ನಿರ್ವಹಿಸಿದ ರಾಜಿ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡು ಕೊಂಡಾಡಿದ್ದರು. ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಇದನ್ನು ನೋಡಿ ಸಮಂತಾ ನಿಜಕ್ಕೂ ಖುಷಿಪಟ್ಟಿದ್ದಾರೆ. ಅವರು ಅದ್ಭುತ ನಟನೆಯ ಮೂಲಕ ಮೆಚ್ಚುಗೆ ಪಡೆದರೂ ಹಿಂದಿ ಚಿತ್ರರಂಗದಿಂದ ಅವರು ಅಂತರ ಕಾಯ್ದುಕೊಂಡಿದ್ದರು. ಹೀಗೇಕೆ ಎಂದು ಕೇಳಿದ ಪ್ರಶ್ನೆಗೆ ಅವರ ಕಡೆಯಿಂದ ಉತ್ತರ ಬಂದಿದೆ.

‘ನಾನು ವೆಬ್​ ಸೀರಿಸ್​ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನಿರ್ದೇಶಕರಾದ ರಾಜ್​ ಮತ್ತು ಡಿಕೆ ಮೂಲಕ ಇದು ಸಾಧ್ಯವಾಯಿತು. ನನ್ನ ಪಾತ್ರಕ್ಕೆ ಇಷ್ಟೊಂದು ಮೆಚ್ಚುಗೆ ಬರುತ್ತದೆ ಎಂದು ನಾನು ಊಹಿಸಿಯೂ ಇರಲಿಲ್ಲ. ಹೊಸ ಸವಾಲುಗಳನ್ನು ಸ್ವೀಕರಿಸುವ ಆತ್ಮವಿಶ್ವಾಸ ನನ್ನಲ್ಲಿ ಬಂದಿದೆ’ ಎಂದಿದ್ದಾರೆ ಸಮಂತಾ.

ಬಾಲಿವುಡ್​ನಿಂದ ಅಂತರ ಕಾಯ್ದುಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಸಮಂತಾ ಕಡೆಯಿಂದ ಉತ್ತರ ಸಿಕ್ಕಿದೆ. ‘ದಕ್ಷಿಣ ಭಾರತದಲ್ಲಿ ನಾನು ನೆಲೆ ಕಂಡುಕೊಂಡಿದ್ದೇನೆ. ಕಳೆದ ಎರಡು ವರ್ಷಗಳಿಂದ ನನ್ನ ಮೇಲಿನ ಆತ್ಮವಿಶ್ವಾಸ ಹೆಚ್ಚಿದೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತಹ ಪಾತ್ರಗಳ ಆಯ್ಕೆ ಮಾಡುವುದರಲ್ಲಿ ನಾನು ಎಡವುತ್ತಿದ್ದೆ. ತಪ್ಪು ನಿರ್ಧಾರಗಳನ್ನು ನಾನು ಮಾಡುತ್ತಲೇ ಇದ್ದೆ. ಆದರೆ, ಕಳೆದ ಎರಡು ವರ್ಷಗಳಿಂದ ಇದೆಲ್ಲವೂ ಬದಲಾಗಿದೆ. ಚಾಲೆಂಜ್​ಗಳನ್ನು ಸ್ವೀಕರಿಸುವ ಆತ್ಮವಿಶ್ವಾಸ ಬಂದಿದೆ’ ಎಂಬುದು ಸಮಂತಾ ಮಾತು.

ಇತ್ತೀಚೆಗೆ ಸಮಂತಾ ಅವರು ಜ್ಯೂ. ಎನ್​ಟಿಆರ್​ ಜತೆ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳುವುದರೊಳಗೆ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಅವರ ಬಗ್ಗೆ ಕೇಳಿ ಬಂದ ಹೊಸ ಅಪ್​ಡೇಟ್​ ಕೇಳಿ ಸಮಂತಾ ಅಭಿಮಾನಿಗಳು ಹಿರಿಹಿರಿ ಹಿಗುತ್ತಿದ್ದಾರೆ. ಮಹೇಶ್​ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಮ್ ಅವರು ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ‘ಸರ್ಕಾರಿ ವಾರಿ ಪಾಟ’ ಚಿತ್ರ ತೆರೆಗೆ ಬಂದ ನಂತರದಲ್ಲಿ ಹೊಸ ಸಿನಿಮಾದ ಕೆಲಸ ಆರಂಭಗೊಳ್ಳಲಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಈಗ ಅದು ಸಾಧ್ಯವಾಗುತ್ತಿಲ್ಲ. ಪೂಜಾಗೆ ಡೇಟ್ಸ್​ ಹೊಂದಿಸೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅವರು ಸಿನಿಮಾದಿಂದ ಹೊರ ನಡೆದಿದ್ದಾರಂತೆ. ಈ ಚಿತ್ರ ಸಮಂತಾಗೆ ಸಿಕ್ಕಿದೆ ಎನ್ನಲಾಗಿದೆ.

ಇದನ್ನೂ ಓದಿ: ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದಿಂದ ಇಕ್ಕಟ್ಟಿಗೆ ಸಿಲುಕಿದ ನಿರ್ದೇಶಕಿ; ಪರಿಹಾರ ಕೊಡೋದು ಯಾರು?

ಪೂಜಾ ಹೆಗ್ಡೆ ಆಫರ್​ ಬಾಚಿಕೊಂಡ ಸಮಂತಾ; ಮಹೇಶ್​ ಬಾಬುಗೆ ಜತೆಯಾಗಲಿದ್ದಾರೆ ನಟಿ?

Follow us on

Related Stories

Most Read Stories

Click on your DTH Provider to Add TV9 Kannada