AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದಿಂದ ಭಾರತಕ್ಕೆ ರೂ 400 ಕೋಟಿ ಮೌಲ್ಯದ ಹೆರಾಯಿನ್ ಹೊತ್ತು ತರುತ್ತಿದ್ದ ಬೋಟ್ ಮತ್ತು ಆರು ಜನರು ಗುಜರಾತ್ ಎಟಿಎಸ್ ವಶಕ್ಕೆ

ಪಾಕಿಸ್ತಾನದಿಂದ ಭಾರತಕ್ಕೆ ರೂ 400 ಕೋಟಿ ಮೌಲ್ಯದ ಹೆರಾಯಿನ್ ಹೊತ್ತು ತರುತ್ತಿದ್ದ ಬೋಟ್ ಮತ್ತು ಆರು ಜನರು ಗುಜರಾತ್ ಎಟಿಎಸ್ ವಶಕ್ಕೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on:Dec 21, 2021 | 9:51 PM

Share

ಬೋಟ್ ಅಂತರರಾಷ್ಟ್ರೀಯ ಮೆರಿಟೈಮ್ ಬಾರ್ಡರ್ ದಾಟಿ ಜಖಾಯು ಕರಾವಳಿ ತೀರದಿಂದ 35 ನಾಟಿಕಲ್ ಕಿಮೀ ದೂರದಲ್ಲಿ ಭಾರತದ ಸಮುದ್ರ ಭಾಗವನ್ನು ಪ್ರವೇಶಿಸುತ್ತಿದ್ದಂತೆ ವಶಕ್ಕೆ ತೆಗೆದುಕೊಳ್ಳಲಾಯಿತು.

ಸುಮಾರು ರೂ 400 ಕೋಟಿ ಮೌಲ್ಯದ 77 ಕೆಜಿಯಷ್ಟು ತೂಕದ ಹೆರಾಯಿನ್ ಅನ್ನು ಮೀನು ಹಿಡಿಯುವ ಬೋಟ್ ಒಂದರಲ್ಲಿ ತುಂಬಿಕೊಂಡು ಗುಜರಾತಿನ ಕರಾವಳಿ ಪ್ರದೇಶದ ಮೂಲಕ ಭಾರತಕ್ಕೆ ತರುವ ಪ್ರಯತ್ನದಲ್ಲಿದ್ದ 6 ಜನರ ಗುಂಪೊಂದನ್ನು ಸೋಮವಾರ ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಗುಜರಾತ್ ಭಯತ್ಪಾದಕ ನಿರೋಧ ದಳದ (ಎಟಿಎಸ್) ಅಧಿಕಾರಿಗಳು ಸೆರೆಹಿಡಿದಿದ್ದಾರೆ. ನಮಗೆ ಲಭ್ಯವಾಗಿರುವ ಮೂಲಗಳ ಪ್ರಕಾರ ಕಛ್ ಜಿಲ್ಲೆಯ ಜಖಾಯು ಕರಾವಳಿ ತೀರದಿಂದ ಸುಮಾರು 35 ನಾಟಿಕಲ್ ಮೈಲಿ ದೂರದಲ್ಲಿ ಭಾರತಕ್ಕೆ ಸೇರಿದ ಸಮುದ್ರ ಭಾಗದ ನೀರಿನಲ್ಲಿ ಬೋಟ್ ಸಮೇತ ದುರುಳರನ್ನು ವಶಪಡಿಸಿಕೊಳ್ಳಲಾಯಿತು.

