Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhananjay: 20 ರೂ ಪೆಟ್ರೋಲ್ ಹಾಕಿಸ್ತೀವಿ ಕೊಡು ಎಂದು ಫ್ರೆಂಡ್ ಗಾಡಿ ತೆಗೆದುಕೊಂಡು ಹೋಗುತ್ತಿದ್ದೆವು; ಆ ದಿನಗಳನ್ನು ಸ್ಮರಿಸಿದ ಧನಂಜಯ್

Dhananjay: 20 ರೂ ಪೆಟ್ರೋಲ್ ಹಾಕಿಸ್ತೀವಿ ಕೊಡು ಎಂದು ಫ್ರೆಂಡ್ ಗಾಡಿ ತೆಗೆದುಕೊಂಡು ಹೋಗುತ್ತಿದ್ದೆವು; ಆ ದಿನಗಳನ್ನು ಸ್ಮರಿಸಿದ ಧನಂಜಯ್

TV9 Web
| Updated By: shivaprasad.hs

Updated on:Dec 21, 2021 | 10:11 AM

Badava Rascal: ನಟ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಈ ವಾರ ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಚಿತ್ರದ ಕುರಿತು ಕುತೂಹಲಕರ ಸಂಗತಿಗಳ ಕುರಿತು ಮಾತನಾಡಿದ್ದಾರೆ.

ಸ್ಯಾಂಡಲ್​ವುಡ್ ನಟ ಧನಂಜಯ್ ಬಣ್ಣಹಚ್ಚಿರುವ ‘ಬಡವ ರಾಸ್ಕಲ್’ ಈ ವಾರ ತೆರೆಗೆ ಬರಲು ಸಿದ್ಧವಾಗಿದೆ. ಟಿವಿ9ನೊಂದಿಗೆ ಮಾತನಾಡಿದ ಧನಂಜಯ್ ಚಿತ್ರದ ಕುರಿತು, ತಮ್ಮ ಆರಂಭಿಕ ದಿನಗಳ ಕುರಿತು ಮಾತನಾಡಿದ್ದಾರೆ. ಪ್ರಸ್ತುತ ಬಡವ ರಾಸ್ಕಲ್ ಚಿತ್ರದಲ್ಲಿ ನಿರ್ಮಾಪಕ, ನಾಯಕನಾಗಿರುವ ಧನಂಜಯ್, ಗೀತೆಗಳಿಗೆ ಸಾಹಿತ್ಯವನ್ನೂ ಬರೆದಿರುವುದರ ಕುರಿತು ಕೇಳಿರುವ ಪ್ರಶ್ನೆಗೆ ಅವರು ಉತ್ತರಿಸುತ್ತಾ ಹಲವು ಕುತೂಹಲಕರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಹಾಡನ್ನು ನಿರ್ದೇಶಕರೇ ಹೇಳಿ ಬರೆಸಿದ್ದು. ‘ಆಗಾಗ ನೆನಪಾಗುತಾಳೆ’ ಹಾಡಿನ ಕುರಿತು ಮಾತನಾಡಿದ ಅವರು, ಆ ಹಾಡಿಗೆ ಜನರು ಬಹಳ ಸಹಾಯ ಮಾಡಿದರು. ಆದ್ದರಿಂದಲೇ ಜನರ ನಡುವೆ, ನೈಜವಾಗಿ ಅದನ್ನು ಚಿತ್ರೀಕರಿಸಲು ಸಾಧ್ಯವಾಯಿತು ಎಂದಿದ್ದಾರೆ. ಚಿತ್ರೀಕರಣದ ಬಿಡುವಿನ ವೇಳೆ ಜನರು ಫೋಟೋ ತೆಗೆಸಿಕೊಳ್ಳುತ್ತಿದ್ದರು. ಶೂಟ್ ಆರಂಭವಾದ ನಂತರ ಅವರು ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದರು ಎಂದು ಧನಂಜಯ್ ಸ್ಮರಿಸಿಕೊಂಡಿದ್ದಾರೆ. ಅಲ್ಲದೇ ಹಾಡಿನಲ್ಲಿರುವುದೆಲ್ಲಾ ರಿಯಲ್ ಕ್ಯಾರೆಕ್ಟರ್ಸ್ ಎಂದು ಅವರು ಹೇಳಿಕೊಂಡಿದ್ದಾರೆ.

