ಪೂಜಾ ಹೆಗ್ಡೆ ಆಫರ್​ ಬಾಚಿಕೊಂಡ ಸಮಂತಾ; ಮಹೇಶ್​ ಬಾಬುಗೆ ಜತೆಯಾಗಲಿದ್ದಾರೆ ನಟಿ?

ತ್ರಿವಿಕ್ರಮ್​ ಹಾಗೂ ಸಮಂತಾ ನಡುವೆ ಒಳ್ಳೆಯ ಗೆಳೆತನವಿದೆ. ಇನ್ನು, ಸಮಂತಾ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಈ ಆಫರ್​ ನೀಡಿದ್ದಾರೆ ತ್ರಿವಿಕ್ರಮ್​.

ಪೂಜಾ ಹೆಗ್ಡೆ ಆಫರ್​ ಬಾಚಿಕೊಂಡ ಸಮಂತಾ; ಮಹೇಶ್​ ಬಾಬುಗೆ ಜತೆಯಾಗಲಿದ್ದಾರೆ ನಟಿ?
ಸಮಂತಾ-ಮಹೇಶ್​ ಬಾಬು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 30, 2021 | 7:50 PM

ಸಮಂತಾ ವಿಚ್ಛೇದನ ಪಡೆದ ನಂತರದಲ್ಲಿ ಅಭಿಮಾನಿಗಳು ತುಂಬಾನೇ ಬೇಸರ ಮಾಡಿಕೊಂಡಿದ್ದರು. ಸಮಂತಾ ಚಿತ್ರರಂಗದಿಂದ ದೂರ ಉಳಿಯುತ್ತಾರಾ ಎನ್ನುವ ಆತಂಕವೂ ಕಾಡಿತ್ತು. ಆದರೆ, ಅವರು ಆ ರೀತಿ ಮಾಡಿಲ್ಲ. ಬದಲಿಗೆ ಸಾಲುಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವಿಶೇಷ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಊರುತ್ತಿದ್ದಾರೆ. ‘ಪುಷ್ಪ’ ಸಿನಿಮಾದಲ್ಲಿ ಅವರು ಹೆಜ್ಜೆ ಹಾಕಿದ, ‘ಹೂ ಅಂತೀಯಾ ಮಾವ, ಊಹೂ ಅಂತೀಯಾ ಮಾವ..’ ಹಾಡು ಸೂಪರ್-ಡೂಪರ್​ ಹಿಟ್​ ಆಗಿದೆ. ಈ ಬೆನ್ನಲ್ಲೇ ಸಮಂತಾ ಕಡೆಯಿಂದ ಒಂದು ದೊಡ್ಡ ಅಪ್​ಡೇಟ್​ ಸಿಕ್ಕಿದೆ. ಮಹೇಶ್​ ಬಾಬು ಮುಂದಿನ ಚಿತ್ರಕ್ಕೆ ಸಮಂತಾ ನಾಯಕಿ ಎನ್ನಲಾಗುತ್ತಿದೆ.

ಇತ್ತೀಚೆಗೆ ಸಮಂತಾ ಅವರು ಜ್ಯೂ. ಎನ್​ಟಿಆರ್​ ಜತೆ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳುವುದರೊಳಗೆ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಅವರ ಬಗ್ಗೆ ಕೇಳಿ ಬಂದ ಹೊಸ ಅಪ್​ಡೇಟ್​ ಕೇಳಿ ಸಮಂತಾ ಅಭಿಮಾನಿಗಳು ಹಿರಿಹಿರಿ ಹಿಗುತ್ತಿದ್ದಾರೆ.

ಮಹೇಶ್​ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಮ್ ಅವರು ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ‘ಸರ್ಕಾರಿ ವಾರಿ ಪಾಟ’ ಚಿತ್ರ ತೆರೆಗೆ ಬಂದ ನಂತರದಲ್ಲಿ ಹೊಸ ಸಿನಿಮಾದ ಕೆಲಸ ಆರಂಭಗೊಳ್ಳಲಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಈಗ ಅದು ಸಾಧ್ಯವಾಗುತ್ತಿಲ್ಲ. ಪೂಜಾಗೆ ಡೇಟ್ಸ್​ ಹೊಂದಿಸೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅವರು ಸಿನಿಮಾದಿಂದ ಹೊರ ನಡೆದಿದ್ದಾರಂತೆ.

ತ್ರಿವಿಕ್ರಮ್​ ಹಾಗೂ ಸಮಂತಾ ನಡುವೆ ಒಳ್ಳೆಯ ಗೆಳೆತನವಿದೆ. ಇನ್ನು, ಸಮಂತಾ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಈ ಆಫರ್​ ನೀಡಿದ್ದಾರೆ ತ್ರಿವಿಕ್ರಮ್​. ಇದನ್ನು ಸಮಂತಾ ಒಪ್ಪಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಪ್ರಿಯಾಂಕಾ ಚೋಪ್ರಾ ನಟನೆಯ ಅಮೆರಿಕದ ಸ್ಪೈ ಸರಣಿ ‘ಸಿಟಾಡೆಲ್​’ಅನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ರಾಜ್​ ಮತ್ತು ಡಿಕೆ ಹೊಸ ವೆಬ್​ ಸೀರಿಸ್​ ಮಾಡುತ್ತಿದ್ದಾರೆ. ಈ ಸರಣಿಯಲ್ಲಿ ವರುಣ್​ ಧವನ್​ ಮುಖ್ಯಭೂಮಿಕೆ ನಿರ್ವಹಿಸಿದರೆ, ಸಮಂತಾ ವರುಣ್​ಗೆ ಜತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಅವರು ವರುಣ್​ಗೆ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:  ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದಿಂದ ಇಕ್ಕಟ್ಟಿಗೆ ಸಿಲುಕಿದ ನಿರ್ದೇಶಕಿ; ಪರಿಹಾರ ಕೊಡೋದು ಯಾರು?