ಈ ವರ್ಷವೂ ನೈಸರ್ಗಿಕ ವಿಕೋಪಗಳು ನಮ್ಮನ್ನು ಕಾಡಿದವು ಮತ್ತು ಅನೇಕರು ಪ್ರಾಣ ಕಳೆದುಕೊಂಡರು!
ಪ್ರತಿವರ್ಷದಂತೆ 2021ರಲ್ಲೂ ಹಲವಾರು ನೈಸರ್ಗಿಕ ವಿಕೋಪಗಳು ಜರುಗಿದವು ಮತ್ತು ಅನೇಕರು ಬಲಿಯಾದರು. ವರ್ಷಾರಂಭದಲ್ಲೇ ಅಮೆರಿಕ ಮತ್ತು ಕೆನಾಡಾನಲ್ಲಿ ಬೀಸಿದ ಬಿಸಿಗಾಳಿಯಿಂದಾಗಿ 400ಕ್ಕೂ ಹೆಚ್ಚು ಜನ ಸಾವನ್ನಪ್ಪಿದರು.
ವೈಜ್ಞಾನಿಕವಾಗಿ ನಾವೆಷ್ಟೇ ಮುಂದುವರಿದರೂ, ಬೇರೆ ಗ್ರಹಗಳಲ್ಲಿ ವಾಸ ಮಾಡಲಾರಂಭಿಸಿದರೂ ನಿಸರ್ಗದ ಮುಂದೆ ನಾವು ಏನೆಂದರೆ ಏನೂ ಅಲ್ಲ. ಪ್ರತಿವರ್ಷ ನೈಸರ್ಗಿಕ ವಿಕೋಪಗಳು ಬೇರೆ ಬೇರೆ ರೂಪದಲ್ಲಿ ನಮ್ಮನ್ನು ಬಾಧಿಸಿ ಸಾವಿರಾರು ಜನರನ್ನು ಬಲಿತೆಗೆದುಕೊಳ್ಳುತ್ತವೆ. ಜ್ವಾಲಾಮುಖಿ ಸ್ಫೋಟ, ಕಾಳ್ಗಿಚ್ಚು, ಭೂಕಂಪ, ಬಿರುಗಾಳಿ, ಚಂಡಮಾರುತ, ಅತಿವೃಷ್ಟಿ, ಪ್ರವಾಹ, ಹಿಮಪಾತ, ಸುನಾಮಿ-ಒಂದೇ ಎರಡೇ? ಇವುಗಳನ್ನು ತಡೆಯುವುದು ನಮ್ಮಿಂದ ಸಾಧ್ಯವಾಗುತ್ತಿಲ್ಲ, ಮುಂದೆಯೂ ಆಗಲಾರದು. ಸಂಬಂಧಪಟ್ಟ ಇಲಾಖೆಗಳು ಕೇವಲ ಮುನ್ನೆಚ್ಚರಿಕೆಯನ್ನು ಮಾತ್ರ ನಮಗೆ ನೀಡುತ್ತವೆ. ಅವರು ನೀಡುವ ಎಚ್ಚರಿಕೆಯಿಂದ ಸಾವು ನೋವಿನ ಸಂಖ್ಯೆ ಸ್ವಲ್ಪ ಕಡಿಮೆಯಾಗುತ್ತದೆ, ಅಷ್ಟೇ.
ಪ್ರತಿವರ್ಷದಂತೆ 2021ರಲ್ಲೂ ಹಲವಾರು ನೈಸರ್ಗಿಕ ವಿಕೋಪಗಳು ಜರುಗಿದವು ಮತ್ತು ಅನೇಕರು ಬಲಿಯಾದರು. ವರ್ಷಾರಂಭದಲ್ಲೇ ಅಮೆರಿಕ ಮತ್ತು ಕೆನಾಡಾನಲ್ಲಿ ಬೀಸಿದ ಬಿಸಿಗಾಳಿಯಿಂದಾಗಿ 400ಕ್ಕೂ ಹೆಚ್ಚು ಜನ ಸಾವನ್ನಪ್ಪಿದರು. ನಮ್ಮ ದೇಶದಲ್ಲೂ ಅಂಥ ಗಾಳಿ ಬೀಸುತ್ತದೆ ಅದರೆ, ಸಾವಿನ ಪ್ರಮಾಣ ಜಾಸ್ತಿ ಇರೋದಿಲ್ಲ.
