‘ನಾನೂ ಅಪ್ಪು ಸಿನಿಮಾ ನೋಡುತ್ತಿದ್ದೆ’; ಪುನೀತ್ ಸಮಾಧಿ ದರ್ಶನಕ್ಕೆ ಅಮೆರಿಕದಿಂದ ಬಂದ ಅಭಿಮಾನಿ
ಪುನೀತ್ ಅವರ ಸಮಾಧಿ ದರ್ಶನಕ್ಕೆ ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಅಭಿಮಾನಿಯೊಬ್ಬರು ಆಗಮಿಸಿದ್ದಾರೆ. ಲಿಂದಾ ಎಂಬುದು ಅವರ ಹೆಸರು.
ಪುನೀತ್ ರಾಜ್ಕುಮಾರ್ ಖ್ಯಾತಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ದೇಶ-ವಿದೇಶದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಮೃತಪಟ್ಟ ನಂತರದಲ್ಲಿ ವಿದೇಶದಲ್ಲೂ ಅವರ ಬಗ್ಗೆ ಸುದ್ದಿಗಳು ಪ್ರಕಟವಾದವು. ಇನ್ನು, ಪುನೀತ್ ಸಮಾಧಿ ದರ್ಶನಕ್ಕೆ ರಾಜ್ಯದ ಮೂಲೆಮೂಲೆಯಿಂದಲೂ ಅಭಿಮಾನಿಗಳು ಬರುತ್ತಿದ್ದಾರೆ. ಅವರ ಸಮಾಧಿ ಎದುರು ಫ್ಯಾನ್ಸ್ ಭಾವುಕರಾಗುತ್ತಿರುವ ದೃಶ್ಯ ಕಂಡು ಬರುತ್ತಲೇ ಇದೆ. ಈಗ, ಪುನೀತ್ ಅವರ ಸಮಾಧಿ ದರ್ಶನಕ್ಕೆ ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಅಭಿಮಾನಿಯೊಬ್ಬರು ಆಗಮಿಸಿದ್ದಾರೆ. ಲಿಂದಾ ಎಂಬುದು ಅವರ ಹೆಸರು. ‘ಎರಡು ವರ್ಷಗಳಿಂದ ಅವರ ಚಿತ್ರಗಳನ್ನು ನೋಡುತ್ತಾ ಬಂದಿದ್ದೇನೆ. ಕನ್ನಡ ಅರ್ಥವಾಗುವುದಿಲ್ಲ. ಹೀಗಾಗಿ, ಸಬ್ ಟೈಟಲ್ ಮೂಲಕ ಸಿನಿಮಾ ಅರ್ಥ ಮಾಡಿಕೊಳ್ಳುತ್ತಿದ್ದೆ’ ಎಂದಿದ್ದಾರೆ ಲಿಂದಾ. ಇಂದಿಗೆ (ಡಿಸೆಂಬರ್ 29) ಪುನೀತ್ ಅಗಲಿ ಎರಡು ತಿಂಗಳು ಕಳೆದಿದೆ. ಅವರ ಸಮಾಧಿಗೆ ಕುಟುಂಬದವರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಅಪ್ಪು ಇಲ್ಲದೇ 2 ತಿಂಗಳು: ಪುನೀತ್ ನಿಧನದ ಬಳಿಕ ನಡೆದ 10 ಪ್ರಮುಖ ಘಟನೆಗಳೇನು?