ನಮ್ಮ ಹತ್ತಿರದವರನ್ನು ಕಳೆದುಕೊಂಡ ನಂತರ ದುಃಖವನ್ನು ಮೆಟ್ಟಿ ಬದುಕು ನಡೆಸುವುದು ಹೇಗೆ ಅಂತ ಡಾ ಸೌಜನ್ಯ ವಶಿಷ್ಠ ವಿವರಿಸುತ್ತಾರೆ
ಹಾಗಂತ ನಮ್ಮ ಬದುಕು ನಿಂತ ನೀರಲ್ಲವಲ್ಲ. ಆ ಕಠಿಣ ಸ್ಥಿತಿಯೊಂದಿಗೆ ಏಗುವುದನ್ನು ನಾವು ಅಭ್ಯಾಸ ಮಾಡಿಕೊಳ್ಳಬೇಕು, time is the best healer ಎಂದು ಸೌಜನ್ಯ ಹೇಳುತ್ತಾರೆ.
ನಮ್ಮ ಕುಟುಂಬದ ಸದಸ್ಯರ, ಆತ್ಮೀಯರ, ಗೆಳೆಯರ ಸಾವು ನಮ್ಮನ್ನು ಧೃತಿಗೆಡಿಸುತ್ತದೆ, ಕಂಗಾಲಾಗಿಸಿಬಿಡುತ್ತದೆ. ಸತ್ತವರು ನಮಗೆ ಬಹಳ ಹತ್ತಿರದವರಾಗಿದ್ದರೆ, ಒಂದು ಬಗೆಯ ಶೂನ್ಯತೆ ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ದುಃಖದಲ್ಲಿ ಕೆಲವರು ಅದೆಷ್ಟು ಹತಾಷರಾಗಿ ಬಿಡುತ್ತಾರೆಂದರೆ ತಮ್ಮ ಜೀವನವನ್ನೂ ಕಳೆದುಕೊಂಡು ಬಿಡುವ ಯೋಚನೆ ಮಾಡಲಾರಂಭಿಸುತ್ತಾರೆ. ಅದರೆ ಅಂಥ ಯೋಚನೆ ನಮ್ಮಲ್ಲಿ ಹುಟ್ಟಿಕೊಳ್ಳಲು ಬಿಡುವುದೇ ತಪ್ಪು ಎಂದು ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ. ಸಾವಿನಂಥ ಘಟನೆಗಳು ಸಂಭವಿಸಿದಾಗ ಸ್ಪೆಕ್ಟ್ರಮ್ ಆಫ್ ಫೀಲಿಂಗ್ಸ್ ನಮ್ಮನ್ನು ಆವರಿಸುತ್ತದೆ ಎಂದು ಅವರು ಹೇಳುತ್ತಾರೆ. ಕೆಲವು ಸಲ ಅಗಲಿದರ ಸಾವಿಗೆ ನಾನೇ ಕಾರಣನಾದೆನೇನೋ ಎಂಬ ಅಪರಾಧಿ ಪ್ರಜ್ಞೆ ನಮ್ಮನ್ನು ಕಾಡುತ್ತದೆ. ಏನೆಲ್ಲ ಯೋಚನೆಗಳು ನಮ್ಮಲ್ಲಿ ಹುಟ್ಟಿಕೊಂಡು ಬದುಕು ನೀರಸ ಅನಿಸತೊಡಗುತ್ತದೆ.
ಆದರೆ, ಇಂಥ ಸ್ಥಿತಿ ಎಲ್ಲರ ಬದುಕಿನಲ್ಲೂ ಬರುತ್ತದೆ. ಸಾವು ಎಲ್ಲರಿಗೂ ನಿಶ್ಚಿತ, ಅದು ಯಾರನ್ನೂ ಬಿಡಲಾರದು. ಭೂಮಿಯ ಮೇಲೆ ನಾವು ಅತಿಥಿಗಳು. ನಿಸರ್ಗದ ನಿಯಮವೇ ಹಾಗೆ, ಅದರಿಂದ ತಪ್ಪಿಸಿಕೊಳ್ಳಲಾಗದು. ಹತ್ತಿರದವರ ಸಾವು ನಮ್ಮನ್ನು ಸದಾ ಕಾಡುತ್ತದೆ ಅದನ್ನು ಮರೆಸಲು ಸಾಧ್ಯವಾಗದು.
