Health Tips : ಬಿಡುವಿನ ವೇಳೆಯಲ್ಲಿ ಪಾದಗಳಿಗೆ ಬಿಸಿ ನೀರಿನ ಸ್ನಾನ ಮಾಡಿಸಿ: ನಿಮ್ಮ ಒತ್ತಡ ನಿವಾರಣೆಗೂ ಒಳಿತು

ನೀವು ಹಿಮ್ಮಡಿ ನೋವೆಂದು ವೈದ್ಯರ ಬಳಿ ಹೋದರೆ ಅವರು ಮೊದಲು ಹೇಳುವುದು ಪಾದಗಳು ಮುಳುಗುವಂತೆ ಕಾಲುಗಳನ್ನು ಬಿಸಿನೀರಿನಲ್ಲಿ ನೆನೆಸಿಟ್ಟುಕೊಳ್ಳುವ ಸಲಹೆ. ಹೀಗಾಗಿ ನಿಮ್ಮ ಬಿಡುವಿನ ವೇಳೆಯಲ್ಲಿ ಪಾದಗಳಿಗೆ ಬಿಸಿನೀರಿನ ಸ್ನಾನ ಮಾಡಿಸಿ.

Health Tips : ಬಿಡುವಿನ ವೇಳೆಯಲ್ಲಿ ಪಾದಗಳಿಗೆ ಬಿಸಿ ನೀರಿನ ಸ್ನಾನ ಮಾಡಿಸಿ: ನಿಮ್ಮ ಒತ್ತಡ ನಿವಾರಣೆಗೂ ಒಳಿತು
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 19, 2021 | 11:01 AM

ಬಿಸಿ ನೀರಿನ ಸ್ನಾನ ದೇಹಕ್ಕೆ ಹೊಸ ಹುರುಪು ನೀಡುತ್ತದೆ. ಅದೇ ರೀತಿ ನಿಮ್ಮ ಪಾದಗಳನ್ನು ಬಿಸಿ ನೀರಿನಲ್ಲಿ ಇರಿಸಿಕೊಳ್ಳುವುದರಿಂದ ನಿಮ್ಮ ದೇಹದ ಆರೋಗ್ಯ ಇನ್ನಷ್ಟು ಉತ್ತಮಗೊಳ್ಳುವುದರಲ್ಲಿ ಅನುಮಾನವಿಲ್ಲ. ಎಂದಾದರೂ ನೀವು ಹಿಮ್ಮಡಿ ನೋವೆಂದು ವೈದ್ಯರ ಬಳಿ ಹೋದರೆ ಅವರು ಮೊದಲು ಹೇಳುವುದು ಪಾದಗಳು ಮುಳುಗುವಂತೆ ಕಾಲುಗಳನ್ನು ಬಿಸಿನೀರಿನಲ್ಲಿ ನೆನೆಸಿಟ್ಟುಕೊಳ್ಳುವ ಸಲಹೆ. ಹೀಗಾಗಿ ನಿಮ್ಮ ಬಿಡುವಿನ ವೇಳೆಯಲ್ಲಿ ಪಾದಗಳಿಗೆ ಬಿಸಿನೀರಿನ ಸ್ನಾನ ಮಾಡಿಸಿ. ಇದು ನಿಮ್ಮನ್ನು ಒತ್ತಡದಿಂದಲೂ ನಿವಾರಣೆಯಾಗುವಂತೆ ಮಾಡುತ್ತದೆ. ಟಿವಿ ನೋಡಲು ಕುಳಿತಾಗ, ಪೇಪರ್​ ಓದುವಾಗ, ಮೊಬೈಲ್​ ನೋಡಿಕೊಂಡು ಕುಳಿತಾಗ ಟಬ್​ನಲ್ಲಿ ಉಗುರು ಬೆಚ್ಚಗಿನ ನೀರು ಹಾಕಿಕೊಂಡು ಕಾಲನ್ನು ಇಟ್ಟುಕೊಳ್ಳಿ. ಬಿಸಿ ನೀರಿಗೆ ಚಮಚೆಯಷ್ಟು ಉಪ್ಪನ್ನು ಸೇರಿಸಿಕೊಂಡರೆ ನಿಮ್ಮ ಹಿಮ್ಮಡಿ ಮತ್ತು ಪಾದಗಳು ಮೃದುವಾಗುತ್ತವೆ. ದೇಹವನ್ನು ರಿಲ್ಯಾಕ್ಸ್ ಮಾಡಿ, ಆರೋಗ್ಯವನ್ನೂ ಉತ್ತಮಗೊಳಿಸುವಲ್ಲಿ ಬಿಸಿನೀರು ಸಹಾಯ ಮಾಡುತ್ತದೆ. ಆದಷ್ಟು ರಾತ್ರಿ ಸಮಯ ಈ ಕ್ರಮ ಅನುಸರಿಸಿ.

