Hair Care Tips: ಚಳಿಗಾಲದಲ್ಲಿ ಕೂದಲಿಗೆ ಹಾನಿಯುಂಟು ಮಾಡುವ ಈ ಕೆಲಸಗಳನ್ನು ಮಾಡಬೇಡಿ

ಚಳಿಗಾಲದಲ್ಲಿ ಕೂದಲಿನ ರಕ್ಷಣೆ ಅಗತ್ಯವಾಗಿ ಮಾಡಲೇಬೇಕು. ಇಲ್ಲವಾದರೆ ತಲೆಹೊಟ್ಟು, ಒಣ ಮತ್ತು ಸೀಳು ಕೂದಲು ಹೀಗೆ ಹಲವು ರೀತಿಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

Hair Care Tips: ಚಳಿಗಾಲದಲ್ಲಿ ಕೂದಲಿಗೆ ಹಾನಿಯುಂಟು ಮಾಡುವ ಈ ಕೆಲಸಗಳನ್ನು ಮಾಡಬೇಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 19, 2021 | 5:53 PM

ಚಳಿಗಾಲ ಆರಂಭವಾಗಿದೆ. ಮೈಕೊರೆಯುವ ಚಳಿಗೆ ಬಿಸಿ ಬಿಸಿ ಆಹಾರ ಸೇವಿಸುವ ಹಂಬಲ. ಮೋಡದ ವಾತಾವರಣದಿಂದ ಕೂಡಿದ ಪ್ರಕೃತಿ. ಮನೆಯಿಂದ ಹೊರಹೊರಟು ಕೆಲಸಕ್ಕೆ ಹೋಗಲು ಮನಸ್ಸಿಲ್ಲದಿದ್ದರೂ ಹೋಗಲೇ ಬೇಕಾದ ಅನಿವಾರ್ಯತೆ. ಇದರ ನಡುವೆ ಬಿಸಿ ನೀರಿನ ಸ್ನಾನದ ಅನುಭವ. ತಣ್ಣನೆಯ ವಾತಾವರಣದ ನಡುವೆ ಮೈಬೆಚ್ಚಗಾಗಿಸುವ ಬಿಸಿ ನೀರಿನ ಸ್ನಾನ ಮೈಗೆ ಇನ್ನಷ್ಟು ಹಿತ ನೀಡುತ್ತದೆ. ಇವೆಲ್ಲದರ ನಡುವೆ ಚಳಿಗಾಲದಲ್ಲಿ ಕಾಡುವ ದೊಡ್ಡ ಸಮಸ್ಯೆ ಎಂದರೆ ಕೂದಲಿನ ರಕ್ಷಣೆ ಮಾಡಿಕೊಳ್ಳುವುದು. ಚಳಿಗಾಲದಲ್ಲಿ ಕೂದಲು ಶುಷ್ಕಗೊಂಡು ಡ್ರೈ ಎನಿಸಲು ಶುರುವಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ಕೂದಲಿನ ರಕ್ಷಣೆ ಅಗತ್ಯವಾಗಿ ಮಾಡಲೇಬೇಕು. ಇಲ್ಲವಾದರೆ ತಲೆಹೊಟ್ಟು, ಒಣ ಮತ್ತು ಸೀಳು ಕೂದಲು ಹೀಗೆ ಹಲವು ರೀತಿಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಆದ್ದರಿಂದ ಚಳಿಗಾಲದಲ್ಲಿ ಕೂದಲಿಗೆ ಹಾನಿಯಾಗುವ ಈ ಕೆಲಸಗಳನ್ನು ಮಾಡಬೇಡಿ

ಬಿಸಿನೀರಿನಿಂದ ಕೂದಲ ಸ್ನಾನ ಚಳಿಗಾಲದಲ್ಲಿ ತಲೆಗೆ ಬಿಸಿ ನೀರಿನಿಂದ ಸ್ನಾನ ಮಾಡಲೇಬೇಡಿ. ನಿಮ್ಮ ಕೂದಲಿನ ಹಾನಿಗೆ ಇದು ಪ್ರಮುಖ ಕಾರಣವಾಗುತ್ತದೆ. ಬಿಸಿನೀರು ನಿಮ್ಮ ಕೂದಲಿನ ಎಳೆಗಳಲ್ಲಿರುವ ತೇವಾಂಶ ಮತ್ತು ಎಣ್ಣೆಯ ಅಂಶವನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತದೆ. ಇದರಿಂದ ನಿಮ್ಮ ಕೂದಲು ಡ್ರೈ ಎನಿಸುತ್ತದೆ. ಇದರಿಂದ ಕೂದಲಿನ ಆಕರ್ಷಣೆ ಕುಂದುತ್ತದೆ. ಹೊಳೆಯುವ ಕೂದಲು ಮಾಯವಾಗಿ ಒರಟಾದ ಕೂದಲಾಗುತ್ತದೆ. ಹೀಗಾಗಿ ಬಿಸಿ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಲೇಬೇಡಿ.

ನಿರಂತರ ಹೇರ್​ ಡ್ರೈಯರ್​ ಬಳಕೆ ಒದ್ದೆ ಕೂದಲನ್ನು ಒಣಗಿಸಲು ಅಥವಾ ವಿವಿಧ ರೀತಿಯ ಕೇಶ ವಿನ್ಯಾಸ ಮಾಡಿಕೊಳ್ಳುವ ನಿಟ್ಟಿನಲ್ಲಿ ನಿರಂತರ ಹೇರ್​ ಡ್ರೈಯರ್​ ಬಳಕೆ ನಿಮ್ಮ ಕೂದಲಿಗೆ ಹಾನಿ ಮಾಡುತ್ತದೆ. ಹೇರ್​ ಡ್ರೈಯರ್​ ಬಳಕೆಯಿಂದ ಸೀಳು ಕೂದಲು ಉಂಟಾಗಿ ಕೂದಲ ಬೆಳವಣಿಗೆ ಕುಂಠಿತವಾಗತ್ತದೆ. ಹೀಗಾಗಿ. ಒದ್ದೆ ಕೂದಲನ್ನು ಆದಷ್ಟು ಗಾಳಿಯಲ್ಲೇ ಒಣಗಿಸಿ ಅಥವಾ ಬಿಸಿಲು ಸಿಗುವ ಹಾಗಿದ್ದರೆ ಒಂದೈದು ನಿಮಿಷ ಬಿಸಿಲಿಗೆ ಒಡ್ಡಿಕೊಳ್ಳಿ. ಇದರಿಂದ ನಿಮ್ಮ ಕೂದಲಿಗೆ ಹಾನಿಯಾಗುವುದನ್ನು ತಪ್ಪಿಸಬಹುದು.

ನೆತ್ತಿಯ ಬಗ್ಗೆ ಗಮನ ನೀಡದೇ ಇರುವುದು ಚಳಿಗಾಲದಲ್ಲಿ ನಿಮ್ಮ ತಲೆಯ ನೆತ್ತಿ ಒಣಗಿರುತ್ತದೆ. ಹೀಗಾಗಿ ಹೊಟ್ಟು, ತಲೆನೋವಿನಂತಹ ಸಮಸ್ಯೆಗಳು ಉಲ್ಬಣಗೊಳುತ್ತದೆ. ಆದ್ದರಿಂದ ಚಳಿಗಾಲದಲ್ಲಿ ನೆತ್ತಿಯ ಬಗ್ಗೆ ಗಮನ ನೀಡದೇ ಇದ್ದರೆ ಅಪಾಯ ತಪ್ಪಿದ್ದಲ್ಲ. ಆಗಾಗ ಎಣ್ಣೆಯಿಂದ ಮಸಾಜ್​ ಮಾಡುವುದು ಅಥವಾ ಕೂದಲ ಆರೋಗ್ಯಕ್ಕೆ ಹಾಕುವ ಹೇರ್​ ಪ್ಯಾಕ್​ಗಳನ್ನು ಹಾಕಿಕೊಳ್ಳಿ ಇದು ನಿಮ್ಮ ನೆತ್ತಿಯನ್ನು ಸುರಕ್ಷಿತವಾಗಿರಿಸುತ್ತದೆ.

ಒದ್ದೆಕೂದಲನ್ನು ಕಟ್ಟುವುದು ಕೆಲವೊಮ್ಮೆ ಸಮಯದ ಅಭಾವ ಅಥವಾ ಇನ್ಯಾವುದೋ ಕಾರಣಗಳಿಂದ ತಲೆ ಸ್ನಾನದ ಬಳಿಕ ಕೂದಲನ್ನು ಸರಿಯಾಗಿ ಒಣಗಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕೂದಲನ್ನು ಕಟ್ಟಿಕೊಂಡು ಧೂಳು ಇರುವ ಕಡೆ ಹೋಗಬೇಡಿ. ಇದು ನಿಮ್ಮ ಕೂದಲಿನ್ನು ಸೀಳು ಒಡೆಯುವಂತೆ ಮಾಡಬಹುದು. ಕೂದಲಿನಲ್ಲಿ ನೀರಿನ ಅಂಶ ಕಡಿಮೆಯಾಗುವವರೆಗಾದರೂ ಒಣಗಿಸಿಕೊಳ್ಳಿ ಆಗ ನಿಮ್ಮ ಕೂದಲಿಗೆ ಧೂಳು, ಹೊಗೆಯಂತಹ ಅಂಶಗಳು ಸೇರಿಕೊಳ್ಳುವುದು ಕಡಿಮೆಯಾಗುತ್ತದೆ.

ಇದನ್ನೂ ಓದಿ:

Health Tips : ಬಿಡುವಿನ ವೇಳೆಯಲ್ಲಿ ಪಾದಗಳಿಗೆ ಬಿಸಿ ನೀರಿನ ಸ್ನಾನ ಮಾಡಿಸಿ: ನಿಮ್ಮ ಒತ್ತಡ ನಿವಾರಣೆಗೂ ಒಳಿತು

Women Health: ಮಹಿಳೆಯರಲ್ಲಿನ ಈ ನಾಲ್ಕು ಆರೋಗ್ಯ ಸಮಸ್ಯೆಗಳಿಗೆ ಹಸಿ ಈರುಳ್ಳಿ ಸೇವನೆಯಿಂದ ಸಿಗಲಿದೆ ಪರಿಹಾರ!

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