ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದಿಂದ ಇಕ್ಕಟ್ಟಿಗೆ ಸಿಲುಕಿದ ನಿರ್ದೇಶಕಿ; ಪರಿಹಾರ ಕೊಡೋದು ಯಾರು?

ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದಿಂದ ಇಕ್ಕಟ್ಟಿಗೆ ಸಿಲುಕಿದ ನಿರ್ದೇಶಕಿ; ಪರಿಹಾರ ಕೊಡೋದು ಯಾರು?
ಸಮಂತಾ-ನಾಗ ಚೈತನ್ಯ

ಸಮಂತಾ ಹಾಗೂ ನಾಗ ಚೈತನ್ಯ ಜತೆಗೆ ನಂದಿನಿ ರೆಡ್ಡಿ ಒಳ್ಳೆಯ ಫ್ರೆಂಡ್​ಶಿಪ್​ ಹೊಂದಿದ್ದಾರೆ. ಇಬ್ಬರ ನಡುವೆ ಪರಿಚಯ ಬೆಳೆದು, ಒಳ್ಳೆಯ ಬಾಂಧವ್ಯ ಮೂಡೋಕೆ ಇವರು ಪ್ರಮುಖ ಕಾರಣ ಎನ್ನುವ ಮಾತು ಕೂಡ ಇದೆ.

TV9kannada Web Team

| Edited By: Rajesh Duggumane

Dec 30, 2021 | 1:50 PM

ಸಮಂತಾ (Samantha) ಮತ್ತು ನಾಗ ಚೈತನ್ಯ (Naga Chaitanya) ವಿಚ್ಛೇದನದಿಂದ ಸಿನಿಮಾ ಇಂಡಸ್ಟ್ರಿ ಮೇಲೂ ಪ್ರಭಾವ ಉಂಟಾಗಿದೆ. ಇವರ ಜತೆ ಸಿನಿಮಾ ಮಾಡಬೇಕು ಎಂದು ಪ್ಲ್ಯಾನ್​ ಮಾಡಿಕೊಂಡಿದ್ದ ನಿರ್ಮಾಪಕರು ಈ ಆಸೆಯನ್ನು ಕೈ ಬಿಟ್ಟಿದ್ದಾರೆ. ಇವರಿಬ್ಬರೂ ಇನ್ನು ಒಟ್ಟಾಗಿ ನಟಿಸೋಕೆ ಸಾಧ್ಯವಿಲ್ಲ. ಇಬ್ಬರ ಜತೆಯೂ ಕ್ಲೋಸ್​ ಆಗಿದ್ದ ನಿರ್ದೇಶಕರು ಸಂಕಷ್ಟ ಎದುರಿಸುವಂತಾಗಿದೆ. ತೆಲುಗಿನ ಖ್ಯಾತ ನಿರ್ದೇಶಕಿ ನಂದಿನಿ ರೆಡ್ಡಿ ಕೂಡ ಇಂಥ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅವರು ಈ ಸಮಸ್ಯೆಯಿಂದ ಹೊರ ಬರೋದು ಹೇಗೆ ಎನ್ನುವ ಗೊಂದಲದಲ್ಲಿದ್ದಾರೆ.

ಸಮಂತಾ ಹಾಗೂ ನಾಗ ಚೈತನ್ಯ ಜತೆಗೆ ನಂದಿನಿ ರೆಡ್ಡಿ ಒಳ್ಳೆಯ ಫ್ರೆಂಡ್​ಶಿಪ್​ ಹೊಂದಿದ್ದಾರೆ. ಇಬ್ಬರ ನಡುವೆ ಪರಿಚಯ ಬೆಳೆದು, ಒಳ್ಳೆಯ ಬಾಂಧವ್ಯ ಮೂಡೋಕೆ ಇವರು ಪ್ರಮುಖ ಕಾರಣ ಎನ್ನುವ ಮಾತು ಕೂಡ ಇದೆ. ಆದರೆ, ಈ ಬಗ್ಗೆ ಯಾರೂ ಅಧಿಕೃತವಾಗಿ ಮಾತನಾಡಿಲ್ಲ. ಸಮಂತಾ ವಿಚ್ಛೇದನ ಪಡೆದುಕೊಂಡಿರುವ ವಿಚಾರ ನಂದಿನಿಗೆ ಬೇಸರ ತರಿಸಿದೆ. ಈ ಮೊದಲು ಸಮಂತಾ ಹಾಗೂ ನಾಗ ಚೈತನ್ಯ ಒಟ್ಟಾಗಿ ಇರುತ್ತಿದ್ದರು. ಇಬ್ಬರನ್ನೂ ಒಟ್ಟಿಗೆ ಮಾತನಾಡಿಸಬಹುದಿತ್ತು. ಆದರೆ, ಈಗ ಹಾಗಲ್ಲ. ಇಬ್ಬರನ್ನೂ ಬೇರೆಬೇರೆಯಾಗಿಯೇ ಭೇಟಿ ಮಾಡಬೇಕು. ಇಷ್ಟೇ ಆಗಿದ್ದರೆ ಅವರಿಗೆ ಸಮಸ್ಯೆ ಆಗುತ್ತಿರಲಿಲ್ಲ. ಇವರ ಜತೆ ಸಿನಿಮಾ ಮಾಡೋಕೆ ಕಮಿಟ್​ ಆಗಿರುವುದು ಅವರಿಗೆ ಸಂಕಷ್ಟ ತಂದಿದೆ.