‘ಬಡವ ರಾಸ್ಕಲ್’ ಚಿತ್ರ ಸ್ನೇಹಿತರೇ ಸೇರಿಕೊಂಡು ಮಾಡಿದ ಸಿನಿಮಾ. ಸಹನಟ ನಾಗಭೂಷಣ್ ಮಾತನಾಡುತ್ತಾ, ರಂಗಭೂಮಿಯ ದಿನಗಳನ್ನು ಮೆಲುಕು ಹಾಕಿದ್ದರು. ಆಗ ಅವರು, ಓಡಾಡಲು ಗಾಡಿಯಿಲ್ಲದ ದಿನಗಳನ್ನು, ನಾಟಕಕ್ಕೆ ನಡೆದು ಹೋಗುತ್ತಿದ್ದುದನ್ನೂ ಹೇಳಿಕೊಂಡಿದ್ದರು. ಈ ಕುರಿತು ಮಾತನಾಡಿದ ಧನಂಜಯ್, ಆ ದಿನಗಳನ್ನು ನೆನೆಸಿಕೊಂಡರೆ ಖುಷಿಯಾಗುತ್ತದೆ. ಸೈಕಲ್​ನಲ್ಲಿ, ಲೂನಾದಲ್ಲಿ ಓಡಾಡುತ್ತಿದ್ದೆವು. ಸ್ನೇಹಿತರ ಗಾಡಿ ತೆಗೆದುಕೊಂಡು 20 ರೂ ಪೆಟ್ರೋಲ್ ಹಾಕಿಸುತ್ತೇನೆ ಕೊಡು ಎಂದು ತೆಗೆದುಕೊಂಡು ಹೋಗುತ್ತಿದ್ದೆವು ಎಂದು ಸ್ಮರಿಸಿಕೊಂಡಿದ್ದಾರೆ.

ಆಗ ಎಲ್ಲರೂ ಸೇರಿಕೊಂಡು ನಾಟಕಗಳನ್ನು ಮಾಡುತ್ತಿದ್ದೆವು. 20 ಸಾವಿರದಿಂದ 30 ಸಾವಿರ ಖರ್ಚು ಹಾಕಿ ನಾಟಕ ಮಾಡೋದು ದೊಡ್ಡ ವಿಷಯ. ಈಗ ಎಲ್ಲರೂ ಸೇರಿ ಸಿನಿಮಾ ಮಾಡಿದ್ದೇವೆ. ಒಂದೇ ಒಂದು ಬದಲಾಗದೇ ಇರುವುದೆಂದರೆ ಯಾರೂ ಬದಲಾಗಿಲ್ಲ, ಎಲ್ಲರೂ ಅಷ್ಟೇ ಗಟ್ಟಿಯಾಗಿ, ಜೊತೆಗಿದ್ದೀವಿ ಎಂದು ಧನಂಜಯ್ ನುಡಿದಿದ್ದಾರೆ.

‘ಬಡವ ರಾಸ್ಕಲ್’ ಚಿತ್ರ ಡಿಸೆಂಬರ್ 24ರಂದು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.

ಇದನ್ನೂ ಓದಿ:

Govinda Birthday: ಕಡುಕಷ್ಟದಿಂದ ಬೆಳೆದು ಬಾಲಿವುಡ್ ಸ್ಟಾರ್ ಆಗುವ ತನಕ; ನಟ ಗೋವಿಂದ ಯಶಸ್ಸಿನ ಕಥಾನಕ ಇಲ್ಲಿದೆ

ಅನಾರೋಗ್ಯದಿಂದ ಬಳಲುತ್ತಿರುವ ಹುಡುಗಿಗೆ ವಿಡಿಯೋ ಕಾಲ್ ಮೂಲಕ ಧೈರ್ಯ ತುಂಬಿದರು ಮೆಗಾಸ್ಟಾರ್ ರಜಿನೀಕಾಂತ್

Published on: Dec 21, 2021 09:59 AM