Viral Video: ತಾಯಿಯ ಭಾವಚಿತ್ರದೊಂದಿಗೆ ವಿವಾಹ ಮಂಟಪ ಏರಿದ ವಧು; ಭಾವನಾತ್ಮಕ ವಿಡಿಯೋ ನೋಡಿ
ತಾಯಿಯ ಪ್ರೀತಿಗೆ ಸಮನಾದುದು ಯಾವುದೂ ಇಲ್ಲ ಎನ್ನುತ್ತಾರೆ. ಜೀವನದ ಅತ್ಯುನ್ನತ ಘಟ್ಟವಾದ ವಿವಾಹದ ಸಂದರ್ಭದಲ್ಲಿ ಗತಿಸಿದ ತಾಯಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದ ವಧುವೊಬ್ಬಳು, ತಾಯಿಯ ಭಾವಚಿತ್ರದೊಂದಿಗೆ ಮದುವೆ ಮಂಟಪ ಪ್ರವೇಶಿಸಿದ್ದಾಳೆ. ಈ ಭಾವನಾತ್ಮಕ ಸನ್ನಿವೇಶದ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಸಂದರ್ಭದ ವಿಡಿಯೋಗಳು ಜನರ ಗಮನ ಸೆಳೆಯುತ್ತವೆ. ವಿವಾಹವೆನ್ನುವುದು ಹಲವು ಭಾವಗಳ ಸಂಗಮ. ಇಂತಹ ಭಾವನಾತ್ಮಕ ವಿಚಾರಗಳು ವಿಡಿಯೋದಲ್ಲಿ ಸೆರೆಯಾಗಿ ಜನರ ಕಣ್ಣನ್ನು ತೇವಗೊಳಿಸುವುದಿದೆ. ಸದ್ಯ ಅಂತರ್ಜಾಲದಲ್ಲಿ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ತಾಯಿಯ ಕುರಿತ ವಧುವಿನ ಪ್ರೀತಿಗೆ ಜನರು ತಲೆದೂಗಿದ್ದಾರೆ. ‘mahas photography official’ ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದ್ದು, ಇದು ಮೂಲತಃ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿನ ಸ್ಟುಡಿಯೋ ಆಗಿದೆ. ಈ ತಂಡವು ಮದುವೆಯೊಂದರಲ್ಲಿ ಸೆರೆಹಿಡಿದ ವಿಡಿಯೋ ಹಾಗೂ ಚಿತ್ರಗಳನ್ನು ಹಂಚಿಕೊಂಡಿದೆ. ಅವುಗಳಲ್ಲಿ ವಧುವೊಬ್ಬಳು ಗತಿಸಿದ ತನ್ನ ತಾಯಿಯ ಭಾವಚಿತ್ರವನ್ನು ಅಪ್ಪಿಕೊಂಡು, ತಂದೆಯೊಂದಿಗೆ ಮದುವೆ ಮಂಟಪಕ್ಕೆ ಬರುತ್ತಿರುವ ಚಿತ್ರಗಳು ಹಾಗೂ ವಿಡಿಯೋಗಳಿವೆ. ಬಹಳ ಭಾವನಾಪೂರ್ವಕವಾದ ಈ ಸಂದರ್ಭದ ವಿಡಿಯೋಗಳು ನೆಟ್ಟಿಗರಲ್ಲಿ ಕಣ್ಣೀರು ತರಿಸಿದೆ.
ವಿಡಿಯೋದ ಕ್ಯಾಪ್ಶನ್ನಲ್ಲಿ, ‘‘ಎಲ್ಲಾ ಹೆಣ್ಣುಮಕ್ಕಳ ತಾಯಂದಿರು ಅವರೊಂದಿಗಿರುವುದಿಲ್ಲ, ನನ್ನ ತಾಯಿಯಂತೆ.. ಅಮ್ಮಾ, ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ’’ ಎಂದು ಬರೆಯಲಾಗಿದೆ.
ವೈರಲ್ ಆಗಿರುವ ವಿಡಿಯೋ ಇಲ್ಲಿದೆ:
View this post on Instagram
ಎರಡು ದಿನಗಳ ಹಿಂದೆ ವಿಡಿಯೋ ಶೇರ್ ಮಾಡಲಾಗಿದ್ದು, ಸುಮಾರು 2.8 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಮತ್ತು ಈ ಸಂಖ್ಯೆ ಏರುತ್ತಲೇ ಇದೆ. ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಲು ಭಾವನಾತ್ಮಕ ಇಮೋಜಿಗಳನ್ನು ಬಳಸಿದ್ದಾರೆ.
View this post on Instagram
ಅತ್ಯಂತ ಹೃದಯ ಸ್ಪರ್ಶಿ ದೃಶ್ಯವಿದು ಎಂದು ಬಹಳಷ್ಟು ಜನರು ಬರೆದಿದ್ದರೆ, ಮತ್ತಷ್ಟು ಜನರು ಇದು ಕಣ್ಣೀರನ್ನು ತರಿಸುತ್ತದೆ ಎಂದು ಬರೆದಿದ್ದಾರೆ. ಈ ವಿಡಿಯೋ ನೋಡಿದ ನಿಮಗೇನನ್ನಿಸಿತು?
ಇದನ್ನೂ ಓದಿ:
Hair Care Tips: ಚಳಿಗಾಲದಲ್ಲಿ ಕೂದಲಿಗೆ ಹಾನಿಯುಂಟು ಮಾಡುವ ಈ ಕೆಲಸಗಳನ್ನು ಮಾಡಬೇಡಿ
ಭಾರೀ ಮೊತ್ತಕ್ಕೆ ಹರಾಜಾದ ಸೂಪರ್ ಮ್ಯಾನ್ #1 ಕಾಮಿಕ್ ಪುಸ್ತಕ: ಇಲ್ಲಿದೆ ಮಾಹಿತಿ