ಕುಟುಂಬದವರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾದ ಸಲಿಂಗಿ ಜೋಡಿ; ಹೈದರಾಬಾದ್​ನಲ್ಲಿ ನಡೆದ ಮದುವೆ ಫೋಟೋಗಳು ವೈರಲ್​

ಹೀಗೆ ವಿವಾಹವಾದವರು ಸುಪ್ರಿಯೋ ಚಕ್ರಬರ್ತಿ (31) ಮತ್ತು ಅಭಯ್​ ಡಾಂಗ್​(34). ಇವರಿಬ್ಬರೂ ಉಂಗುರವನ್ನು ಬದಲಿಸಿಕೊಂಡಿದ್ದಾರೆ. ಇವರಲ್ಲಿ ಸುಪ್ರಿಯೋ ಚಕ್ರಬರ್ತಿ ಪಶ್ಚಿಮಬಂಗಾಳದವರಾಗಿದ್ದು, ಅಭಯ್​ ಪಂಜಾಬ್​ನವರು.

ಕುಟುಂಬದವರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾದ ಸಲಿಂಗಿ ಜೋಡಿ; ಹೈದರಾಬಾದ್​ನಲ್ಲಿ ನಡೆದ ಮದುವೆ ಫೋಟೋಗಳು ವೈರಲ್​
ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಲಿಂಗಿ ಜೋಡಿ
Follow us
TV9 Web
| Updated By: Lakshmi Hegde

Updated on:Dec 20, 2021 | 2:59 PM

ಭಾರತದಲ್ಲಿ ಸಲಿಂಗಕಾಮ(Homosexual )ವನ್ನು ಕಾನೂನುಬದ್ಧಗೊಳಿಸಿ, ಸುಪ್ರೀಂಕೋರ್ಟ್ (Supreme Court) ಆದೇಶ ನೀಡಿ ಮೂರು ವರ್ಷಗಳೇ ಕಳೆದಿವೆ. ಸಾಂಪ್ರದಾಯಿಕ ದೇಶ ಭಾರತದಲ್ಲಿ ಸಲಿಂಗ ಕಾಮ (ಒಂದೇ ಲಿಂಗದ ಅಂದರೆ ಗಂಡು-ಗಂಡು, ಹೆಣ್ಣು-ಹೆಣ್ಣು ಇಬ್ಬರೂ ಪರಸ್ಪರ ಪ್ರೀತಿ, ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವುದು)ದ ಬಗ್ಗೆ ಮೊದಲಿನಿಂದಲೂ ವಿರೋಧವಿತ್ತು. ಆದರೆ ಅದನ್ನು ಸುಪ್ರೀಂಕೋರ್ಟ್ ಕಾನೂನು ಬದ್ಧಗೊಳಿಸಿದೆ. ಸಲಿಂಗಕಾಮ ಅಪರಾಧವಲ್ಲ ಎಂದು ಅಂದು ಕೋರ್ಟ್ ತೀರ್ಪು ನೀಡಿದ್ದರೂ, ಅದನ್ನು ಒಪ್ಪುವ ಮನಸುಗಳು ಇಲ್ಲಿ ತುಂಬ ಕಡಿಮೆ ಇವೆ.  ಜನ ಇನ್ನೂ ಸಂಪೂರ್ಣವಾಗಿ ಅದನ್ನು ಒಪ್ಪಿಕೊಂಡಿಲ್ಲ. ಆದರೆ ಸಲಿಂಗಿಗಳು ಈಗ ರಾಜಾರೋಶವಾಗಿ ಲಿವಿಂಗ್​ ಟುಗೆದರ್​ನಲ್ಲಿ ಇರುತ್ತಿದ್ದಾರೆ. ಹಾಗಂತ ಅಧಿಕೃತವಾಗಿ ವಿವಾಹ ಆಗುವವರು ತೀರ ವಿರಳ. ಯಾಕೆಂದರೆ ಭಾರತದಲ್ಲಿ ಸಲಿಂಗಿಗಳ ವಿವಾಹಕ್ಕೆ ಇನ್ನೂ ಸರ್ಕಾರದ ಅಧಿಕೃತ ಮುದ್ರೆ ಸಿಕ್ಕಿಲ್ಲ. ಹಾಗಿದ್ದಾಗ್ಯೂ..ಅಲ್ಲೊಂದು-ಇಲ್ಲೊಂದು ಸಲಿಂಗಿ ಜೋಡಿ ಮದುವೆಯಾಗುತ್ತಿರುವ ಪ್ರಕರಣಗಳೂ ಕಂಡುಬರುತ್ತಿವೆ.

