ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ ದಕ್ಷಿಣದ ಹೀರೋಗಳು; ಯಶಸ್ಸಿನ ನಿರೀಕ್ಷೆಯಲ್ಲಿ ವಿಜಯ್​ ದೇವರಕೊಂಡ

 ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ ದಕ್ಷಿಣದ ಹೀರೋಗಳು; ಯಶಸ್ಸಿನ ನಿರೀಕ್ಷೆಯಲ್ಲಿ ವಿಜಯ್​ ದೇವರಕೊಂಡ
ವಿಜಯ್​ ದೇವರಕೊಂಡ

 ‘ಲೈಗರ್​’ ಸಿನಿಮಾ ಹಿಂದಿ, ತೆಲುಗು ಮಾತ್ರವಲ್ಲದೆ, ಕನ್ನಡ, ತಮಿಳು ಹಾಗೂ ಮಲಯಾಳಂನಲ್ಲೂ ತೆರೆಗೆ ಬರುತ್ತಿದೆ. ಈಗಾಗಲೇ ವಿಜಯ್​ ದೇವರಕೊಂಡ ಹೆಸರು ಬಾಲಿವುಡ್​ನಲ್ಲಿ ಒಂದು ಹಂತಕ್ಕೆ ಮನೆ ಮಾತಾಗಿದೆ.

TV9kannada Web Team

| Edited By: Madan Kumar

Dec 31, 2021 | 11:52 AM


ದಕ್ಷಿಣ ಭಾರತದ ಹಲವು ಸ್ಟಾರ್​ ನಟರು ಈಗ ಬಾಲಿವುಡ್​ಗೆ (Bollywood) ಕಾಲಿಡುತ್ತಿದ್ದಾರೆ. ಈಗಾಗಲೇ ಹಲವು ಹೀರೋಗಳು ಇದರಲ್ಲಿ ಯಶಸ್ಸು ಪಡೆದಿದ್ದಾರೆ. ಈಗ ವಿಜಯ್​ ದೇವರಕೊಂಡ (Vijay Devarakonda) ಕೂಡ ಹೀಗೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ. ಪುರಿ ಜಗನ್ನಾಥ (Puri Jagannadh) ನಿರ್ದೇಶನದ ‘ಲೈಗರ್​’ (Liger) ಚಿತ್ರದ ಮೂಲಕ ಅವರು ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರಿಗೆ ಈ ಸಿನಿಮಾದಿಂದ ಬಾಲಿವುಡ್​ನಲ್ಲಿ ಭದ್ರ ಬುನಾದಿ ಸಿಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

‘ಲೈಗರ್​’ ಸಿನಿಮಾ ಹಿಂದಿ, ತೆಲುಗು ಮಾತ್ರವಲ್ಲದೆ, ಕನ್ನಡ, ತಮಿಳು ಹಾಗೂ ಮಲಯಾಳಂನಲ್ಲೂ ತೆರೆಗೆ ಬರುತ್ತಿದೆ. ಈಗಾಗಲೇ ವಿಜಯ್​ ದೇವರಕೊಂಡ ಹೆಸರು ಬಾಲಿವುಡ್​ನಲ್ಲಿ ಒಂದು ಹಂತಕ್ಕೆ ಮನೆ ಮಾತಾಗಿದೆ. ಇದಕ್ಕೆ ಕಾರಣ ಶಾಹಿದ್ ಕಪೂರ್​ ನಟನೆಯ ‘ಕಬೀರ್​ ಸಿಂಗ್​’ ಚಿತ್ರ. ವಿಜಯ್​ ದೇವರಕೊಂಡ ನಟನೆಯ ‘ಅರ್ಜುನ್​ ರೆಡ್ಡಿ’ ಚಿತ್ರದ ರಿಮೇಕ್​ ಇದಾಗಿದೆ.  ಈ ಕಾರಣಕ್ಕೆ ಬಾಲಿವುಡ್​ನ ಅನೇಕರು ಮೂಲ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಹೀಗಾಗಿ, ವಿಜಯ್​ ಬಗ್ಗೆ ಅನೇಕರಿಗೆ ತಿಳಿದಿದೆ.

