ರಥೋತ್ಸವ ನಡೆಯುವಾಗಲೇ ಸಿಡಿದ ಪಟಾಕಿಯ ಕಿಡಿಯಿಂದ ರಥದ ಶಿಖರಕ್ಕೆ ಹೊತ್ತಿಕೊಂಡಿತು ಬೆಂಕಿ!
ರಥೋತ್ಸವ ಸಂದರ್ಭದಲ್ಲಿ ಪಟಾಕಿ ಸಿಡಿಸುವುದು ಸಾಮಾನ್ಯ ಸಂಗತಿ. ಶಿವಪೇಟೆಯಲ್ಲಿ ಭಕ್ತರು ಪಟಾಕಿ ಸಿಡಿಸಿದಾಗ ಕಿಡಿಯೊಂದು ರಥದ ಶಿಖರದೆಡೆ ಹಾರಿ ಅದನ್ನು ಸಿಂಗರಿಸಲ್ಪಟ್ಟ ವಸ್ತುಗಳಿಗೆ ಬೆಂಕಿ ಹೊತ್ತಿಸಿದೆ
ಗ್ರಾಮೀಣ ಭಾಗಗಳಲ್ಲಿ ನಡೆಯುವ ಜಾತ್ರೆ, ರಥೋತ್ಸವಗಳ ಸೊಬಗೇ ಬೇರೆ. ಇವು ಪಟ್ಟಣ ಪ್ರದೇಶಗಳಲ್ಲೂ ನಡೆಯುತ್ತವೆ ಅದರೆ, ಹಳ್ಳಿಗಳಲ್ಲಿ ಜಾತ್ರೆಗಳೆಂದರೆ, ಊರವರೆಲ್ಲ ಸೇರಿ ಆಚರಿಸುವ ಹಬ್ಬ. ಕೇವಲ ಜಾತ್ರೆ ನಡೆಯುವ ಊರಿನವರು ಮಾತ್ರ ಅಲ್ಲ ಪಕ್ಕದ ಗ್ರಾಮಗಳ ಜನರು ಸಹ ಜಾತ್ರಾ ಮಹೋತ್ಸವಗಳಲ್ಲಿ ಭಾಗವಹಿಸುತ್ತಾರೆ. ಊರ ಹಬ್ಬ ಸಂದರ್ಭಗಳಲ್ಲಿ ಜನ ತಮ್ಮ ನೆಂಟರಿಷ್ಟರನ್ನು ಆಹ್ವಾನಿಸುವ ಪರಿಪಾಠವೂ ಇದೆ. ಗ್ರಾಮೀಣ ಭಾಗದ ಜನರಿಗೆ ಜಾತ್ರೆಗಳೇ ಮೋಜು ಮತ್ತು ಮನರಂಜನೆಯ ಮೂಲ. ದೇವರಿಗೆ ಹರಕೆ ಹೊರುವುದು, ದೇವರಿಗೆ ತೆಂಗಿನಕಾಯಿ ಸಮರ್ಪಿಸುವುದು ಜಾತ್ರೆಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ.
ರಥೋತ್ಸವ ನಡೆಯುವಾಗ ಕೆಲವು ಸಲ ವಿಘ್ನಗಳು ಎದುರಾಗಿ ಬಿಡುತ್ತವೆ. ಈ ವಿಡಿಯೋ ನೋಡಿದರೆ ನಿಮಗದು ಗೊತ್ತಾಗುತ್ತದೆ. ಇದು ನಮಗೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನಲ್ಲಿರುವ ಶಿವಪೇಟೆಯಲ್ಲಿ ಜಡಿ ಶಂಕರಲಿಂಗ ದೇವರ 38 ನೇ ರಥೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ವಿಡಿಯೋ. ಊರಿನ ಎಲ್ಲ ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ರಥೋತ್ಸವ ನಡೆಯುತ್ತಿರುವಾಗ ಬೆಂಕಿ ಅವಗಢ ಜರುಗಿದೆ.
ರಥೋತ್ಸವ ಸಂದರ್ಭದಲ್ಲಿ ಪಟಾಕಿ ಸಿಡಿಸುವುದು ಸಾಮಾನ್ಯ ಸಂಗತಿ. ಶಿವಪೇಟೆಯಲ್ಲಿ ಭಕ್ತರು ಪಟಾಕಿ ಸಿಡಿಸಿದಾಗ ಕಿಡಿಯೊಂದು ರಥದ ಶಿಖರದೆಡೆ ಹಾರಿ ಅದನ್ನು ಸಿಂಗರಿಸಲ್ಪಟ್ಟ ವಸ್ತುಗಳಿಗೆ ಬೆಂಕಿ ಹೊತ್ತಿಸಿದೆ. ರಥದ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಾಗ ಸಹಜವಾಗೇ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಆದರೆ, ಗ್ರಾಮಸ್ಥರು ಕೂಡಲೇ ಬೆಂಕಿಯನ್ನು ಆರಿಸಿ ರಥೋತ್ಸವ ಮುಂದುವರಿಯುವುದನ್ನು ನೋಡಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಜೋರ್ಡಾನ್ ಸಂಸತ್ ಕಲಾಪದ ವೇಳೆ ಹೊಡೆದಾಡಿಕೊಂಡ ಸಂಸದರು; ವೈರಲ್ ಆಯ್ತು ವಿಡಿಯೋ