ಇಷ್ಟೆಲ್ಲ ಪೀಠಿಕೆಯನ್ನು ಹಾಕಲು ಕಾರಣ ಇದೀಗ ಹೈದರಾಬಾದ್​ನಲ್ಲಿ ನಡೆದ ಸಲಿಂಗಿಗಳ ಮದುವೆ. ಇಬ್ಬರು ಪುರುಷರು ವಿವಾಹವಾಗಿದ್ದು, ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಇವರಿಬ್ಬರ ವಿವಾಹದ ಫೋಟೋಗಳು ಸಿಕ್ಕಾಪಟೆ ವೈರಲ್ ಆಗುತ್ತಿವೆ. ಹಾಗೇ, ಇಬ್ಬರು ಪುರುಷರ ವಿವಾಹಕ್ಕೆ ಅವರ ಮನೆಯವರು, ಕುಟುಂಬದವರು, ಹತ್ತಿರದ ಸ್ನೇಹಿತರು ಆಗಮಿಸಿ ಶುಭಕೋರಿದ್ದಾರೆ. ಅಂದಹಾಗೆ ಈ ಮದುವೆ ನಡೆದದ್ದು ಹೈದರಾಬಾದ್​ನ ಹೊರವಲಯದಲ್ಲಿರುವ ಒಂದು ರೆಸಾರ್ಟ್​ನಲ್ಲಿ. ಶನಿವಾರ ತೀರ ಖಾಸಗಿಯಾಗಿ ಸಮಾರಂಭ ನಡೆದಿದ್ದು, ಈಗ ಬೆಳಕಿಗೆ ಬಂದಿದೆ.

ಹೀಗೆ ವಿವಾಹವಾದವರು ಸುಪ್ರಿಯೋ ಚಕ್ರಬರ್ತಿ (31) ಮತ್ತು ಅಭಯ್​ ಡಾಂಗ್​(34). ಇವರಿಬ್ಬರೂ ಉಂಗುರವನ್ನು ಬದಲಿಸಿಕೊಂಡಿದ್ದಾರೆ. ಇವರಲ್ಲಿ ಸುಪ್ರಿಯೋ ಚಕ್ರಬರ್ತಿ ಪಶ್ಚಿಮಬಂಗಾಳದವರಾಗಿದ್ದು, ಅಭಯ್​ ಪಂಜಾಬ್​ನವರು. ಹೀಗಾಗಿ ಬಂಗಾಳಿ ಮತ್ತು ಪಂಜಾಬಿ ಎರಡೂ ಸಂಪ್ರದಾಯದಲ್ಲಿ ವಿವಾಹವಾಗಿದೆ. ಸುಪ್ರಿಯೋ ಚಕ್ರಬರ್ತಿ ಕೋಲ್ಕತ್ತದ ಪ್ರಮುಖ ಹೋಟೆಲ್​ ಮ್ಯಾನೇಜ್​ಮೆಂಟ್​ ಸಂಸ್ಥೆಯೊಂದರಲ್ಲಿ ಹಿರಿಯ ಉಪನ್ಯಾಸಕ. ಹಾಗೇ, ಅಭಯ್​ ದೆಹಲಿಯ ಎಂಎನ್​ಸಿ ಕಂಪನಿಯೊಂದರ ಉದ್ಯೋಗಿ. ಇವರಿಬ್ಬರೂ ಕಳೆದ 8 ವರ್ಷಗಳಿಂದ ರಿಲೇಶನ್​ಶಿಪ್​​ನಲ್ಲಿ ಇದ್ದರು. ಇದೀಗ ವಿವಾಹವಾಗಿದ್ದಾರೆ. ಹೈದರಾಬಾದ್​ನಲ್ಲಿ ಸೋಫಿಯಾ ಡೇವಿಡ್​ ಎಂಬ ತೃತೀಯಲಿಂಗಿಯೊಬ್ಬರು ಮದುವೆ ಮಾಡಿಸಿದ್ದಾರೆ. ಇವರಿಬ್ಬರೂ ತಮ್ಮ ಕೈಗೆಲ್ಲ ಮೆಹೆಂದಿ ಹಾಕಿಕೊಂಡ ಫೋಟೋಗಳು ವೈರಲ್ ಆಗಿವೆ. ಮದುವೆಗೆ ಅತಿಥಿಯಾಗಿ ಹೋಗಿದ್ದ ಹಿರಿಯ ಪತ್ರಕರ್ತರೊಬ್ಬರು ಮಾತನಾಡಿ, ಇವತ್ತೊಂದು ವಿಶೇಷ ಮದುವೆಗೆ ಸಾಕ್ಷಿಯಾಗಿದ್ದೆ. ಈ ವಿವಾಹಕ್ಕೆ ಇಬ್ಬರೂ ಪುರುಷರ ಕುಟುಂಬದವರು, ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಈ ಮದುವೆ ನೋಡಿದ ಬಳಿಕ ಭಾರತ ನಿಧಾನವಾಗಿ ಬದಲಾಗುತ್ತಿದೆ ಎಂದು ನನಗೆ ಅನ್ನಿಸಿತು ಎಂದು ಹೇಳಿದ್ದಾರೆ.

Gay Couple

ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಲಿಂಗಿ ಜೋಡಿ

Published On - 2:58 pm, Mon, 20 December 21

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