ಜರ್ಮನಿಯಲ್ಲಿ ಇದ್ದಕಿದ್ದಂತೆ ಸುರಿದ ಭಾರಿಮಳೆಯ ಬಗ್ಗೆ ನಾವು ವರದಿ ಮಾಡಿದ್ದೆವು. ಪಕ್ಕದ ಬೆಲ್ಜಿಯಂ ಸಹ ಧಾರಾಕಾರವಾಗಿ ಸುರಿದ ಮಳೆಗೆ ಸಾಕ್ಷಿಯಾಗಿತ್ತು. ಮಳೆಯಿಂದ ಸೃಷ್ಟಿಯಾದ ಪ್ರವಾಹದಿಂದ ಎರಡೂ ದೇಶಗಳಲ್ಲಿ ಸುಮಾರು 170 ಜನ ಕೊಚ್ಚಿಕೊಂಡು ಹೋಗಿದ್ದರು.
ಕುಂಭದ್ರೋಣ ಕೇವಲ ಐರೋಪ್ಯ ರಾಷ್ಟ್ರಗಳಲ್ಲಿ ಮಾತ್ರ ಆಗಲಿಲ್ಲ. ಏಷ್ಯಾದ ಚೀನಾನಲ್ಲೂ ಮಳೆ ತಾಂಡವ ನೃತ್ಯ ನಡೆಸಿತು. ಕೇಂದ್ರೀಯ ಚೀನಾ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ 300 ಕ್ಕೂ ಹೆಚ್ಚು ಜನರನ್ನು ಮಳೆ ಬಲಿ ತೆಗೆದುಕೊಂಡಿತು. ಭಾರತದ ದಕ್ಷಿಣ ಮತ್ತು ಉತ್ತರ ಭಾರತದಲ್ಲಿ ಸುರಿದ ಭಾರಿ ಮಳೆಯಿಂದ ಸುಮಾರು 70 ಜನ ಪ್ರಾಣ ಕಳೆದುಕೊಳ್ಳಬೇಕಾಯಿತು.
ಸಾಮಾನ್ಯವಾಗಿ ಕಾಳ್ಗಿಚ್ಚು ನಮಗೆ ಹಾನಿ ಮಾಡುವುದಿಲ್ಲವಾದರೂ ಅದರಿಂದ ನಮ್ಮ ಪರಿಸರದ ಮೇಲೆ ಹೆಚ್ಚಿನ ಹಾನಿಯುಂಟಾಗುತ್ತಿದೆ. ಟರ್ಕಿ ಮತ್ತು ಗ್ರೀಸ್ ದೇಶಗಳ ವರದಿಯಾದ ಕಾಳ್ಳಿಚ್ಚಿನಿಂದ ಸಾವಿರಾರು ಹೆಕ್ಟೇರ್ ಅರಣ್ಯಪ್ರದೇಶ ಅಗ್ನಿಗಾಹುತಿಯಾಯಿತು.
ವಿಶ್ವದ ಹಲವಾರು ಭಾಗಗಳಲ್ಲಿ ಜ್ವಾಲಾಮುಖಿಗಳು ಸಹ ಸ್ಫೋಟಗೊಂಡು ಹಾನಿಯನ್ನುಂಟು ಮಾಡಿದವು.
ಇದನ್ನೂ ಓದಿ: ಮುಂದುವರಿದ ಎಮ್ಇಎಸ್ ಪುಂಡರ ಪುಂಡಾಟಿಕೆ! ಬಸ್ಗೆ ಎಮ್ಇಎಸ್ ಧ್ವಜ ಕಟ್ಟಿ, ಮಸಿ ಬಳಿದ ಪುಂಡರು; ವಿಡಿಯೋ ವೈರಲ್