ಸೋಮವಾರ ರಾತ್ರಿ ಮಲೆನಾಡ ಆಗಸದಲ್ಲಿ ಕಂಡ ಹಣತೆಗಳ ಸಾಲು ಏನು ಅಂತ ಖಗೋಳ ವಿಜ್ಞಾನಿಗಳೇ ನಮಗೆ ಹೇಳಬೇಕು!

ಹಣತೆಗಳಂತೆ ಗೋಚರಿಸುವ ಸುಮಾರು 50 ದೀಪಗಳು ಸಾಲಾಗಿ ಒಂದೇ ಸರಳರೇಖೆಯಲ್ಲಿ ಕಾಣಿಸಿಕೊಂಡಿವೆ. ಎಲ್ಲ ದೀಪಗಳ ಆಕಾರ ಮತ್ತು ಅಳತೆ ಒಂದೇ ಆಗಿದೆ. ಅವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಿದಂತೆ ಕಂಡಿವೆ.

TV9kannada Web Team

| Edited By: Arun Belly

Dec 21, 2021 | 8:42 PM

ನಮ್ಮ ಬಾಹ್ಯಾಕಾಶವೇ ಒಂದು ಕೌತುಕ ನಮಗೆ. ರಾತ್ರಿ ಸಮಯದಲ್ಲಿ ಆಗಸ ತಿಳಿಯಾಗಿದ್ರೆ ಲಕಲಕ ಹೊಳೆಯುವ ನಕ್ಷತ್ರಗಳ ಜೊತೆಗೆ ನಮಗೆ ಏನೆಲ್ಲ ಕಾಣಿಸುತ್ತವೆ. ನಕ್ಷತ್ರಪುಂಜ, ಧೂಮಕೇತು, ಗ್ರಹಗಳು, ಉದುರುವ ನಕ್ಷತ್ರ, ಆಗಾಗ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಕೆಂಪು ದೀಪಗಳನ್ನು ಮಿಣುಕಿಸುತ್ತಾ ಸಾಗುವ ವಿಮಾನಗಳು, ಇನ್ನೂ ಹಲವಾರು ಸಂಗತಿಗಳು. ಆದರೆ, ಸೋಮವಾರ ರಾತ್ರಿ ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ಕಂಡಂಥ ದೃಶ್ಯ ಹಿಂದೆ ಯಾವತ್ತೂ ಕಂಡಿಲ್ಲ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಇಂಥ ದೃಶ್ಯವನ್ನು ನೋಡುವ ಅವಕಾಶ ಸಿಕ್ಕರೂ ಸಿಗಬಹುದು.

ಹಣತೆಗಳಂತೆ ಗೋಚರಿಸುವ ಸುಮಾರು 50 ದೀಪಗಳು ಸಾಲಾಗಿ ಒಂದೇ ಸರಳರೇಖೆಯಲ್ಲಿ ಕಾಣಿಸಿಕೊಂಡಿವೆ. ಎಲ್ಲ ದೀಪಗಳ ಆಕಾರ ಮತ್ತು ಅಳತೆ ಒಂದೇ ಆಗಿದೆ. ಅವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಿದಂತೆ ಕಂಡಿವೆ. ಇದೇನಿರಬಹುದು ಅಂತ ಯೋಚನೆ ಮಾಡಿ ಜನ ತಲೆ ಕೆಡಿಸಿಕೊಂಡಿದ್ದಾರೆ.

ಒಬ್ಬೊಬ್ಬರು ಒಂದೊಂದು ಬಗೆಯ ವಿಶ್ಲೇಷಣೆ ನೀಡುತ್ತಿದ್ದಾರೆ. ಕೆಲವರು ಇಲಾನ್ ಮಸ್ಕ್​ನ ಸ್ಟಾರ್ ಲಿಂಕ್ ಬ್ರಾಡ್ ಬಾಂಡ್ ಅಂತ ಹೇಳಿದರೆ ಇನ್ನೂ ಕೆಲವರು ಕ್ರಿಸ್ಮಸ್ ಸಮಯವಾಗಿರುವುದರಿಂದ ಸಂತಾ ಕ್ಲಾಸ್ ಗಿಫ್ಟ್​ಗಳೊಂದಿಗೆ ಬಂದಿರಬಹುದು ಅಂತ ಹೇಳಿದ್ದಾರೆ.

ಜನರ ಪ್ರತಿಕ್ರಿಯೆಗಳನ್ನು ನೋಡಿದ್ದೇಯಾದರೆ, ಈ ದೃಶ್ಯ ಕೇವಲ ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ಮಾತ್ರ ಕಂಡಿಲ್ಲ. ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲೂ ಕಂಡಿದೆ. ಅನೇಕ ಜನ ನೋಡಿರುವುದಾಗಿ ಹೇಳುತ್ತಿದ್ದಾರೆ.

ಅಸಲಿಗೆ ಈ ದೀಪಗಳ ಅಸಲಿಯತ್ತೇನು ಅಂತ ವಿಜ್ಞಾನಿಗಳೇ ಅವುಗಳ ಮೇಲೆ ಬೆಳಕು ಚೆಲ್ಲಬೇಕು!

ಇದನ್ನೂ ಓದಿ:    Viral Video: ಕಾಡೆಮ್ಮೆಯ ಬೆನ್ನತ್ತಿ ಓಡಿದ ಹುಲಿರಾಯ; ಮೈ ಜುಮ್ಮೆನಿಸುವ ವಿಡಿಯೋ ಶೇರ್ ಮಾಡಿದ ರಣದೀಪ್ ಹೂಡಾ

Follow us on

Click on your DTH Provider to Add TV9 Kannada