ವಿಧಾನ ಪರಿಷತ್ ಕಲಾಪ ಆರಂಭ; ನೇರ ಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ವಿಧಾನ ಪರಿಷತ್ ಕಲಾಪ ಆರಂಭ; ನೇರ ಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

TV9 Web
| Updated By: sandhya thejappa

Updated on: Dec 22, 2021 | 11:38 AM

ಆಕ್ರೋಶಗೊಂಡ ಪ್ರತಾಪಚಂದ್ರ ಶೆಟ್ಟಿ ನಿಮ್ಮ ಭಿಕ್ಷೆ ಬೇಕಿಲ್ಲ, ನಂಗೇ ಯಾರ ಭಿಕ್ಷೆಯೂ ಬೇಕಿಲ್ಲ. ಹೌದು ನೀವೇನು ಅಂತಾ ಗೊತ್ತು ಬಿಡಿ ಅಂತ ಹೇಳಿದ್ದಾರೆ. ಈ ಎಲ್ಲಾ ನೇರ ದೃಶ್ಯಗಳನ್ನ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನ ಪರಿಷತ್ ಕಲಾಪ ಆರಂವಾಗಿದೆ. ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್ ಸದಸ್ಯ ಕೆ ಪ್ರತಾಪಚಂದ್ರ ಶೆಟ್ಟಿ ಸದನದ ಬಾವಿಗಿಳಿದ ಪ್ರತಿಭಟನೆ ಮಾಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 94ಸಿ ಅಡಿಯಲ್ಲಿ ಭೂ ಮಂಜೂರಾತಿ ಆಗಿರುತ್ತದೆ. ಆದರೆ ಈಗ ಡೀಮ್ಡ್ ಫಾರೆಸ್ಟ್ ಅನ್ನೋ ಕಾರಣಕ್ಕೆ ಭೂ ಮಂಜೂರಾತಿಯನ್ನ ತಡೆಹಿಡಿಯಲಾಗುತ್ತದೆ. ಇದು ಮುಗ್ಧರಿಗೆ ಮಾಡುತ್ತಿರುವ ಅನ್ಯಾಯ, ಇದಕ್ಕೆ ನ್ಯಾಯ ಕೊಡಿ ಅಂತ ಹೇಳಿದರು. ಈ ವೇಳೆ ಪ್ರತಾಪ ಚಂದ್ರ ಶೆಟ್ಟಿ ಹಾಗೂ ಆರ್ ಅಶೋಕ್, ಸಿಸಿ ಪಾಟೀಲ್ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆ ದಿನ ಅಂತಾ ಮಾತನಾಡುತ್ತಿದ್ದೀರಾ ಮಾತಾಡಿ ಅಂತ ಅಶೋಕ್ ಹೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಪ್ರತಾಪಚಂದ್ರ ಶೆಟ್ಟಿ ನಿಮ್ಮ ಭಿಕ್ಷೆ ಬೇಕಿಲ್ಲ, ನಂಗೇ ಯಾರ ಭಿಕ್ಷೆಯೂ ಬೇಕಿಲ್ಲ. ಹೌದು ನೀವೇನು ಅಂತಾ ಗೊತ್ತು ಬಿಡಿ ಅಂತ ಹೇಳಿದ್ದಾರೆ. ಈ ಎಲ್ಲಾ ನೇರ ದೃಶ್ಯಗಳನ್ನ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.