ನಂದಿನಿ ಅವರು ಸಿನಿಮಾ ಕೆಲಸವೊಂದರಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಕೆಲಸಗಳು ಪೂರ್ಣಗೊಂಡ ನಂತರದಲ್ಲಿ ಅವರು ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಳ್ಳಬೇಕು. ಅದು ಯಾವುದು ಎನ್ನುವ ಪ್ರಶ್ನೆ ಈಗ ಅವರನ್ನು ಕಾಡಿದೆ. ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರಿಗೂ ನಂದಿನಿ ಒಂದೊಂದು ಕಥೆ ಹೇಳಿದ್ದಾರೆ. ವೈಜಯಂತಿ ಮೂವೀಸ್​ ಪ್ರೊಡಕ್ಷನ್​ ಹೌಸ್​ ಅಡಿಯಲ್ಲಿ ಮಾಡುತ್ತಿರುವ ಸಿನಿಮಾಗೆ ನಾಗ ಚೈತನ್ಯ ಹೀರೋ. ಇನ್ನು, ಎಸ್​ಆರ್​ಟಿ ಎಂಟರ್​ಟೇನ್​ಮೆಂಟ್​ ಬ್ಯಾನರ್​ ಅಡಿಯಲ್ಲಿ ಮಾಡುತ್ತಿರುವ ಚಿತ್ರಕ್ಕೆ ಸಮಂತಾ ನಾಯಕಿ. ಈ ಸಿನಿಮಾದಲ್ಲಿ ಯಾವುದನ್ನು ಮೊದಲು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಇಕ್ಕಟ್ಟಿನಲ್ಲಿ ನಂದಿನಿ ಇದ್ದಾರೆ.

ನಾಗ ಚೈತನ್ಯ ಸಿನಿಮಾವನ್ನು ಮೊದಲು ಕೈಗೆತ್ತಿಕೊಂಡರೆ ಸಮಂತಾಗೆ ಬೇಸರ ಆಗಬಹುದು. ಸಮಂತಾ ಸಿನಿಮಾವನ್ನು ಮೊದಲು ಆರಂಭಿಸಿದರೆ ನಾಗ ಚೈತನ್ಯಗೆ ಬೇಸರ ಆಗಬಹುದು. ಹೀಗಾಗಿ, ಯಾವುದನ್ನು ಮೊದಲು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಪ್ರಶ್ನೆ ಅವರನ್ನು ಕೊರೆಯುತ್ತಿದೆ. ಹೀಗಾಗಿ, ಅವರು ಇಬ್ಬರಲ್ಲಿ ಒಬ್ಬರಿಗೆ ಮನವರಿಕೆ ಮಾಡಿಕೊಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಇದನ್ನೂ ಓದಿ: ವಿಚ್ಛೇದನದ ನಂತರ ಮೊದಲ ಬಾರಿಗೆ ಒಂದೇ ಕಡೆ ಕಾಣಿಸಿಕೊಂಡ ಸಮಂತಾ-ನಾಗ ಚೈತನ್ಯ; ಹೇಗಿತ್ತು ರಿಯಾಕ್ಷನ್​?

Follow us on

Related Stories

Most Read Stories

Click on your DTH Provider to Add TV9 Kannada