ಮೈಸೂರಿನಲ್ಲಿ ನಕಲಿ ತುಪ್ಪ ಜಾಲ ಪತ್ತೆ ಪ್ರಕರಣ; ಬೆಂಗಳೂರಿನ ಗೋಡೌನ್‌ ಮೇಲೆ ಮಾದನಾಯಕನಹಳ್ಳಿ ಪೊಲೀಸರು ದಾಳಿ

ಮೈಸೂರಿನಲ್ಲಿ ನಕಲಿ ತುಪ್ಪ ಜಾಲ ಪತ್ತೆ ಪ್ರಕರಣ; ಬೆಂಗಳೂರಿನ ಗೋಡೌನ್‌ ಮೇಲೆ ಮಾದನಾಯಕನಹಳ್ಳಿ ಪೊಲೀಸರು ದಾಳಿ

TV9 Web
| Updated By: preethi shettigar

Updated on:Dec 22, 2021 | 8:23 AM

ನಕಲಿ ನಂದಿನಿ ತುಪ್ಪದ ರಹಸ್ಯ ರಸಹ್ಯವಾಗಿಯೇ ಉಳಿದಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀಸರು ಬೆಂಗಳೂರಿನ ಗೋಡೌನ್​ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ 15 ಲಕ್ಷ ರೂಪಾಯಿ ಮೌಲ್ಯದ ನಕಲಿ ತುಪ್ಪ ಸಿಕ್ಕಿದೆ.

ಮೈಸೂರಿನಲ್ಲಿ ನಕಲಿ ತುಪ್ಪ ಜಾಲ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಉತ್ತರ ತಾಲೂಕಿನ ಗೋಡೌನ್​ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಕಲಿ ನಂದಿನಿ ತುಪ್ಪ ಜಾಲ ಪತ್ತೆಯಾಗಿ ನಿನ್ನೆಗೆ (ಡಿಸೆಂಬರ್​ 21) 5 ದಿನ. ಜನರನ್ನು ಬೆಚ್ಚಿ ಬೀಳಿಸಿದ್ದ ಪ್ರಕರಣದಲ್ಲಿ ಇದುವರೆಗೂ ಆರೋಪಿಗಳು ಪತ್ತೆಯಾಗಿಲ್ಲ. ಈಗಾಗಿ ನಕಲಿ ನಂದಿನಿ ತುಪ್ಪದ ರಹಸ್ಯ ರಸಹ್ಯವಾಗಿಯೇ ಉಳಿದಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀಸರು ಬೆಂಗಳೂರಿನ ಗೋಡೌನ್​ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ 15 ಲಕ್ಷ ರೂಪಾಯಿ ಮೌಲ್ಯದ ನಕಲಿ ತುಪ್ಪ ಸಿಕ್ಕಿದೆ.

ಮೈಸೂರಿನಲ್ಲಿ ಆರೋಪಿಗಳಿನ್ನು ಸೆರೆ ಸಿಕ್ಕಿಲ್ಲ
ವಂಚನೆ, ಆಹಾರ ಕಲಬೆರಕೆ ಹಾಗೂ ಹಲವರಿಂದ ವಂಚನೆ ಆರೋಪದಡಿ ಜೆಪಿ ನಗರದ ಮುರುಗೇಶ್, ಅಶ್ವಿನಿ, ಮೈಸೂರಿನ ಸಂತೋಷ್, ರಾಘವೇಂದ್ರ, ನಗರದ  ಕುಮಾರ್ ವಿರುದ್ದ ಎಫ್​ಐಆರ್​ ದಾಖಲಾಗಿದೆ. ಕಾರ್ಯಾಚರಣೆ ಮಾಡಿದ ವೇಳೆಗೆ ಈ ಎಲ್ಲಾ ಆರೋಪಿಗಳು ಓಡಿ ಹೋಗಿದ್ದರು. ಇನ್ನು ಇವರ ಸುಳಿವು ಪತ್ತೆಯಾಗಿಲ್ಲ.

ಇದನ್ನೂ ಓದಿ:
ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಿನ್ನಿಸುವ ವ್ಯವಸ್ಥಿತ ಜಾಲವೊಂದು ಪತ್ತೆ; ವಿಡಿಯೋ ನೋಡಿ

ಒಮಿಕ್ರಾನ್ ಬರದಂತೆ ಔಷಧಿ ಕೊಡುತ್ತೇನೆ ಎಂದು ವಂಚನೆ; ನಕಲಿ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ

Published on: Dec 22, 2021 08:20 AM