Badava Rascal: ಧನಂಜಯ​ ನಟನೆಯ ‘ಬಡವ ರಾಸ್ಕಲ್​’ ಮೊದಲಾರ್ಧ ಹೇಗಿದೆ? ಇಲ್ಲಿದೆ ರಿಪೋರ್ಟ್​

Badava Rascal First Half Review: ಈಗಾಗಲೇ ರಿಲೀಸ್​ ಆಗಿದ್ದ ಟ್ರೇಲರ್​ನಿಂದ ಜನರಿಗೆ ‘ಬಡವ ರಾಸ್ಕಲ್​’ ಬಗ್ಗೆ ನಿರೀಕ್ಷೆ ಹುಟ್ಟಿಕೊಂಡಿತ್ತು. ಹಾಗಾದರೆ ಹೇಗಿದೆ ‘ಬಡವ ರಾಸ್ಕಲ್​’ ಮೊದಲಾರ್ಧ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

Badava Rascal: ಧನಂಜಯ​ ನಟನೆಯ ‘ಬಡವ ರಾಸ್ಕಲ್​’ ಮೊದಲಾರ್ಧ ಹೇಗಿದೆ? ಇಲ್ಲಿದೆ ರಿಪೋರ್ಟ್​
ಧನಂಜಯ-ಅಮೃತಾ ಅಯ್ಯಂಗಾರ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 24, 2021 | 11:57 AM

ಧನಂಜಯ (Dhananjay) ಹಾಗೂ ಅಮೃತಾ ಅಯ್ಯಂಗಾರ್ (Amrutha Iyengar)​ ನಟನೆಯ ‘ಬಡವ ರಾಸ್ಕಲ್​’ (Badava Rascal)ಇಂದು (ಡಿಸೆಂಬರ್​ 24) ತೆರೆಗೆ ಬಂದಿದೆ. ಕ್ರಿಸ್​ಮಸ್​ ಪ್ರಯುಕ್ತ ಈ ಸಿನಿಮಾ ರಿಲೀಸ್​ ಆಗಿದೆ. ಇದೇ ಮೊದಲ ಬಾರಿಗೆ ಆಟೋ ಡ್ರೈವರ್​ ಆಗಿ ಧನಂಜಯ ಕಾಣಿಸಿಕೊಂಡಿದ್ದಾರೆ. ‘ಟಗರು’, ‘ಪುಷ್ಪ’ ಚಿತ್ರಗಳ ವಿಲನ್​ ಪಾತ್ರಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದ ಅವರು ಈಗ ಹೀರೋ ಪಾತ್ರಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಈಗಾಗಲೇ ರಿಲೀಸ್​ ಆಗಿದ್ದ ಟ್ರೇಲರ್​ನಿಂದ ಜನರಿಗೆ ‘ಬಡವ ರಾಸ್ಕಲ್​’ ಬಗ್ಗೆ ನಿರೀಕ್ಷೆ ಹುಟ್ಟಿಕೊಂಡಿತ್ತು. ಹಾಗಾದರೆ ಈ ನಿರೀಕ್ಷೆಯನ್ನು ತಲುಪೋಕೆ ಈ ಚಿತ್ರದಿಂದ ಸಾಧ್ಯವಾಯಿತೇ? ಹೇಗಿದೆ ‘ಬಡವ ರಾಸ್ಕಲ್​’ ಮೊದಲಾರ್ಧ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

  1. ಡಾಲಿ ಧನಂಜಯ ಅವರು ಮಿಡ್ಲ್​ ಕ್ಲಾಸ್​ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರಕ್ಕೆ ಅವರು ನ್ಯಾಯ ಒದಗಿಸುವ  ಪ್ರಯತ್ನ ಮಾಡಿದ್ದಾರೆ.
  2. ‘ಬಡವ ರಾಸ್ಕಲ್​’ ಮೊದಲಾರ್ಧದಲ್ಲಿ ಫ್ರೆಂಡ್​ಶಿಪ್​ ಕಥೆ ಹೈಲೈಟ್​ ಆಗಿದೆ. ಟ್ರೇಲರ್​ನಲ್ಲಿ ನಿರೀಕ್ಷೆ ಮೂಡಿಸಿದ ರೀತಿಯಲ್ಲೇ ಗೆಳೆತನದ ಕಥೆ ಮೂಡಿಬಂದಿದೆ.
  3. ಪೂರ್ತಿ ಮೊದಲಾರ್ಧದಲ್ಲಿ ಪಂಚಿಂಗ್​ ಡೈಲಾಗ್​ಗಳು ಗಮನ ಸೆಳೆಯುತ್ತವೆ. ಸಂಭಾಷಣೆಗಳು ಪ್ರೇಕ್ಷಕರಿಗೆ ​ಮನರಂಜನೆ ನೀಡುತ್ತವೆ.
  4. ಈ ಸಿನಿಮಾದಲ್ಲಿ ಪೋಷಕ ನಟ ನಾಗಭೂಷಣ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಸಿಕ್ಕಿದೆ. ಬಹುತೇಕ ದೃಶ್ಯಗಳಲ್ಲಿ ಅವರು ಮಿಂಚಿದ್ದಾರೆ.
  5. ರಂಗಾಯಣ ರಘು ಮತ್ತು ತಾರಾ ಅನುರಾಧ ಅವರು ಕಥಾನಾಯಕನ ತಂದೆ-ತಾಯಿ ಆಗಿ ಮನಸೆಳೆಯುವ ಅಭಿನಯ ನೀಡಿದ್ದಾರೆ. ಅವರ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತವೆ.
  6. ಡಾಲಿ ಧನಂಜಯ ಮತ್ತು ಅಮೃತಾ ಅಯ್ಯಂಗಾರ್​ ಅವರ ಕಾಂಬಿನೇಷನ್​ ಚೆನ್ನಾಗಿದೆ. ಅವರಿಬ್ಬರ ಲವ್​ಸ್ಟೋರಿ ಸೆಕೆಂಡ್​ ಹಾಫ್​ನಲ್ಲಿ ಇನ್ನಷ್ಟು ತಿರುವುಗಳನ್ನು ಪಡೆದುಕೊಳ್ಳುವ ಸುಳಿವು ಸಿಕ್ಕಿದೆ.

ಇದನ್ನೂ ಓದಿ: Dhananjay: 20 ರೂ ಪೆಟ್ರೋಲ್ ಹಾಕಿಸ್ತೀವಿ ಕೊಡು ಎಂದು ಫ್ರೆಂಡ್ ಗಾಡಿ ತೆಗೆದುಕೊಂಡು ಹೋಗುತ್ತಿದ್ದೆವು; ಆ ದಿನಗಳನ್ನು ಸ್ಮರಿಸಿದ ಧನಂಜಯ್

‘ರೈಡರ್​’, ‘ಬಡವ ರಾಸ್ಕಲ್​’ ಚಿತ್ರಗಳ ಬಗ್ಗೆ ರಮ್ಯಾ ನಿರೀಕ್ಷೆ; ಡಾಲಿ ಧನಂಜಯಗೆ ಮತ್ತೆ ಮತ್ತೆ ಪ್ರೀತಿ-ಪ್ರೋತ್ಸಾಹ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