ಹೋರಿ ಬೆದರಿಸುವ ಸ್ಪರ್ಧೆ ಮೇಲಿನ ನಿಷೇಧ ತೆರವುಗೊಳಿಸುವಂತೆ ಹಾವೇರಿಯಲ್ಲಿ ಸ್ವಾಮೀಜಿಗಳ ನೇತೃತ್ವದ ಪಾದಯಾತ್ರೆ

ಪ್ರತಿಭಟನಾಕಾರರು ಚಿಕ್ಕಆಲೂರಿನಿಂದ ಹಾವೇರಿ ನಗರದವರೆಗೆ ಸುಮಾರು 10 ಕಿಮೀಗಳಷ್ಟು ಅಂತರವನ್ನು ಪಾದಯಾತ್ರೆಯ ಮೂಲಕ ಕ್ರಮಿಸಿ ಹಾವೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

TV9kannada Web Team

| Edited By: Arun Belly

Dec 21, 2021 | 7:28 PM

ಹೋರಿ ಬೆದರಿಸುವ ಸ್ಪರ್ಧೆಯನ್ನು ಹಾವೇರಿ ಜಿಲ್ಲಾಡಳಿತ ನಿಷೇಧಿಸಿದೆ. ಹೋರಿ ಹಬ್ಬ ಅಂತಲೂ ಜನಪ್ರಿಯಗೊಂಡಿರುವ ಸ್ಪರ್ಧೆಯನ್ನು ನಿಷೇಧಿಸಿರುವುದು ಜಿಲ್ಲೆಯ ರೈತ ಸಮುದಾಯಗಳಲ್ಲಿ ಅಸಮಾಧಾನ ಮೂಡಿಸಿದೆ. ಸಾಮಾನ್ಯವಾಗಿ ದೀಪಾವಳಿ ಹಬ್ಬದ ನಂತರ ನಡೆಯುವ ಹಬ್ಬವನ್ನು ಕೋವಿಡ್-19 ಪ್ರಯುಕ್ತ ನಿಷೇಧಿಸಲಾಗಿತ್ತು. ಆದರೆ, ಎರಡನೇ ಅಲೆ ತಾಂಡವ ನೃತ್ಯ ನಡೆಸಿದ ಬಳಿಕ ಕಳೆದೆರಡು ತಿಂಗಳುಗಳಿಂದ ಪೀಡೆಯ ಭೀತಿ ಕಡಿಮೆಯಾಗಿದೆ. ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಉತ್ಸವಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಹೋರಿ ಹಬ್ಬ ನಡೆಸಲು ಜಿಲ್ಲಾಡಳಿತ ಅನುಮತಿ ನೀಡುವ ನಿರೀಕ್ಷೆ ರೈತರಿಗಿತ್ತು. ಆದರೆ, ಅವರ ನಿರೀಕ್ಷೆ ಹುಸಿಹೋಗಿದೆ.

ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ಮಂಗಳವಾರದಂದು ಹೋರಿ ಹಬ್ಬ ಆಚರಣೆ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ನೇತೃತ್ವವನ್ನು ಹಿಂದೂ ಜಾಗರಣ ಸಮಿತಿ ಮತ್ತು ಮೂವರು ಸ್ವಾಮೀಜಿಗಳು ವಹಿಸಿದ್ದರು.

ಪ್ರತಿಭಟನಾಕಾರರು ಚಿಕ್ಕಆಲೂರಿನಿಂದ ಹಾವೇರಿ ನಗರದವರೆಗೆ ಸುಮಾರು 10 ಕಿಮೀಗಳಷ್ಟು ಅಂತರವನ್ನು ಪಾದಯಾತ್ರೆಯ ಮೂಲಕ ಕ್ರಮಿಸಿ ಹಾವೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಹೋರಿ ಹಬ್ಬವು ಕರಾವಳಿ ಭಾಗದಲ್ಲಿ ಆಯೋಜಿಸಲಾಗುವ ಕಂಬಳ ಸ್ಪರ್ಧೆಯಷ್ಟೇ ಜನಪ್ರಿಯ ಎಂದು ಹೇಳಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಹೋರಿಗಳಿಗೆ ವಿಶೇಷವಾದ ಅಲಂಕಾರ ಮಾಡಿ ಸಿಂಗರಿಸಲಾಗುತ್ತದೆ. ಗ್ರಾಮೀಣ ಭಾಗದ ಜನರಿಗೆ ಮನದಣಿಯ ಮನರಂಜನೆ ನೀಡುವ ಸ್ಪರ್ಧೆ ಇದಾಗಿದೆ.

ಇದನ್ನೂ ಓದಿ:   ವಿದ್ಯಾರ್ಥಿಗಳಿಗಾಗಿ ಇದ್ದ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಅಶ್ಲೀಲ ವಿಡಿಯೋ ಹಾಕಿದ ಶಿಕ್ಷಕ; ವಿಚಾರಣೆ ವೇಳೆ ಆತ ಹೇಳಿದ್ದು ಶಾಕಿಂಗ್​

Follow us on

Click on your DTH Provider to Add TV9 Kannada