ಚೆನ್ನಾಗಿ ನಿದ್ದೆ ಬರಲು ಈ ಆಹಾರಗಳನ್ನು ಅಗತ್ಯವಾಗಿ ಸೇವಿಸಿ

ದಿನವಿಡೀ ದುಡಿದ ದೇಹಕ್ಕೆ ಕೊಂಚ ವಿಶ್ರಾಂತಿ ಅಗತ್ಯವಾಗಿ ಬೇಕಾಗಿರುತ್ತದೆ. ಆದ್ದರಿಂದ ರಾತ್ರಿ ಆರಾಮವಾಗಿ ನಿದ್ದೆ ಬರಲು ಈ ಆಹಾರಗಳನ್ನು ತಪ್ಪದೇ ಸೇವಿಸಿ

ಚೆನ್ನಾಗಿ ನಿದ್ದೆ ಬರಲು ಈ ಆಹಾರಗಳನ್ನು ಅಗತ್ಯವಾಗಿ ಸೇವಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 18, 2021 | 2:51 PM

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅಹಾರ ಅತೀ ಮುಖ್ಯ ಅಂಶವಾಗಿದೆ. ಅದೇ ರೀತಿ ದೇಹಕ್ಕೆ ನಿದ್ದೆ ಕೂಡ ಅಷ್ಟೇ ಮುಖ್ಯವಾಗಿದೆ. ಮಲಗಿದ ತಕ್ಷಣ ಕೆಲವರಿಗೆ ನಿದ್ದೆ ಬರುತ್ತದೆ. ಅಂತಹವರು ನಿಜಕ್ಕೂ ಅದೃಷ್ಟಶಾಲಿಗಳು ಎನ್ನಬಹುದು. ಆದರೆ ಹಲವರು ರಾತ್ರಿ ನಿದ್ದೆ ಸರಿಯಾಗಿ ಬರದೆ ಒದ್ದಾಡುತ್ತಾರೆ. ಅಂತಹವರು ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ರಾತ್ರಿ ಆರಾಮವಾಗಿ ನಿದ್ರಿಸಬಹುದು. ನಿದ್ದೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಲು ಸಹಾಯಕವಾಗಿದೆ. ದಿನವಿಡೀ ದುಡಿದ ದೇಹಕ್ಕೆ ಕೊಂಚ ವಿಶ್ರಾಂತಿ ಅಗತ್ಯವಾಗಿ ಬೇಕಾಗಿರುತ್ತದೆ. ಆದರೆ ಕೆಲವರು ನಿದ್ರಾಹೀನತೆಯ ಸಮಸ್ಯೆಯಿಂದ ಇನ್ನಿಲ್ಲದ ತೊಂದರೆಗಳನ್ನು ಅನುಭವಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ನೀವು ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಿ. ಆಗ ನಿದ್ದೆಯ ಜತೆಗೆ ನಿಮ್ಮ ಸ್ವಾಸ್ಥ್ಯವನ್ನೂ ಕಾಪಾಡಿಕೊಳ್ಳಬಹುದು. ಹಾಗಾದರೆ ರಾತ್ರಿ ಆರಾಮವಾಗಿ ನಿದ್ದೆ ಬರಲು ಈ ಆಹಾರಗಳನ್ನು ತಪ್ಪದೇ ಸೇವಿಸಿ.

ಜೇನುತುಪ್ಪ ಪ್ರತಿದಿನ ಮಲಗುವ ಮೊದಲು ಒಂದು ಲೋಟ ಹಾಲು ಅಥವಾ ನೀರಿಗೆ ಅರ್ಧ ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಇದು ನಿಮ್ಮನ್ನು ಸುಲಭವಾಗಿ ನಿದ್ದೆಗೆ ಜಾರುವಂತೆ ಮಾಡುತ್ತದೆ. ಅಲ್ಲದೆ ಆ್ಯಂಟಿಬ್ಯಾಕ್ಟೀರಿಯಲ್​ ಗುಣ ಹೊಂದಿರುವ ಜೇನುತುಪ್ಪವು ದೇಹದ ಆರೋಗ್ಯವನ್ನೂ ಕಾಪಾಡುತ್ತದೆ.

