Viral Video: ಭರ್ಜರಿ ನೃತ್ಯದ ಮೂಲಕ ನೆಟ್ಟಿಗರ ಮನಗೆದ್ದ 63 ವರ್ಷದ ಮಹಿಳೆ; ವಿಡಿಯೋ ನೋಡಿ

Ravi Bala Sharma: ಇನ್ಸ್ಟಾಗ್ರಾಂನಲ್ಲಿ ಸಖತ್ ಹಿಟ್ ಆಗಿರುವ ರವಿ ಬಾಲಾ ಶರ್ಮಾ ಅವರ ಹೊಸ ನೃತ್ಯದ ವಿಡಿಯೋ ವೈರಲ್ ಆಗಿದೆ. 63 ವರ್ಷದ ಅವರು ಯುವತಿಯರೂ ನಾಚುವಂತೆ ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆದಿದ್ದಾರೆ.

Viral Video: ಭರ್ಜರಿ ನೃತ್ಯದ ಮೂಲಕ ನೆಟ್ಟಿಗರ ಮನಗೆದ್ದ 63 ವರ್ಷದ ಮಹಿಳೆ; ವಿಡಿಯೋ ನೋಡಿ
ವಿಡಿಯೊದಿಂದ ಸೆರೆಹಿಡಿಯಲಾದ ಚಿತ್ರ
Follow us
TV9 Web
| Updated By: shivaprasad.hs

Updated on: Dec 19, 2021 | 11:09 AM

ಇನ್ಸ್ಟಾಗ್ರಾಂನಲ್ಲಿ ಹಲವು ನೃತ್ಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದಕ್ಕೆ ವಯಸ್ಸಿನ ಹಂಗಿಲ್ಲ. ಆಸಕ್ತಿ ಹಾಗೂ ಪ್ರತಿಭೆಯೊಂದೇ ಮೂಲ ಮಂತ್ರ. ಜನರು ಚೆನ್ನಾಗಿ ತಮ್ಮ ಪ್ರತಿಭೆ ವ್ಯಕ್ತಪಡಿಸಿದರೆ, ನೆಟ್ಟಿಗರು ಮನತುಂಬಿ ಸ್ವಾಗತಿಸುತ್ತಾರೆ. ಇದೇ ರೀತಿಯಲ್ಲಿ ತಮ್ಮ ಪ್ರತಿಭೆಯಿಂದಲೇ ಸಖತ್ ಸುದ್ದಿಯಾಗಿರುವವರು ರವಿ ಬಾಲಾ ಶರ್ಮಾ. ಅವರಿಗೆ ವಯಸ್ಸು 63. ಆದರೆ ಯುವತಿಯರೂ ನಾಚಿಸುವಂತೆ ನೃತ್ಯ ಮಾಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯರಾಗಿರುವ ಅವರು, ತಮ್ಮ ನೃತ್ಯದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಾಂಪ್ರದಾಯಿಕ ಮಾದರಿಯ ಸ್ಟೆಪ್​ಗಳಿಂದ ತೊಡಗಿ, ಸಂಪೂರ್ಣ ಆಧುನಿಕ ರೀತಿಯವರೆಗೆ ಎಲ್ಲಾ ರೀತಿಯ ನೃತ್ಯ ಮಾಡುವ ಕಲೆ ಅವರಿಗೆ ಒಲಿದಿದೆ. ಆದ್ದರಿಂದಲೇ ಅವರಿಗೆ ಹತ್ತಿರಹತ್ತಿರ ಒಂದೂವರೆ ಲಕ್ಷ ಜನ ಇನ್ಸ್ಟಾಗ್ರಾಂ ಒಂದರಲ್ಲೇ ಅನುಯಾಯಿಗಳಿದ್ದಾರೆ. ಅವರನ್ನು ಜನರು ಪ್ರೀತಿಯಿಂದ ‘ದೇಸಿ ಅಜ್ಜಿ’ ಎಂದು ಕರೆಯುವುದಿದೆ. ಅಷ್ಟರ ಮಟ್ಟಿಗೆ ಅವರು ಜನರಿಗೆ ಹತ್ತಿರವಾಗಿದ್ದಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ವಿಡಿಯೋ ಸಖತ್ ಸದ್ದು ಮಾಡುತ್ತಿದ್ದು, ಇವರ ಸ್ಟೆಪ್ಸ್​​ಗೆ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿಕೊಂಡಿದ್ದಾರೆ.

