Viral Video: ಕಾಡೆಮ್ಮೆಯ ಬೆನ್ನತ್ತಿ ಓಡಿದ ಹುಲಿರಾಯ; ಮೈ ಜುಮ್ಮೆನಿಸುವ ವಿಡಿಯೋ ಶೇರ್ ಮಾಡಿದ ರಣದೀಪ್ ಹೂಡಾ
Randeep Hooda: ರಣದೀಪ್ ಹೂಡಾ ಸಫಾರಿಗೆ ಹೋದಾಗ ತೆಗೆದ ಕಾಡೆಮ್ಮೆಯನ್ನು ಬೇಟೆಯಾಡುವ ಹುಲಿಯ ಈ ವೀಡಿಯೊವನ್ನು ಪೋಸ್ಟ್ ಮಾಡಿದ ಒಂದೇ ಗಂಟೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಲೈಕ್ಗಳು ಬಂದಿವೆ.
ನೀವು ಬಾಲಿವುಡ್ ನಟ ರಣದೀಪ್ ಹೂಡಾ ಅವರನ್ನು ಇನ್ಸ್ಟಾಗ್ರಾಂ ಪೇಜ್ನಲ್ಲಿ ಫಾಲೋ ಮಾಡುತ್ತಿದ್ದೀರಾ? ಹಾಗಾದರೆ, ಅವರು ಆಗಾಗ ಹಂಚಿಕೊಳ್ಳುವ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ತಾವು ಹೋದ ಕಡೆಯೆಲ್ಲ ಕಾಣುವ ಅಚ್ಚರಿಯ ವಿಷಯಗಳನ್ನು ರಣದೀಪ್ ಹೂಡಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಕಾಡು ಪ್ರಾಣಿಗಳು ಮತ್ತು ಪಕ್ಷಿಗಳ ಫೋಟೋಗಳು ಮತ್ತು ವಿಡಿಯೋಗಳನ್ನು ಸಹ ಅವರು ಹಾಕುತ್ತಿರುತ್ತಾರೆ. ಇಂದು ರಣದೀಪ್ ಹೂಡಾ ಹಾಕಿರುವ ಹುಲಿಯ ವಿಡಿಯೋದ ಪೋಸ್ಟ್ ಭಾರೀ ವೈರಲ್ ಆಗಿದೆ.
ಇಂದು ಬೆಳಗ್ಗೆ ನಟ ರಣದೀಪ್ ಹೂಡಾ ಇನ್ಸ್ಟಾಗ್ರಾಂನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ ಎಂದು ಅವರು ಹ್ಯಾಷ್ಟ್ಯಾಗ್ನಲ್ಲಿ ಹಾಕಿದ್ದಾರೆ.
ಕಾಡಿನಲ್ಲಿ ಹುಲಿ ರಸ್ತೆಗೆ ಅಡ್ಡಲಾಗಿ ಓಡುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಆ ಹುಲಿಯ ಹಿಂದೆಯೇ ಕ್ಯಾಮೆರಾವನ್ನು ತಿರುಗಿಸಲಾಗಿದ್ದು, ಹುಲಿ ಓಡಿಹೋಗಿ ಕಾಡೆಮ್ಮೆಯ ಮೇಲೆ ದಾಳಿ ಮಾಡಿದೆ. ಸಫಾರಿಗೆ ಹೋಗಿದ್ದ ರಣದೀಪ್ ಹೂಡಾ ಅವರ ಕಣ್ಣಮುಂದೆ ಹುಲಿಯೊಂದು ಕಾಡಿನಲ್ಲಿ ವೇಗವಾಗಿ ಓಡಿಹೋಗಿದೆ. ಅಷ್ಟೇ ವೇಗವಾಗಿ ಓಡುತ್ತಿದ್ದ ಕಾಡೆಮ್ಮೆಯನ್ನು ಬೆನ್ನತ್ತುವ ಹುಲಿ ಆ ಕಾಡೆಮ್ಮೆಯನ್ನು ತಿನ್ನುವ ಆಸೆಯಿಂದ ಅದರ ಹಿಂದೆ ಓಡಿ ಕಾಡಿನಲ್ಲಿ ಕಣ್ಮರೆಯಾಗುತ್ತದೆ.
View this post on Instagram
ಈ ವೀಡಿಯೊವನ್ನು ಪೋಸ್ಟ್ ಮಾಡಿದ ಒಂದೇ ಗಂಟೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಲೈಕ್ಗಳು ಬಂದಿವೆ. ಈ ನೈಜ ವಿಡಿಯೋಗೆ ಅಭಿಮಾನಿಗಳು ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ನಟ ಮಾತ್ರವಲ್ಲದೆ ಪ್ರಾಣಿ ಪ್ರೇಮಿಯೂ ಆಗಿರುವ ರಣದೀಪ್ ಹೂಡಾ ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸಲು ಆಗಾಗ ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ.
ಇದನ್ನೂ ಓದಿ: Viral Video: ಭರ್ಜರಿ ನೃತ್ಯದ ಮೂಲಕ ನೆಟ್ಟಿಗರ ಮನಗೆದ್ದ 63 ವರ್ಷದ ಮಹಿಳೆ; ವಿಡಿಯೋ ನೋಡಿ
Viral Video: ಅಮ್ಮನ ಮದುವೆಯಲ್ಲಿ ಮಗಳ ಸಂಭ್ರಮ; ಈ ವಿಡಿಯೋ ನೋಡಿದರೆ ಅಚ್ಚರಿಯಾಗದಿರದು!