ಹಾಗಂತ ನಮ್ಮ ಬದುಕು ನಿಂತ ನೀರಲ್ಲವಲ್ಲ. ಆ ಕಠಿಣ ಸ್ಥಿತಿಯೊಂದಿಗೆ ಏಗುವುದನ್ನು ನಾವು ಅಭ್ಯಾಸ ಮಾಡಿಕೊಳ್ಳಬೇಕು, time is the best healer ಎಂದು ಸೌಜನ್ಯ ಹೇಳುತ್ತಾರೆ.
ಹಾಗಾದರೆ, ದುಃಖದಿಂದ ಮೇಲೆ ಮೇಲೆ ಬರಲು ನಾವು ಏನು ಮಾಡಬೇಕು ಎನ್ನುವುದನ್ನು ಸೌಜನ್ಯ ವಿವರಿಸುತ್ತಾರೆ. ನಮ್ಮೆಲ್ಲರಿಗೆ ಬದುಕಿನಲ್ಲಿ ಒಂದು ಉದ್ದೇಶವಿದೆ ಮತ್ತು ನಮ್ಮವೇ ಆದ ಜವಾಬ್ದಾರಿಗಳಿವೆ. ನಮ್ಮನ್ನು ಅಗಲಿದವರು ನಮಗಾಗಿ ಅವರ ಆದರ್ಶಗಳನ್ನು ಬಿಟ್ಟುಹೋಗಿರುತ್ತಾರೆ. ಅವರು ಮಾಡಿದ ಒಳ್ಳೆಯ ಕೆಲಸಗಳು ನಮಗೆ ಪ್ರೇರಣೆಯಾಗುತ್ತವೆ.
ಅವರು ಬದುಕಿದ್ದಾಗ ಬೇರೆಯವರಿಗೆ ಸಹಾಯ ಮಾಡಿದ್ದರೆ, ನಾವು ಸಹ ಅದನ್ನು ಮುಂದುವರಿಸಿಕೊಂಡು ಹೋಗಬೇಕು. ನಮ್ಮನ್ನು ನಂಬಿಕೊಂಡು ಬದುಕುವವರನ್ನು ನಾವು ಕೈಬಿಡಬಾರದು. The flow of life is beyond amazing ಎಂದು ಡಾ ಸೌಜನ್ಯ ಹೇಳುತ್ತಾರೆ.
ಡಾ ಸೌಜನ್ಯ ಕೇವಲ 6ನೇ ಕ್ಲಾಸ್ನಲ್ಲಿ ಓದುವಾಗ ತಮ್ಮ ತಂದೆಯನ್ನು ಕಳೆದುಕೊಂಡರಂತೆ. ಅದನ್ನು ಅವರು ಈಗಲೂ ಮರೆಯುವುದು ಸಾಧ್ಯವಿಲ್ಲ. ಅದರೆ ತಂದೆ ಗತಿಸಿದ ನಂತರವೂ ಅವರು ಬದುಕನ್ನು ಸಾಗಿಸಿಕೊಂಡು ಬಂದಿದ್ದಾರೆ. ಹಾಗಾಗಿ ನಾವು ಬದುಕಿನ ಉದ್ದೇಶವನ್ನು ಈಡೇರಿಸಿಕೊಳ್ಳಬೇಕು, ಅದನ್ನು ಸಾರ್ಥಕಗೊಳಿಸಿಕೊಳ್ಳಬೇಕು.
ಇದನ್ನೂ ಓದಿ: ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವಧು-ವರರ ಮಧ್ಯೆ ಬಂದು ಪೋಸ್ ಕೊಟ್ಟ ನಾಯಿ; ವಿಡಿಯೋ ವೈರಲ್