AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ವಧು-ವರರ ಮಧ್ಯೆ ಬಂದು ಪೋಸ್ ಕೊಟ್ಟ ನಾಯಿ; ವಿಡಿಯೋ ವೈರಲ್

ವಧುವಿನ ಮುದ್ದಿನ ನಾಯಿ ಕೂಡ ತನ್ನ ಒಡತಿಯ ಮದುವೆಗಾಗಿ ಸುಂದರವಾದ ಬಟ್ಟೆಯನ್ನು ತೊಟ್ಟು ರೆಡಿಯಾಗಿತ್ತು. ತನ್ನ ಒಡತಿಯ ಜೊತೆ ತಾನೂ ಡ್ಯಾನ್ಸ್ ಮಾಡಲು ಆ ನಾಯಿ ಸ್ಟೇಜ್ ಏರಿತ್ತು.

ಮದುವೆಯಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ವಧು-ವರರ ಮಧ್ಯೆ ಬಂದು ಪೋಸ್ ಕೊಟ್ಟ ನಾಯಿ; ವಿಡಿಯೋ ವೈರಲ್
ಮದುವೆಯಲ್ಲಿ ನಾಯಿಯ ಎಂಟ್ರಿ
TV9 Web
| Updated By: ಸುಷ್ಮಾ ಚಕ್ರೆ|

Updated on: Dec 20, 2021 | 2:44 PM

Share

ವಿಭಿನ್ನವಾಗಿ ಮತ್ತು ಅದ್ದೂರಿಯಾಗಿ ಮದುವೆಯಾಗಬೇಕೆಂಬುದು ಬಹುತೇಕರ ಆಸೆ. ತಮ್ಮ ಕನಸಿನಂತೆ ಮದುವೆಯಾದ ಜೋಡಿಯೊಂದು ಮದುವೆಯ ನಂತರ, ಡ್ಯಾನ್ಸ್​ ಪಾರ್ಟಿ ಮಾಡಿದ್ದಾರೆ. ಕಪ್ಪು ಟುಕ್ಸೆಡೊದಲ್ಲಿ ಮಿಂಚುತ್ತಿದ್ದ ಗಂಡ ಮತ್ತು ಬಿಳಿ ಆಫ್-ಶೋಲ್ಡರ್ ಗೌನ್ ಧರಿಸಿದ್ದ ಹೆಂಡತಿ ಮ್ಯೂಸಿಕ್​ಗೆ ಹೆಜ್ಜೆ ಹಾಕುತ್ತಾ, ಒಬ್ಬರನ್ನೊಬ್ಬರು ನೋಡುತ್ತಾ, ಡ್ಯಾನ್ಸ್ ಮಾಡುತ್ತಾ ಮೈಮರೆತಿದ್ದರು. ಆ ಸುಂದರವಾದ ನೃತ್ಯವನ್ನು ನೋಡುತ್ತಿದ್ದ ಅತಿಥಿಗಳ ಕಣ್ಣು ಆ ರೊಮ್ಯಾಂಟಿಕ್ ಕಪಲ್ ಬದಲಾಗಿ ಅವರ ಮುದ್ದಿನ ನಾಯಿಯ ಮೇಲೇ ಇತ್ತು.

ವಧುವಿನ ಮುದ್ದಿನ ನಾಯಿ ಕೂಡ ತನ್ನ ಒಡತಿಯ ಮದುವೆಗಾಗಿ ಸುಂದರವಾದ ಬಟ್ಟೆಯನ್ನು ತೊಟ್ಟು ರೆಡಿಯಾಗಿತ್ತು. ತನ್ನ ಒಡತಿಯ ಜೊತೆ ತಾನೂ ಡ್ಯಾನ್ಸ್ ಮಾಡಲು ಆ ನಾಯಿ ಸ್ಟೇಜ್ ಏರಿತ್ತು. ಆ ನಾಯಿ ಸ್ಟೇಜ್ ಹತ್ತುತ್ತಿದ್ದಂತೆ ಮದುಮಕ್ಕಳ ಮೇಲಿದ್ದ ಎಲ್ಲರ ಕಣ್ಣು ಆ ನಾಯಿಯತ್ತ ಹೋಯಿತು. ವಧು-ವರರು ಡ್ಯಾನ್ಸ್ ಮಾಡುತ್ತಾ ಅಪ್ಪಿಕೊಳ್ಳುವಾಗ ಅವರಿಬ್ಬರ ನಡುವೆ ನುಸುಳಿ ಹೋಗಿ ಡಿಸ್ಟರ್ಬ್ ಮಾಡಿದ ನಾಯಿಯ ವಿಡಿಯೋ ವೈರಲ್ ಆಗಿದೆ.

ಆ ವೈರಲ್ ವಿಡಿಯೋವನ್ನು 71,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವೈರಲ್ ಆಗಿರುವ ವೀಡಿಯೋದಲ್ಲಿ ನವವಿವಾಹಿತರು ವೇದಿಕೆಯ ಮೇಲೆ ಒಟ್ಟಿಗೆ ನೃತ್ಯ ಮಾಡುತ್ತಿದ್ದಾರೆ. ಎಲ್ಲರೂ ಅವರನ್ನು ಉತ್ತೇಜಿಸಲು ಚಪ್ಪಾಳೆ ತಟ್ಟುವಾಗ ಅವರು ಒಟ್ಟಿಗೆ ಸಂತೋಷದಿಂದ ಹೆಜ್ಜೆ ಹಾಕುತ್ತಿದ್ದರು. ಅಷ್ಟರಲ್ಲಿ ವಧುವಿನ ಮುದ್ದಿನ ನಾಯಿ ಶರ್ಟ್​ ಧರಿಸಿ, ವೇದಿಕೆ ಹತ್ತಿತು. ಆ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ನಾನೂ ನಿಮ್ಮ ಜೊತೆ ಡ್ಯಾನ್ಸ್ ಮಾಡಬಹುದಾ? ಎಂಬ ಕ್ಯಾಪ್ಷನ್​ ಹಾಕಿ ಈ ವೀಡಿಯೊ ಅಪ್​ಲೋಡ್ ಮಾಡಲಾಗಿದೆ. ಆ ಮುದ್ದಾದ ನಾಯಿಯ ಎಂಟ್ರಿ ನೋಡಿ ನೆಟ್ಟಿಗರು ಖುಷಿಯಾಗಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ವರನಿದ್ದ ಕುದುರೆ ಗಾಡಿಗೆ ಬೆಂಕಿ! ತಪ್ಪಿತು ಬಾರಿ ದೊಡ್ಡ ಅನಾಹುತ; ವಿಡಿಯೋ ವೈರಲ್

Viral Video: ಕಾಡೆಮ್ಮೆಯ ಬೆನ್ನತ್ತಿ ಓಡಿದ ಹುಲಿರಾಯ; ಮೈ ಜುಮ್ಮೆನಿಸುವ ವಿಡಿಯೋ ಶೇರ್ ಮಾಡಿದ ರಣದೀಪ್ ಹೂಡಾ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್