ಭಾರತೀಯ ಮದುವೆ ಸಮಾರಂಭಗಳೇ ಹಾಗೆ. ವಾರ ಪೂರ್ತಿ ಶಾಸ್ತ್ರಗಳನ್ನು ಪೂರೈಸಿ ಕೊನೆಯ ದಿನ ಮದುವೆ ಮಾಡುತ್ತಾರೆ. ಮೆಹಂದಿ, ಸಂಗೀತ, ಅರಿಶಿನ ಶಾಸ್ತ್ರ ಎಂದು ಶಾಸ್ತ್ರಗಳ ಪಟ್ಟಿ ರಾತ್ರಿಯೂ ಮುಂದುವರೆಯುತ್ತವೆ. ರಾಜ್ಯದಿಂದ ರಾಜ್ಯಕ್ಕೆ ಸಂಪ್ರದಾಯಗಳು ವಿಭಿನ್ನವಾಗಿರುತ್ತವೆ. ಉತ್ತರ ಭಾರತದ ಮದುವೆಗಳಿಗೂ ದಕ್ಷಿಣ ಭಾರತದ ಮದುವೆ ಸಂಪ್ರದಾಯಗಳಿಗೂ ಕೊಂಚ ವ್ಯತ್ಯಾಸ ಇರುತ್ತದೆ. ಮುಂಬೈ, ಮಹಾರಾಷ್ಟ್ರಗಳಲ್ಲಿ ರಿಸೆಪ್ಷನ್ ಶಾಸ್ತ್ರಗಳನ್ನು ರಾತ್ರಿ ವೇಳೆ ಅದ್ದೂರಿಯಾಗಿ ಮಾಡುತ್ತಾರೆ. ವಧುವಿಗೆ ಗ್ರ್ಯಾಂಡ್ ಡ್ರೆಸ್ ತೊಡಿಸಿ, ವಧುವರರನ್ನು ವಿಜೃಂಭಣೆಯಿಂದ ಮಂಟಪಕ್ಕೆ ಕರೆತಂದು ಮದುವೆ ಶಾಸ್ತ್ರಗಳನ್ನು ಮಾಡುತ್ತಾರೆ. ಇಂತಹ ಮದುವೆಗಳಲ್ಲಿ ಕಲವೊಂದು ಘಟನೆಗಳು ನೋಡುಗರಿಗೆ ನಗು ತರಿಸುತ್ತದೆ. ಇಲ್ಲೊಂದು ಮದುವೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮದುವೆ ಶಾಸ್ತ್ರಗಳು ಸುದೀರ್ಘವಾಗಿ ಬೆಳಗ್ಗೆ 6.30 ವರೆಗೂ ಮದುವೆ ಮುಂದೆವರೆದ ಕಾರಣ ವಧು ಮಂಟಪದಲ್ಲೇ ನಿದ್ದೆಗೆ ಜಾರಿದ್ದಾಳೆ. ಮದುವೆ ಶಾಸ್ತ್ರಗಳಿಂದ ಸುಸ್ತಾಗಿ ಸೋಫಾದ ಮೇಲೆ ಕುಳಿತು ವಧು ತೂಕಡಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಈ ಘಟನೆ ಮುಂಬೈನಲ್ಲಿ ನಡೆದಿದೆ.
View this post on Instagram
ಕೆಂಪು ಮತ್ತು ಕಿತ್ತಳೆ ಬಣ್ಣದ ಸುಂದರ ಉಡುಗೆ ಧರಿಸಿದ್ದ ವಧು ಕುಳಿತಲ್ಲೇ ನಿದ್ದೆಗೆ ಜಾರಿದ್ದಾಳೆ. ರಾತ್ರಿಯಿಂದ ಬೆಳಗಿನವರೆಗೂ ಮದುವೆಯ ಕಾರ್ಯಕ್ರಮಗಳು ಮುಗಿಯದ ಕಾರಣ ವಧು ನಿದ್ದೆ ಮಾಡಿದ್ದಾಳೆ. ಇದರ ವೀಡಿಯೋವನ್ನು ವಧುವಿನ ಸ್ನೇಹಿತರು ಸೆರೆಹಿಡಿದಿದ್ದು, ಸ್ಲೀಪಿಂಗ್ ವಧು ಎಂದು ಕ್ಯಾಪ್ಷನ್ ನೀಡಿದ್ದಾರೆ. ಸದ್ಯ ನೆಟ್ಟಿಗರು ವೀಡಿಯೋ ನೋಡಿ ನಗುವಿನ ಎಮೋಜಿಗಳ ಮೂಲಕ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
viral video: ಗೂಡಿನ ಗೇಟ್ ತೆರೆದ ತಕ್ಷಣ ಮಾಲೀಕನ ಮೇಲೆ ಎರಗಿ ಮುದ್ದಿಸಿದ ಸಿಂಹ: ಬೆರಗಾದ ನಟ್ಟಿಗರು
ನಾಯಿಗಳ ಮೇಲೆ ಕೋತಿಗಳ ಸೇಡು: ಒಂದೇ ತಿಂಗಳಿನಲ್ಲಿ 250 ನಾಯಿಗಳನ್ನು ಹತ್ಯೆಗೈದ ಕೋತಿಗಳ ಹಿಂಡು