ಒತ್ತಡ ನಿವಾರಣೆ ಆಧುನಿಕ ಜಗತ್ತಿನಲ್ಲಿ ಒತ್ತಡದ ಬದುಕು ವರವಾಗಿದೆ ಎಂದರೆ ತಪ್ಪಾಗಲಾರದು. ದಿನನಿತ್ಯ ಕೆಲಸ, ಹೊರಗಿನ ಟ್ರಾಫಿಕ್​ ನಿಂದ ದಿನದ ಅಂತ್ಯಕ್ಕೆ ದೇಹ ಬಳಲಿ ಉತ್ಸಾಹವನ್ನೇ ಕಳೆದುಕೊಂಡಿರುತ್ತದೆ. ಈ ರೀತಿಯ ಒತ್ತಡದ ಬದುಕಿಗೆ ಪಾದಗಳನ್ನು ಬಿಸಿ ನೀರಿನಲ್ಲಿ ಇಟ್ಟುಕೊಳ್ಳುವುದು ನಿಮ್ಮ ಒತ್ತಡವನ್ನು ನಿವಾರಣೆಯಾಗುವಂತೆ ಮಾಡುತ್ತದೆ.

ಒಳ್ಳೆಯ ನಿದ್ದೆ ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆಯ ಸಮಸ್ಯೆ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಅದಕ್ಕೆ ಪಾದಗಳನ್ನು ಬಿಸಿನೀರಿನಲ್ಲಿ ಇಟ್ಟುಕೊಳ್ಳುವುದು ಪರಿಹಾರವಾಗಲಿದೆ. ದಿನವಿಡೀ ದುಡಿದು ಬಂದಾಗ ಸುಸ್ತಾದ ದೇಹಕ್ಕೆ ಬೇಗನೆ ನಿದ್ದೆ ಬರುವುದಿಲ್ಲ. ಆಗ 10 ನಿಮಿಷ ಬಿಸಿನೀರಿನಲ್ಲಿ ಪಾದಗಳನ್ನು ನೆನೆಸಿಡಿ. ಅದು ಒತ್ತಡ ನಿವಾರಣೆ ಮಾಡಿ ಚೆನ್ನಾಗಿ ನಿದ್ದೆ ಬರುವಂತೆ ಮಾಡುತ್ತದೆ.

ತಲೆನೋವಿಗೂ ಒಳಿತು ಇಡೀ ದಿನ ಕಂಪ್ಯೂಟರ್​, ಮೊಬೈಲ್​ ಎಂದು ಹಿಡಿದು ಕುಳಿತುಕೊಂಡಾಗ ಬೆನ್ನು ಹಾಗೂ ಕುತ್ತಿಗೆಯ ನರಗಳು ಹಿಡಿದುಕೊಳ್ಳುತ್ತವೆ. ಇದರಿಂದ ತಲೆನೋವು, ಕುತ್ತಿಗೆ ಹಾಗೂ ಬೆನ್ನು ನೋವಿನ ಸಮಸ್ಯೆ ಎದುರಾಗುತ್ತದೆ. ಬಿಸಿನೀರಿನಲ್ಲಿ ಪಾದಗಳನ್ನು ಇರಿಸಿಕೊಳ್ಳುವುದರಿಂದ ಪಾದಗಳಿಗೆ ಬೆಚ್ಚಗಿನ ಅನುಭವವಾಗಿ ನಿಮ್ಮ ಕುತ್ತಿಗೆ ಹಾಗೂ ಬೆನ್ನಿನ ನರಗಳನ್ನು ಸಡಿಲಗೊಳಿಸುತ್ತದೆ. ಇದರಿಂದ ತಲೆನೋವು, ಕುತ್ತಿಗೆಬೆನ್ನು ನೋವು ಕೂಡ ಶಮನವಾಗಿತ್ತದೆ

