Video: ಪ್ರಾಣಿ ಸಂಗ್ರಹಾಲಯದಿಂದ ತಪ್ಪಿಸಿಕೊಳ್ಳಲು ಬೇಲಿ ಹತ್ತಿದ ತುಂಟ ಪಾಂಡಾ; ವಾಪಸ್ ಕರೆತರಲು ಜೈಲು ಸಿಬ್ಬಂದಿ ಮಾಡಿದ್ದೇನು?
ಬೀಜಿಂಗ್ನಲ್ಲಿರುವ ಈ ಮೃಗಾಲಯ ತನ್ನ ಟ್ವಿಟರ್ ಖಾತೆ Weibo ದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದೆ. ಮೆಂಗ್ ಲ್ಯಾನ್ ಪಾಂಡಾ ಇದುವರೆಗೆ ಯಾವುದೇ ಸಾರ್ವಜನಿಕರ ಸಂಪರ್ಕಕ್ಕೂ ಬಂದಿರಲಿಲ್ಲ. ಹಾಗೇ, ಪ್ರಾಣಿ ಸಂಗ್ರಹಾಲಯದಲ್ಲಿ ಸಂದರ್ಶಕರು ಭೇಟಿ ಕೊಡುವ ಪ್ರದೇಶದಲ್ಲೂ ಇರಲಿಲ್ಲ.
ಇಂಟರ್ನೆಟ್ನಲ್ಲಿ ವೈರಲ್ ಆಗುವ ಕೆಲವು ವಿಡಿಯೋಗಳು ಸಿಕ್ಕಾಪಟೆ ಖುಷಿ ಮೂಡಿಸುತ್ತವೆ. ಅದರಲ್ಲೂ ಪ್ರಾಣಿಗಳ ವಿಡಿಯೋಗಳೆಂತೂ ಮನಸಿಗೆ ಮುದ ನೀಡುವುದರಲ್ಲಿ ಎರಡು ಮಾತಿಲ್ಲ. ಇದೀಗ ಚೀನಾದ ಬೀಜಿಂಗ್ನಲ್ಲಿರುವ ಪ್ರಾಣಿ ಸಂಗ್ರಹಾಲಯದಲ್ಲಿ ದೊಡ್ಡದಾಗ ಪಾಂಡಾವೊಂದು ಝೂನಿಂದ ತಪ್ಪಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಂತೂ ಸಿಕ್ಕಾಪಟೆ ಮೆಚ್ಚಿಕೊಂಡಿದ್ದಾರೆ. ಅಂದಹಾಗೆ ಈ ಪಾಂಡಾದ ಹೆಸರು ಮೆಂಗ್ ಲ್ಯಾನ್. ಕೇವಲ 6ವರ್ಷ. ಇದು ಹೇಗಾದರೂ ಸರಿ ಝೂದಿಂದ ತಪ್ಪಿಸಿಕೊಂಡೇಬಿಡಬೇಕು ಎಂದು, ಆರು ಅಡಿಗಳಷ್ಟು ಎತ್ತರದ ಲೋಹದ ಬೇಲಿಯನ್ನು ಹತ್ತಿ, ಅಲ್ಲೆಲ್ಲ ಓಡಾಡಿದೆ. ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ಕೊಟ್ಟಿದ್ದ ಹಲವರು ಅದನ್ನೆಲ್ಲ ನಿಂತು ನೋಡಿದ್ದಾರೆ.
ಇದೊಂದು ತುಂಟ ಪಾಂಡಾ ಎಂದು ನೆಟ್ಟಿಗರು ಕರೆದಿದ್ದಾರೆ. ಪ್ರಾಣಿ ಸಂಗ್ರಹಾಲಯದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರುವ ಪ್ರದೇಶವನ್ನು, ಪ್ರಾಣಿಗಳನ್ನು ಕೂಡಿಹಾಕಿರುವ ಕೋಣೆಯಿಂದ ಬೇರ್ಪಡಿಸುವ ಬಫರ್ ಝೋನ್ ಬಳಿ ಪಾಂಡಾ ಬೇಲಿ ಹತ್ತಿದೆ. ಅದಾದ ಬಳಿಕ ಅದಕ್ಕೆ ಊಟದ ಆಮಿಷ ತೋರಿಸಿ ವಾಪಸ್ ಕರೆದುಕೊಂಡು ಹೋಗಲಾಗಿದೆ. ಆ ಪಾಂಡಾದ ಚಲನವಲನವನ್ನೇ ನೋಡುತ್ತಿರುವ ಜನರು ತಾವೂ ಕೂಡ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ.
