viral video: ಗೂಡಿನ ಗೇಟ್​ ತೆರೆದ ತಕ್ಷಣ ಮಾಲೀಕನ ಮೇಲೆ ಎರಗಿ ಮುದ್ದಿಸಿದ ಸಿಂಹ: ಬೆರಗಾದ ನಟ್ಟಿಗರು

ನಾಯಿಮರಿಯಂತೆ ಸಿಂಹವನ್ನು ಎತ್ತಿ ಆಡಿಸುವುದನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ. ಇನ್ನೂ ಕೆಲವರು ಈ ಭಯಾನಕ ವೀಡಿಯೋ ನೋಡಿ ಸಿಂಹ ವ್ಯಕ್ತಿಯ ಮೇಲೆ ದಾಳಿ ನಡೆಸಿದೆ ಎಂದುಕೊಂಡಿದ್ದಾರೆ.

viral video: ಗೂಡಿನ ಗೇಟ್​ ತೆರೆದ ತಕ್ಷಣ ಮಾಲೀಕನ ಮೇಲೆ ಎರಗಿ ಮುದ್ದಿಸಿದ ಸಿಂಹ: ಬೆರಗಾದ ನಟ್ಟಿಗರು
ವೀಡಿಯೋದಿಂದ ಸೆರೆಹಿಡಿಯಲಾದ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 19, 2021 | 11:48 AM

ಕಾಡು ಪ್ರಾಣಿಗಳನ್ನು ದೂರದಿಂದಲೆ ನೋಡಿದರೂ ಕಾಲು ನಡುಗುವಷ್ಟು ಭಯವಾಗುತ್ತದೆ. ಸಾಮಾನ್ಯವಾಗಿ ಸಿಂಹ, ಹುಲಿಯಂತಹ ಕಾಡ ಪ್ರಾಣಿಗಳನ್ನು ಮೃಗಾಲಯಗಳಲ್ಲಿ ನೋಡುತ್ತೇವೆ. ಗೂಡಿನಲ್ಲಿ ಬಂಧಿಯಾಗಿರುವ ಪ್ರಾಣಿ ಮತ್ತು ಅವುಗಳ ಆರ್ಭಟವನ್ನು ನೋಡಿಯೇ ಗಾಬರಿಯಾಗುತ್ತದೆ. ಹೀಗಿದ್ದಾಗ ಇಲ್ಲೊಬ್ಬ ವ್ಯಕ್ತಿ ಸಿಂಹವೊಂದನ್ನು ಸಾಕಿದ್ದಾರೆ. ಅಲ್ಲದೆ ಅದರರೊಟ್ಟಿಗೆ ಅನ್ಯೋನ್ಯವಾದ ಸ್ನೇಹ ಬೆಳೆಸಿದ್ದಾರೆ. ಅದೆಷ್ಟರಮಟ್ಟಿಗೆ ಎಂದರೆ ಗೂಡಿನ ಗೇಟನ್ನು ತೆರೆದ ತಕ್ಷಣ ಸಿಂಹ ವ್ಯಕ್ತಿಯ ಮೈಮೇಲೆ ಎರಗಿ ಅದರದೇ ರೀತಿಯಲ್ಲಿ ಮುದ್ದಿಸುತ್ತದೆ. ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ನಾಯಿಮರಿಯಂತೆ ಸಿಂಹವನ್ನು ಎತ್ತಿ ಆಡಿಸುವುದನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ. ಇನ್ನೂ ಕೆಲವರು ಈ ಭಯಾನಕ ವೀಡಿಯೋ ನೋಡಿ ಸಿಂಹ ವ್ಯಕ್ತಿಯ ಮೇಲೆ ದಾಳಿ ನಡೆಸಿದೆ ಎಂದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಕಲಹರಿ ಮರುಭೂಮಿಯಲ್ಲಿನ ಮೀಸಲು ಪ್ರದೇಶದಲ್ಲಿ ಈ ವೀಡಿಯೋವನ್ನು ಸೆರೆಹಿಡಿಯಲಾಗಿದೆ. ವಾಲ್​ ಎನ್ನುವ ವ್ಯಕ್ತಿ ಸಿಂಹವನ್ನು ಸಾಕಿದ್ದು ಅದಕ್ಕೆ ಸಿರ್ಗಾ ಎಂದು ನಾಮಕರಣ ಮಾಡಿದ್ದಾರೆ. ಸಿರ್ಗಾಗೆ 9 ವರ್ಷ ವಯಸ್ಸು. ತಾವು ಸಾಕಿದ ಪ್ರೀತಿಯ ಸಿರ್ಗಾದ ಇನ್ಸ್ಟಾಗ್ರಾಮ್​ ಖಾತೆಯನ್ನೂ ತೆರೆದಿದ್ದಾರೆ. ಸಿರ್ಗಾಥೆಲಿಯೊನೆಸ್​ ಎನ್ನುವ ಹೆಸರಿನ ಪೇಜ್​ಅನ್ನು ತೆರೆದಿದ್ದಾರೆ. ಆಗಾಗ ಅದರಲ್ಲಿ ಸಿರ್ಗಾದ ಫೋಟೋ, ವೀಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

View this post on Instagram

A post shared by Sirga (@sirgathelioness)

ಸಿರ್ಗಾದ ಇನ್ಸ್ಟಾಗ್ರಾಮ್​ ಅಕೌಂಟ್​ಗೆ 78 ಸಾವಿರ ಫಾಲೋವರ್ಸ್​ ಇದ್ದಾರೆ. ಸದ್ಯ ಕಲಹರಿ ಮರುಭೂಮಿಯಲ್ಲಿ ಸಿರ್ಗಾನ ಓಡಾಟ, ಅದರ ದಿನನಿತ್ಯದ ಜೀವನದ ಕುರಿತು ಕೆಲವು ವೀಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಗೇಟನ್ನು ತೆರೆದ ತಕ್ಷಣ ಪ್ರೀತಿಯಿಂದ ತನ್ನ ಮಾಲೀಕನ ಮೇಲೆ ಹಾರುವ ವೀಡಿಯೋ ಸಖತ್​ ವೈರಲ್​ ಆಗಿದೆ. ಸದ್ಯ ವೀಡಿಯೋ 2,700ಕ್ಕೆ ಹೆಚ್ಚು ಲೈಕ್ಸ್​ ಪಡೆದಿದೆ.

ಇದನ್ನೂ ಓದಿ:

Viral Video: ಭರ್ಜರಿ ನೃತ್ಯದ ಮೂಲಕ ನೆಟ್ಟಿಗರ ಮನಗೆದ್ದ 63 ವರ್ಷದ ಮಹಿಳೆ; ವಿಡಿಯೋ ನೋಡಿ

ನಾಯಿಗಳ ಮೇಲೆ ಕೋತಿಗಳ ಸೇಡು: ಒಂದೇ ತಿಂಗಳಿನಲ್ಲಿ 250 ನಾಯಿಗಳನ್ನು ಹತ್ಯೆಗೈದ ಕೋತಿಗಳ ಹಿಂಡು

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್