ವಿಜಯ್​ ದೇವರಕೊಂಡ 2011ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ನುವ್ವಿಲ್ಲಾ’ ಅವರ ಮೊದಲ ಚಿತ್ರ. 2012ರಲ್ಲಿ ‘ಲೈಫ್​ ಈಸ್​ ಬ್ಯೂಟಿಫುಲ್​’ಚಿತ್ರ ರಿಲೀಸ್​ ಆಯಿತು. 2016ರಲ್ಲಿ ತೆರೆಗೆ ಬಂದ ‘ಪೆಳ್ಳಿ ಚೂಪುಲು’ ವಿಜಯ್​ಗೆ ಒಂದು ಹಂತದ ಯಶಸ್ಸು ತಂದುಕೊಟ್ಟಿತು. ಆ ಬಳಿಕ ಬಂದ ‘ಅರ್ಜುನ್​ ರೆಡ್ಡಿ’ ಚಿತ್ರ ವಿಜಯ್​ ವೃತ್ತಿ ಜೀವನದ ದಿಕ್ಕನ್ನೇ ಬದಲಿಸಿತು. 2018ರ ‘ಗೀತ ಗೋವಿಂದಂ’ ಚಿತ್ರ ಕೂಡ ವಿಜಯ್​ಗೆ ದೊಡ್ಡ ಹಿಟ್​ ತಂದುಕೊಟ್ಟಿತು. ಇದಾದ ನಂತರ ಹಲವು ಸಿನಿಮಾಗಳು ತೆರೆಗೆ ಬಂದವು. ಈಗ ‘ಲೈಗರ್​’ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.

ಆಗಸ್ಟ್​ 25ಕ್ಕೆ ‘ಲೈಗರ್​’ ಸಿನಿಮಾ ತೆರೆಗೆ ಬರುತ್ತಿದೆ. ಇದಕ್ಕೆ ಇನ್ನೂ 8 ತಿಂಗಳು ಬಾಕಿ ಇದೆ. ಅದಕ್ಕೂ ಮೊದಲೇ ಸಿನಿಮಾ ಎಲ್ಲ ಕಡೆಗಳಲ್ಲೂ ಮನೆ ಮಾತಾಗಬೇಕು ಎನ್ನುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ. ಒಂದು ಕಡೆ ಶೂಟಿಂಗ್​​​ ನಡೆಯುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಪ್ರಚಾರ ಕಾರ್ಯ ನಡೆಸಲು ಚಿತ್ರತಂಡ ತಂತ್ರ ರೂಪಿಸಿದೆ.

ಈ ಸಿನಿಮಾದಲ್ಲಿ ಮೈಕಟ್​ ಟೈಸನ್​ ನಟಿಸುತ್ತಿರುವ ವಿಚಾರ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಬಾಕ್ಸಿಂಗ್​ ಜಗತ್ತಿನಲ್ಲಿ ಅಮೆರಿಕದ ಮೈಕ್​ ಟೈಸನ್​ ಅವರದ್ದು ದೊಡ್ಡ ಹೆಸರು. ಎದುರಾಳಿಗಳಿಗೆ ನಡುಕ ಹುಟ್ಟಿಸುವ ಅವರ ಬಾಕ್ಸಿಂಗ್​ ಪರಾಕ್ರಮಕ್ಕೆ ಸರಿಸಾಟಿ ಆಗಬಲ್ಲ ಮತ್ತೊಬ್ಬ ವ್ಯಕ್ತಿಯೇ ಇಲ್ಲ. ಇದೇ ಮೊದಲ ಬಾರಿಗೆ ಅವರು ಭಾರತೀಯ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಮತ್ತು ಮೈಕ್​ ಟೈಸನ್​ ಮುಖಾಮುಖಿ ಆಗುವ ದೃಶ್ಯಗಳನ್ನು ನೋಡಲು ಫ್ಯಾನ್ಸ್​ ಎಗ್ಸೈಟ್​ ಆಗಿದ್ದಾರೆ.  ಈ ಸಿನಿಮಾವನ್ನು ಪುರಿ ಜಗನ್ನಾಥ್​, ಕರಣ್​ ಜೋಹರ್​, ಚಾರ್ಮಿ ಕೌರ್​, ಅಪೂರ್ವ ಮೆಹ್ತಾ, ಹೀರೂ ಯಶ್​ ಜೋಹರ್​ ಸೇರಿಕೊಂಡು ನಿರ್ಮಿಸುತ್ತಿದ್ದಾರೆ. ಅನನ್ಯಾ ಪಾಂಡೆ ಚಿತ್ರದ ನಾಯಕಿ. ಈ ಸಿನಿಮಾದ ಬಜೆಟ್​ 125 ಕೋಟಿ ರೂಪಾಯಿಗೂ ಅಧಿಕವಾಗಿದೆ. ಕನ್ನಡದಲ್ಲೂ ಈ ಸಿನಿಮಾ ತೆರೆಗೆ ಬರುತ್ತಿದೆ.

ಇದನ್ನೂ ಓದಿ: ವಿಜಯ್​ ದೇವರಕೊಂಡ ನಟನೆಯ ‘ಲೈಗರ್​’ ಚಿತ್ರದಿಂದ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಬಿಗ್​ ಗಿಫ್ಟ್​

Follow us on

Related Stories

Most Read Stories

Click on your DTH Provider to Add TV9 Kannada