ಬೀಜಿಂಗ್ನಲ್ಲಿರುವ ಈ ಮೃಗಾಲಯ ತನ್ನ ಟ್ವಿಟರ್ ಖಾತೆ Weibo ದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದೆ. ಮೆಂಗ್ ಲ್ಯಾನ್ ಪಾಂಡಾ ಇದುವರೆಗೆ ಯಾವುದೇ ಸಾರ್ವಜನಿಕರ ಸಂಪರ್ಕಕ್ಕೂ ಬಂದಿರಲಿಲ್ಲ. ಹಾಗೇ, ಪ್ರಾಣಿ ಸಂಗ್ರಹಾಲಯದಲ್ಲಿ ಸಂದರ್ಶಕರು ಭೇಟಿ ಕೊಡುವ ಪ್ರದೇಶದಲ್ಲೂ ಇರಲಿಲ್ಲ. ಆದರೆ ಅದೇನಾಯಿತೋ ಗೊತ್ತಿಲ್ಲ, ಬೇಲಿ ಹತ್ತಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿತು. ನಂತರ ಅಲ್ಲಿಯೇ ಇದ್ದ ಝೂ ಕೀಪರ್ ಪಾಂಡಾಕ್ಕೆ ಆಹಾರದ ಆಮಿಷ ತೋರಿಸಿದ. ಅದನ್ನು ನೋಡುತ್ತಿದ್ದಂತೆ ಪಾಂಡಾ ಬೇಲಿಯಿಂದ ಕೆಳಗೆ ಇಳಿಯಿತು. ಆಮೇಲೆ ಯಾವುದೇ ರೀತಿಯ ತೊಂದರೆಯನ್ನೂ ಕೊಡಲಿಲ್ಲ. ಅದರಷ್ಟಕ್ಕೆ ಝೂನಲ್ಲಿ ಆಟವಾಡುತ್ತಿತ್ತು. ಸಂತೋಷದಿಂದಲೇ ಇತ್ತು ಎಂದು ಹೇಳಿಕೊಂಡಿದೆ. ಮೆಂಗ್ ಲ್ಯಾನ್ ಮೊದಲಿನಿಂದಲೂ ಸ್ವಲ್ಪ ತುಂಟ ಸ್ವಭಾವವನ್ನೇ ಹೊಂದಿದೆ. ಆದರೆ ತಪ್ಪಿಸಿಕೊಳ್ಳಲು ಯತ್ನಿಸುತ್ತದೆ ಎಂದುಕೊಂಡಿರಲಿಲ್ಲ. ಇದೀಗ ಬೇಲಿಯ ಸುತ್ತಲ್ಲೂ ಇನ್ನಷ್ಟು ರೂಪಾಂತರ ಮಾಡಲಾಗುವುದು. ಮುಂದೆ ಇಂಥ ಪ್ರಯತ್ನಕ್ಕೆ ದಾರಿ ಮಾಡಿಕೊಡುವುದಿಲ್ಲ ಎಂದೂ ಝೂ ಹೇಳಿದೆ. ಅಂದಹಾಗೆ, ಈ ಪಾಂಡಾ 2015ರಲ್ಲಿ ಹುಟ್ಟಿದೆ. ಅದಾದ ಎರಡು ವರ್ಷಗಳ ನಂತರ ನಮ್ಮ ಝೂಕ್ಕೆ ಬಂದಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Viral Video: ಕಾಡೆಮ್ಮೆಯ ಬೆನ್ನತ್ತಿ ಓಡಿದ ಹುಲಿರಾಯ; ಮೈ ಜುಮ್ಮೆನಿಸುವ ವಿಡಿಯೋ ಶೇರ್ ಮಾಡಿದ ರಣದೀಪ್ ಹೂಡಾ