ಹಾಸನದಲ್ಲಿ ಧನಂಜಯ ಜತೆ ಸೆಲ್ಫೀ ತೆಗೆದುಕೊಳ್ಳೋಕೆ ಮುಗಿಬಿದ್ದ ಅಭಿಮಾನಿಗಳು
ಧನಂಜಯ ಅವರು ಮೊದಲ ನಿರ್ಮಾಣದಲ್ಲೇ ಗೆದ್ದಿದ್ದಾರೆ. ಪಕ್ಕದಮನೆ ಹುಡುಗನಾಗಿ ಅವರನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಈ ಕಾರಣಕ್ಕೆ ಇಂದು (ಡಿಸೆಂಬರ್ 29) ‘ಬಡವ ರಾಸ್ಕಲ್’ ತಂಡ ಹಾಸನ ಜಿಲ್ಲೆಗೆ ಭೇಟಿ ನೀಡಿತ್ತು.
‘ಡಾಲಿ’ ಧನಂಜಯ ನಟನೆಯ ‘ಬಡವ ರಾಸ್ಕಲ್’ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬರುತ್ತಿದೆ. ಪಂಚಿಂಗ್ ಡೈಲಾಗ್ಗಳು ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದೆ. ಧನಂಜಯ ಅವರು ಮೊದಲ ನಿರ್ಮಾಣದಲ್ಲೇ ಗೆದ್ದಿದ್ದಾರೆ. ಪಕ್ಕದಮನೆ ಹುಡುಗನಾಗಿ ಅವರನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಈ ಕಾರಣಕ್ಕೆ ಇಂದು (ಡಿಸೆಂಬರ್ 29) ‘ಬಡವ ರಾಸ್ಕಲ್’ ತಂಡ ಹಾಸನ ಜಿಲ್ಲೆಗೆ ಭೇಟಿ ನೀಡಿತ್ತು. ನಟ ಡಾಲಿ ಧನಂಜಯ ಅವರನ್ನು ಕಂಡು ಅಭಿಮಾನಿಗಳು ಖುಷಿಪಟ್ಟರು. ಅಲ್ಲದೆ, ನೆಚ್ಚಿನ ನಟನ ಸೆಲ್ಫಿಗೆ ಮುಗಿಬಿದ್ದಿದ್ದರು. ಕೆಲವರು ಆಟೋಗ್ರಾಫ್ ಹಾಕಿಸಿಕೊಳ್ಳೋಕೂ ಮುಂದೆ ಬಂದರು. ಅದರ ವಿಡಿಯೋ ಇಲ್ಲಿದೆ.
ಮುಖ್ಯ ಪಾತ್ರವನ್ನೂ ನಿಭಾಯಿಸಿರುವ ಧನಂಜಯ್ಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ (Amrutha Iyengar) ನಟಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ, ಪ್ರೀತಾ ಜಯರಾಮನ್ ಛಾಯಾಗ್ರಹಣ ಮಾಡಿದ್ದಾರೆ. ಪೋಷಕ ಪಾತ್ರಗಳಲ್ಲಿ ನಾಗ ಭೂಷಣ್, ರಂಗಾಯಣ ರಘು, ತಾರಾ ಅನುರಾಧ ಹೈಲೈಟ್ ಆಗಿದ್ದಾರೆ.
ಇದನ್ನೂ ಓದಿ: Badava Rascal: ಧನಂಜಯ ನಟನೆಯ ‘ಬಡವ ರಾಸ್ಕಲ್’ ಮೊದಲಾರ್ಧ ಹೇಗಿದೆ? ಇಲ್ಲಿದೆ ರಿಪೋರ್ಟ್
ಪ್ರೇಕ್ಷಕರಿಗೆ ‘ಬಡವ ರಾಸ್ಕಲ್’ ಚಿತ್ರ ಇಷ್ಟವಾಯ್ತಾ? ಧನಂಜಯ ಅಭಿಮಾನಿಗಳು ಹೇಳಿದ್ದೇನು?