ಹಾಲು ಮಲಗುವ ಮೊದಲು ಬೆಚ್ಚಗಿನ ಹಾಲಿನ ಸೇವನೆ ಕಣ್ತುಂಬ ನಿದ್ದೆ ಮಾಡುವಂತೆ ಮಾಡುತ್ತದೆ. ಅಲ್ಲದೆ ಬಿಸಿ ಹಾಲಿನ ಸೇವನೆ ನಿಮ್ಮ ಆತಂಕ, ಒತ್ತಡವನ್ನೂ ನಿವಾರಿಸುತ್ತದೆ. ಹೀಗಾಗಿ ಪ್ರತಿದಿನ ಮಲಗುವ ಮೊದಲು ಹಾಲು ಕುಡಿಯುವುದನ್ನು ಅಭ್ಯಸಿಸಿಕೊಳ್ಳಿ. ಇದರ ಜತೆಗೆ ಹಾಲು ನಿಮ್ಮ ದೇಹಕ್ಕೆ ಬೇಕಾದ ಪ್ರೋಟೀನ್​ ಅಂಶಗಳನ್ನು ಯಥೇಚ್ಚವಾಗಿ ನೀಡುತ್ತದೆ. ಆದ್ದರಿಂದ ಹಾಲಿನ ಸೇವನೆ ಎಲ್ಲ ಕಾರಣಗಳಿಂದಲೂ ಒಳಿತು.

ಡ್ರೈ ಫ್ರೂಟ್ಸ್ ​ ಮಲಗುವ ಮೊದಲು ಬಾದಾಮಿ, ಒಣದ್ರಾಕ್ಷಿ, ಅಂಜೂರದಂತಹ ಡ್ರೈ ಫ್ರೂಟ್ಸ್ ನ ಸೇವನೆ ನಿಮ್ಮ ಆಯಾಸವನ್ನು ಕಡಿಮೆಮಾಡಿ ನಿದ್ದೆಯೆಡೆಗೆ ಜಾರುವಂತೆ ಮಾಡುತ್ತದೆ. ಆದ್ದರಿಂದ ಡ್ರೈ ಫ್ರೂಟ್ಸ್ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೆ ಡ್ರೈ ಫ್ರೂಟ್ಸ್ ನಿಮ್ಮ ದೇಹಕ್ಕೆ ಶಕ್ತಿಯನ್ನೂ ನೀಡುತ್ತದೆ.

ಮೀನು ಸೇವನೆ ನೀವು ನಾನ್​ ವೆಜ್​ ಪ್ರಿಯರಾಗಿದ್ದರೆ ರಾತ್ರಿ ಊಟದ ಜತೆ ಮೀನನ್ನು ಸೇವಿಸಿ. ಇದು ನಿಮಗೆ ಬೇಗನೆ ನಿದ್ದೆ ಬರುವಂತೆ ಮಾಡುತ್ತದೆ. ಮೀನಿನಲ್ಲಿರುವ ಒಮೆಗಾ 3 ಅಂಶವು ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಿ, ಸ್ನಾಯುಗಳನ್ನು ಬಲಪಡಿಸುತ್ತದೆ. ಆದ್ದರಿಂದ ಪಿಶ್​ ಫ್ರೈ, ಪಿಶ್​ ಕರಿಯಂತಹ ಆಹಾರವನ್ನು ರಾತ್ರಿ ಸಮಯದಲ್ಲಿ ಸೇವಿಸಿ.

ಚಹಾ ದಣಿದ ದೇಹಕ್ಕೆ ಬಿಸಿಯಾದ ಚಹಾವನ್ನು ನೀಡಿದರೆ ಆರಾಮವಾಗಿ ನಿದ್ದೆ ನಿಮ್ಮೆಡೆಗೆ ಬರುತ್ತದೆ. ಹೌದು, ಲ್ಯಾವೆಂಡರ್​ ಚಹಾ, ಪ್ಯಾಷನ್​ ಪ್ಲವರ್ ಚಹಾ ಹೀಗೆ ಹಲವು ರೀತಿಯ ಚಹಾಗಳು ನಿಮ್ಮ ದೇಹದ ಸುಸ್ತನ್ನು ನಿವಾರಣೆಗೊಳಿಸುತ್ತದೆ. ಇದರಿಂದ ನಿಮ್ಮ ದಣಿದ ದೇಹಕ್ಕೆ ನಿದ್ರಾದೇವಿ ಸುಲಭವಾಗಿ ಅಪ್ಪಿಕೊಳ್ಳುತ್ತಾಳೆ.

ಇದನ್ನೂ ಓದಿ:

ನಕಾರಾತ್ಮಕ ಆಲೋಚನೆಗಳನ್ನು ಕೌಂಟರ್ ಮಾಡುವ ಯೋಚನಾ ಶಕ್ತಿ ಬೆಳೆಸಿಕೊಳ್ಳಬೇಕು: ಡಾ ಸೌಜನ್ಯ ವಶಿಷ್ಠ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್