ಹಿಮ್ಮಡಿ ಒಡೆತ ಮತ್ತು ನೋವು ಪಾದಗಳನ್ನು ಬಿಸಿನೀರಿನಲ್ಲಿ ಇರಿಸಿಕೊಳ್ಳುವುದರಿಂದ ಹಿಮ್ಮಡಿ ಒಡೆಯುವುದು ಕಡಿಮೆಯಾಗುತ್ತದೆ. ಧೂಳು, ಕೆಸರು ತಾಗಿ ನಿಮ್ಮ ಒಡೆದ ಹಿಮ್ಮಡಿಗೆ ಆಹ್ಲಾದತೆ ನೀಡಿ ನೋವನ್ನೂ ಕಡಿಮೆಮಾಡುತ್ತದೆ. ಸತ್ತ ಚರ್ಮದ ಶೇಖರಣೆಯಿಂದ ಉಂಟಾದ ಹಿಮ್ಮಡಿ ಒಡೆತಕ್ಕೆ ಬೆಚ್ಚಗಿನ ಅನುಭವ ನೀಡಿ ನಿಮ್ಮ ಹಿಮ್ಮಡಿಯನ್ನು ಮೃದು ಹಾಗೂ ಅಂದವಾಗಿ ಕಾಣಿಸಿಕೊಳ್ಳುವಂತೆ ಬಿಸಿ ನೀರು ಮಾಡುತ್ತದೆ.

ಶೀತ, ನೆಗಡಿ ಪರಿಹಾರ ಚಳಿಗಾಲದಲ್ಲಿ ವಾತಾವರಣ ತಂಪಾಗಿ ದೇಹಕ್ಕೆ ಶೀತ, ನೆಗಡಿಯಂತಹ ಕಾಯಿಲೆಗಳು ಅಂಟಿಕೊಳ್ಳಬಹುದು. ಅಥವಾ ಕೆಲವರಿಗೆ ತಣ್ಣನೆಯ ನೀರಿನ ಸೇವನೆಯೂ ನೆಗಡಿಯುಂಟು ಮಾಡಬಹುದು. ಅಂತಹ ಸಮಸ್ಯೆಗಳಿಗೆ ಬಿಸಿನೀರಿನಲ್ಲಿ ಪಾದಗಳನ್ನು ಇರಿಸಿಕೊಳ್ಳುವುದು ಪರಿಹಾರವಾಗಲಿದೆ. ಬಿಸಿನೀರಿನಲ್ಲಿ ಪಾದಗಳನ್ನು ಇರಿಸಿಕೊಳ್ಳುವುದರಿಂದ ನಿಮ್ಮ ದೆಹದಲ್ಲಿ ಕಫ ಶೇಖರಣೆಯಾಗಿದ್ರೂ ಅದೂ ಕರಗುತ್ತದೆ. ಆದ್ದರಿಂದ ದಿನದಲ್ಲಿ 10 ನಿಮಿಷವಾದರೂ ಕಾಲುಗಳನ್ನು ಪಾದ ಮುಳುಗುವಂತೆ ಬಿಸಿನೀರಿನಲ್ಲಿ ಮುಳುಗಿಸಿಟ್ಟುಕೊಳ್ಳುವುದು ಅರೋಗಯಕ್ಕೆ ಉತ್ತಮವಾಗಿದೆ.

ಇದನ್ನೂ ಓದಿ:

ಚೆನ್ನಾಗಿ ನಿದ್ದೆ ಬರಲು ಈ ಆಹಾರಗಳನ್ನು ಅಗತ್ಯವಾಗಿ ಸೇವಿಸಿ

ಅಂಡರ್‌ ವೈಯರ್ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರಬಹುದೇ? ವೈದ್ಯರ ಸಲಹೆ ಏನು ತಿಳಿಯಿರಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