ಗುಜರಾತ್ ರಕ್ಷಣಾ ವ್ಯವಸ್ಥೆಯ ಸಾರ್ವಜಿನಿಕ ಸಂಪರ್ಕಾಧಿಕಾರಿ ಒಬ್ಬರು ಟ್ವೀಟ್ ಮೂಲಕ ಈ ವಿಷಯವನ್ನು ದೃಢೀಕರಿಸಿದ್ದಾರೆ. ‘ಕೋಸ್ಟ್ ಗಾರ್ಡ್ ಸಿಬ್ಬಂದಿ ಮತ್ತು ಎಟಿಎಸ್ ಅಧಿಕಾರಿಗಳು ‘ಅಲ್ ಹುಸೇನಿ’ ಹೆಸರಿನ ಪಾಕಿಸ್ತಾನಿ ಫಿಶಿಂಗ್ ಬೋಟನ್ನು 77 ಕೆಜಿ ಹೆರಾಯಿನ್ ಮತ್ತು ಬೋಟ್ನಲ್ಲಿದ್ದ ಆರು ಜನರ ಸಮೇತ ವಶಪಡಿಸಿಕೊಂಡಿದ್ದಾರೆ,’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ವಶಪಡಿಸಿಕೊಂಡ ಬೋಟನ್ನು ನಂತರ ಹೆಚ್ಚಿನ ತನಿಖೆಗಾಗಿ ಜಖಾಯು ತೀರಕ್ಕೆ ತರಲಾಯಿತು ಎಂದು ಅವರು ಹೇಳಿದ್ದಾರೆ.

ಗುಜರಾತಿನ ಎಟಿಎಸ್ ಬಿಡುಗಡೆ ಮಾಡಿರುವ ಪ್ರಕಟಣೆಯೊಂದರ ಪ್ರಕಾರ ಪಾಕಿಸ್ತಾನದ ಈ ಬೋಟ್ ಕರಾಚಿ ಬಂದರಿನಿಂದ ಹೊರಟು ಹೈ ಫ್ರೀಕ್ವೆನ್ಸಿ (ವಿ ಎಚ್ ಎಫ್) ರೇಡಿಯೋ ಚ್ಯಾನೆಲೊಂದರ ಮೂಲಕ ಡ್ರಗ್ಸ್ ಕಳ್ಳಸಾಗಣೆದಾರರು ಹರಿ-1 ಮತ್ತು ಹರಿ-2 ಎಂಬ ಕೋಡ್ ಪದಗಳನ್ನು ಬಳಸಿ ಭಾರತದಲ್ಲಿ ಡ್ರಗ್ಸ್ ನ ಡೆಲಿವರಿ ತೆಗೆದುಕೊಳ್ಳುವವರ ಜೊತೆ ಸಂಪರ್ಕ ಸಾಧಿಸುವ ಪ್ರಯತ್ನ ಮಾಡಿದ್ದಾರೆ.

ಎಟಿಎಸ್ ಗೆ ಡ್ರಗ್ಸ್ ಹೊತ್ತ ಬೋಟು ಭಾರತಕ್ಕೆ ಸುಳಿವು ಸಿಕ್ಕ ಕೂಡಲೇ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಬೋಟ್ ಅಂತರರಾಷ್ಟ್ರೀಯ ಮೆರಿಟೈಮ್ ಬಾರ್ಡರ್ ದಾಟಿ ಜಖಾಯು ಕರಾವಳಿ ತೀರದಿಂದ 35 ನಾಟಿಕಲ್ ಕಿಮೀ ದೂರದಲ್ಲಿ ಭಾರತದ ಸಮುದ್ರ ಭಾಗವನ್ನು ಪ್ರವೇಶಿಸುತ್ತಿದ್ದಂತೆ ವಶಕ್ಕೆ ತೆಗೆದುಕೊಳ್ಳಲಾಯಿತು.

ಇದನ್ನೂ ಓದಿ:    ಮುಂದುವರಿದ ಎಮ್ಇಎಸ್ ಪುಂಡರ ಪುಂಡಾಟಿಕೆ! ಬಸ್​ಗೆ ಎಮ್ಇಎಸ್ ಧ್ವಜ ಕಟ್ಟಿ, ಮಸಿ ಬಳಿದ ಪುಂಡರು; ವಿಡಿಯೋ ವೈರಲ್ 

Published on: Dec 21, 2021 09:50 PM