ಸಾರಾ ಅಲಿ ಖಾನ್ ಕಾಣಿಸಿಕೊಂಡಿರುವ ‘ಚಕಾ ಚಕ್’ ಹಾಡಿಗೆ ರವಿ ಬಾಲಾ ಶರ್ಮಾ ಅವರು ಹೆಜ್ಜೆಹಾಕಿದ್ದಾರೆ. ಸ್ವತಃ ಸಾರಾ ನಾಚುವಂತೆ ಸಖತ್ ಡಾನ್ಸ್ ಮಾಡಿರುವ ಅವರು, ತಮ್ಮ ಸಾಂಪ್ರದಾಯಿಕ ದಿರಿಸಿನಿಂದಲೂ ಗಮನ ಸೆಳೆದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಜನರಿಗೆ ಪ್ರಿಯವಾಗಿದೆ.

‘ಚಕಾ ಚಕ್’ ನೃತ್ಯದ ವಿಡಿಯೋ ಇಲ್ಲಿದೆ:

ವಿಡಿಯೋ ನೋಡಿದ ನಿಮಗೂ ಅನ್ನಿಸಿರಬಹುದು, 63ರ ಆ ವಯಸ್ಸಿನಲ್ಲೂ ಎಷ್ಟು ಎನರ್ಜಿಯಿಂದ ಹಾಡಿಗೆ ಜೀವ ತುಂಬಿದ್ದಾರೆ ಎಂದು. ರವಿ ಬಾಲಾ ಶರ್ಮಾ ಅವರು ಇಂತಹ ಹಲವಾರು ವಿಡಿಯೋಗಳಿಗೆ ಹೆಜ್ಜೆ ಹಾಕಿದ್ದಾರೆ. ವಿಶೇಷವೆಂದರೆ ಅವರು ತಮ್ಮ ಕುಟುಂಬದೊಂದಿಗೆ ಹೆಜ್ಜೆ ಹಾಕುವ ದೃಶ್ಯಗಳೂ ಇವೆ. ಈ ಎಲ್ಲಾ ಮಸ್ತ್ ರೀಲ್ಸ್​​ಗಳಿಂದ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ರವಿ ಬಾಲಾ ಶರ್ಮಾ ಅವರ ಇತ್ತೀಚಿನ ಮತ್ತೊಂದು ವಿಡಿಯೋ ಇಲ್ಲಿದೆ:

ರವಿ ಬಾಲಾ ಶರ್ಮಾ ಹೆಜ್ಜೆ ಹಾಕಿದ ‘ಚಕಾ ಚಕ್’ ಚಿತ್ರದ ಹಾಡು ‘ಅಕ್ಷಯ್ ಹಾಗೂ ಸಾರಾ ನಟನೆಯ ‘ಅತ್ರಂಗಿ ರೇ’ ಚಿತ್ರದ್ದು. ಎ ಆರ್ ರೆಹಮಾನ್ ಹಾಡುಗಳಿಗೆ ಸಂಗೀತ ನೀಡಿದ್ದು, ಶ್ರೇಯಾ ಘೋಷಾಲ್ ದನಿಯಾಗಿದ್ದಾರೆ.

ಇದನ್ನೂ ಓದಿ:

ನಾಯಿಗಳ ಮೇಲೆ ಕೋತಿಗಳ ಸೇಡು: ಒಂದೇ ತಿಂಗಳಿನಲ್ಲಿ 250 ನಾಯಿಗಳನ್ನು ಹತ್ಯೆಗೈದ ಕೋತಿಗಳ ಹಿಂಡು

‘ನ್ಯಾಷನಲ್​ ಕ್ರಶ್​ ಅಂದಿದ್ದು ಯಾರು? ಬರೀ ಓವರ್​ ಆ್ಯಕ್ಟಿಂಗ್​’; ರಶ್ಮಿಕಾ ವಿಡಿಯೋಗೆ ನೆಗೆಟಿವ್​ ಕಮೆಂಟ್​ಗಳ ಸುರಿಮಳೆ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್