‘ಒಂದೊಳ್ಳೆಯ ಸಿನಿಮಾ ನೋಡಿ ಈ ವರ್ಷ ಮುಗಿಸಿದ ಖುಷಿ ಇದೆ’; ಡಾರ್ಲಿಂಗ್ ಕೃಷ್ಣ

ನಟಿ ರಚಿತಾ ರಾಮ್​ ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ನಟಿಯಲ್ಲಿ ಒಬ್ಬರು. ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಪಕ್ಕದ ಮನೆ ಹುಡುಗಿ ಪಾತ್ರದ ಜತೆಗೆ ಸಾಕಷ್ಟು ಪ್ರಯೋಗಾತ್ಮಕ ಪಾತ್ರಗಳನ್ನೂ ಅವರು ನಿರ್ವಹಿಸುತ್ತಿದ್ದಾರೆ. ಈಗ ರಚಿತಾ ರಾಮ್​ ಅವರು ಹಾಟ್​ ಅವತಾರ ತಾಳಿದ್ದಾರೆ

TV9kannada Web Team

| Edited By: Rajesh Duggumane

Dec 30, 2021 | 5:55 PM

ಅಜಯ್​ ರಾವ್​ ಹಾಗೂ ರಚಿತಾ ರಾಮ್​ ನಟನೆಯ ‘ಲವ್​ ಯೂ ರಚ್ಚು’ ಚಿತ್ರ ಶುಕ್ರವಾರ (ಡಿಸೆಂಬರ್​ 31) ತೆರೆಗೆ ಬರುತ್ತಿದೆ. ಈ ಸಿನಿಮಾ ಬಗ್ಗೆ ಅಜಯ್​​ ರಾವ್ ಹಾಗೂ ರಚಿತಾ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳಿಗಾಗಿ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು. ಈ ಶೋ ನೋಡಿದ ಹಲವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟ, ನಿರ್ದೇಶಕ, ನಿರ್ಮಾಪಕ ಡಾರ್ಲಿಂಗ್​ ಕೃಷ್ಣ, ‘ಅಜಯ್​ ರಾವ್​ ಅವರ ನಟನೆ ಇಷ್ಟವಾಗಿದೆ. ಕ್ಲೈಮ್ಯಾಕ್ಸ್​ನಲ್ಲಿ ಬರುವ ಒಂದಷ್ಟು ಡೈಲಾಗ್​ಗಳು ಹಿಡಿಸುತ್ತವೆ. ಈ ವರ್ಷವನ್ನು ಒಂದೊಳ್ಳೆಯ ಸಿನಿಮಾ ನೋಡಿ ಪೂರ್ಣಗೊಳಿಸಿದ ಖುಷಿ ಇದೆ’ ಎಂದಿದ್ದಾರೆ.

ನಟಿ ರಚಿತಾ ರಾಮ್​ ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ನಟಿಯಲ್ಲಿ ಒಬ್ಬರು. ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಪಕ್ಕದ ಮನೆ ಹುಡುಗಿ ಪಾತ್ರದ ಜತೆಗೆ ಸಾಕಷ್ಟು ಪ್ರಯೋಗಾತ್ಮಕ ಪಾತ್ರಗಳನ್ನೂ ಅವರು ನಿರ್ವಹಿಸುತ್ತಿದ್ದಾರೆ. ಈಗ ರಚಿತಾ ರಾಮ್​ ಅವರು ಹಾಟ್​ ಅವತಾರ ತಾಳಿದ್ದಾರೆ. ಶೂಟಿಂಗ್​ ಸಂದರ್ಭದಲ್ಲಿಯೇ ಸಾಕಷ್ಟು ವಿವಾದ ಸೃಷ್ಟಿಸಿದ್ದ ‘ಲವ್​ ಯೂ ರಚ್ಚು’ ಸಿನಿಮಾಗಾಗಿ ರಚಿತಾ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಧನಂಜಯ ಜತೆ ಸೆಲ್ಫೀ ತೆಗೆದುಕೊಳ್ಳೋಕೆ ಮುಗಿಬಿದ್ದ ಅಭಿಮಾನಿಗಳು

Love You Rachchu: ‘ಲವ್​ ಯೂ ರಚ್ಚು’ನಲ್ಲಿ ಮಿಲನಾ, ಡಾರ್ಲಿಂಗ್ ಕೃಷ್ಣಗೆ ಇಷ್ಟ ಆಗಿದ್ದೇನು? ವಿಡಿಯೋ ಇಲ್ಲಿದೆ

Follow us on

Click on your DTH Provider to Add TV9 Kannada