ಕಿತ್ತೂರು ಚೆನ್ನಮ್ಮನ ಪ್ರತಿಮೆಗೆ ತನಗಿಂತ ಕಿರಿಯ ಕುಮಾರಸ್ವಾಮಿಗೆ ಮೊದಲು ಹಾರ ಹಾಕಲು ಬಿಟ್ಟು ‘ಹಿರಿತನ’ ಮೆರೆದರು ರೇವಣ್ಣ!

ಏಣಿ ಹತ್ತುವಾಗ ರೇವಣ್ಣನವರು ಕುಮಾರಸ್ವಾಮಿಗಿಂತ ಮುಂದಿದ್ದರು. ಕುಮಾರ ಸ್ವಾಮಿಯವರ ಹಾರವನ್ನೂ ರೇವಣ್ಣನೇ ಹಿಡಿದಿಕೊಂಡಿದ್ದರು. ರೇವಣ್ಣ ಮುಂದೆ ಇದ್ದಿದ್ದರಿಂದ ಅವರೇ ಮೊದಲು ಹಾರ ಹಾಕಬಹುದಿತ್ತು.

TV9kannada Web Team

| Edited By: Arun Belly

Dec 21, 2021 | 4:23 PM

ಸಹೋದರರು ಬೆಳೀತಾ ಬೆಳೀತಾ ದಾಯಾದಿಗಳಂತೆ ಅಂತ ಕನ್ನಡದಲ್ಲಿ ಗಾದೆಮಾತೊಂದಿದೆ. ಅಂದರೆ ಚಿಕ್ಕವರಾಗಿರುವಾಗ ಅವರ ನಡುವೆ ಇರುವ ಪ್ರೀತಿ ದೊಡ್ಡವರಾಗುತ್ತಾ ಹೋದಂತೆ ಅದು ಕಡಿಮೆಯಾಗಿ ಪರಸ್ಪರ ವೈರಿಗಳಂತೆ ವರ್ತಿಸುತ್ತಾರೆ ಅನ್ನೋದು ಈ ಮಾತಿನ ಅರ್ಥ. ಆದರೆ, ಮಾಜಿ ಪ್ರಧಾನ ಮಂತ್ರಿ ದೇವೇಗೌಡರ ಮಕ್ಕಳಾದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ನಡುವೆ ಅನ್ಯೋನ್ಯತೆ, ವಾತ್ಸಲ್ಯ, ಗೌರವ ಮತ್ತು ಪ್ರೀತಿ ಇನ್ನೂ ಕಡಿಮೆಯಾಗಿಲ್ಲ. ವಯಸ್ಸಿನಲ್ಲಿ ರೇವಣ್ಣನವರು ಕುಮಾರಸ್ವಾಮಿಗಿಂತ ಎರಡು ವರ್ಷ ಹಿರಿಯರು. ಆದರೆ, ಸಮ್ಮಿಶ್ರ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾದರೆ, ರೇವಣ್ಣ ಸಚಿವ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಅವರ ನಡುವಿನ ಪ್ರೀತಿ ಬಗ್ಗೆ ಯಾಕೆ ಹೇಳಬೇಕಾಗಿದೆಯೆಂದರೆ, ಅದನ್ನು ಹೇಳಲೇಬೇಕಾದ ಪ್ರಸಂಗ ಮಂಗಳವಾರ ಬೆಳಗಾವಿಯಲ್ಲಿ ನಡೆಯಿತು. ಜೆಡಿ(ಎಸ್) ಸದಸ್ಯರು ನಗರದಲ್ಲಿರುವ ಕಿತ್ತೂರು ಚೆನ್ನಮ್ಮನ ಪ್ರತಿಮೆಗೆ ಹೂಮಾಲೆ ಹಾಕಿ ಗೌರವಿಸುವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು.

ಪ್ರತಿಮೆ ಬಹಳ ಎತ್ತರದಲ್ಲಿರುವುದರಿಂದ ಹಾರ ಹಾಕುವವರು ಏಣಿ ಹತ್ತಬೇಕಿತ್ತು. ಏಣಿ ಹತ್ತುವಾಗ ರೇವಣ್ಣನವರು ಕುಮಾರಸ್ವಾಮಿಗಿಂತ ಮುಂದಿದ್ದರು. ಕುಮಾರ ಸ್ವಾಮಿಯವರ ಹಾರವನ್ನೂ ರೇವಣ್ಣನೇ ಹಿಡಿದಿಕೊಂಡಿದ್ದರು. ರೇವಣ್ಣ ಮುಂದೆ ಇದ್ದಿದ್ದರಿಂದ ಅವರೇ ಮೊದಲು ಹಾರ ಹಾಕಬಹುದಿತ್ತು.

ಆದರೆ ರೇವಣ್ಣ ಹಾಗೆ ಮಾಡದೆ, ತಮ್ಮ ಕಿರಿಯ ಸಹೋದರನನ್ನು ಮುಂದೆ ಕಳಿಸುತ್ತಾರೆ. ಕುಮಾರ ಸ್ವಾಮಿಯವರು ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಮಾಜಿ ಮುಖ್ಯಮಂತ್ರಿಗಳೂ ಹೌದು. ರೇವಣ್ಣ ವಯಸ್ಸಿನಲ್ಲಿ ದೊಡ್ಡವರಾದರೂ ತಮ್ಮ ಹಿರಿತನದ ಗತ್ತು ಪ್ರದರ್ಶಿಸದೆ ತನ್ನ ತಮ್ಮನಿಗೆ ಮೊದಲು ಹಾರ ಹಾಕುವ ಅವಕಾಶ ಕಲ್ಪಿಸುತ್ತಾರೆ. ಅನುಕರಣೀಯ ವರ್ತನೆ ತಾನೆ?

ಇದನ್ನೂ ಓದಿ:    ಅನಾರೋಗ್ಯದಿಂದ ಬಳಲುತ್ತಿರುವ ಹುಡುಗಿಗೆ ವಿಡಿಯೋ ಕಾಲ್ ಮೂಲಕ ಧೈರ್ಯ ತುಂಬಿದರು ಸೂಪರ್​​ಸ್ಟಾರ್ ರಜಿನೀಕಾಂತ್

Follow us on

Click on your DTH Provider to Add TV9 Kannada