ಫಲಾನುಭವಿಗಳ ಸಮಾವೇಶದಲ್ಲಿ ಸಿದ್ದರಾಮಯ್ಯ ಕೋಪದಿಂದ ಪೋಡಿಯಂ ಇಳಿದುಹೋಗಿದ್ದು ಯಾಕೆ ಗೊತ್ತಾ?
ಸಿದ್ದರಾಮಯ್ಯ ಸಿಟ್ಟಾಗಿದ್ದನ್ನು ಕಂಡು ಕುಪಿತರಾದ ಶಿವಲಿಂಗೇಗೌಡ, ಸಚಿವ ರಾಜಣ್ಣ ಮತ್ತು ಸಂಸದ ಶ್ರೇಯಸ್ ಪಟೇಲ್ ಫೀಲ್ಡಿಗಿಳಿದರು. ಶಿವಲಿಂಗೇಗೌಡರಂತೂ ತಮ್ಮ ಅಭಿಮಾನಿಗಳೊಂದಿಗೆ ಗದರುತ್ತಲೇ ಮಾತಾಡಿದರು. ತಾನು ಅತ್ಯಂತ ಮುತುವರ್ಜಿಯಿಂದ ಏರ್ಪಡಿಸಿದ ಸಮಾವೇಶ ಹೀಗೆ ಮುಂದುವರಿಯುವುದು ಅಥವಾ ಮುಕ್ತಾಯಗೊಳ್ಳುವುದು ಅವರಿಗೆ ಬೇಕಿರಲಿಲ್ಲ. ಅವರ ಮತ್ತು ರಾಜಣ್ಣನವರ ಪ್ರಯತ್ನದಿಂದ ಜನ ಶಾಂತಗೊಂಡ ಬಳಿಕ ಸಿಎಂ ಮಾತು ಮುಂದುವರಿಸಿದರು.
ಹಾಸನ, ಜುಲೈ 26: ಶಿವಲಿಂಗೇಗೌಡರಿಗೆ ರಾಜಕೀಯ ಭವಿಷ್ಯ ಇದೆ ಎಂದು ಪೋಡಿಯಂ ಮೇಲೆ ನಿಂತು ಸಿದ್ದರಾಮಯ್ಯ ಹೇಳುತ್ತಿದ್ದರೂ ಅರಸೀಕೆರೆ ಜನರಿಗೆ ಮುಖ್ಯಮಂತ್ರಿಯಿಂದ (chief minister) ತಮ್ಮ ಶಾಸಕನನ್ನು ಮಂತ್ರಿ ಮಾಡುವ ಭರವಸೆ ಬೇಕಿತ್ತು. ಅದನ್ನು ಅವರು ಹೇಳಲಿ ಅಂತ ಕಾಯುತ್ತಿದ್ದರು. ಅದರೆ ಸಿದ್ದರಾಮಯ್ಯ ಬೇರೆ ರೀತಿಯಲ್ಲಿ ಹೇಳಿದಾಗ ಗೌಡರ ಅಭಿಮಾನಿಗಳ ತಾಳ್ಮೆ ಮೀರಿತು ಮತ್ತು ಗದ್ದಲಮಯ ವಾತಾವರಣ ಸೃಷ್ಟಿಯಾಯಿತು. ಸಿದ್ದರಾಮಯ್ಯ ಮೊದಲು ಪ್ರೀತಿಯಿಂದ ಅಮೇಲೆ ಗದರಿ ಹೇಳಿದರೂ ಪ್ರಯೋಜನವಾಗಲಿಲ್ಲ, ಗಲಾಟೆ ಹೆಚ್ಚುತ್ತಾ ಹೋದಾಗ ತಾಳ್ಮೆ ಕಳೆದುಕೊಳ್ಳುವ ಸರದಿ ಮುಖ್ಯಮಂತ್ರಿಯವರದ್ದಾಯಿತು. ಅವರು ತಮ್ಮ ಭಾಷಣವನ್ನು ನಿಲ್ಲಿಸಿ ಪೋಡಿಯಂನಿಂದ ಇಳಿದು ತಾವು ಕುಳಿತ ಸ್ಥಳಕ್ಕೆ ತೆರಳಿದರು.
ಇದನ್ನೂ ಓದಿ: ಓಬಿಸಿ ಸಲಹಾ ಸಮಿತಿಗೆ ಸಿದ್ದರಾಮಯ್ಯ ಅಧ್ಯಕ್ಷನಾದರೂ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತಿಲ್ಲ: ಸತೀಶ್ ಜಾರಕಿಹೊಳಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