AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಡರ್‌ ವೈಯರ್ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರಬಹುದೇ? ವೈದ್ಯರ ಸಲಹೆ ಏನು ತಿಳಿಯಿರಿ

Women Health: ಅಂಡರ್‌ ವೈಯರ್ ಬ್ರಾ ಧರಿಸುವುದರಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆ ಬರಲಿದೆ? ಎಂಬ ಪ್ರಶ್ನೆಗೆ ಫೋರ್ಟಿಸ್ ಆಸ್ಪತ್ರೆ ಸರ್ಜಿಕಲ್ ಆಂಕೋಲಜಿ ನಿರ್ದೇಶಕರಾದ ಡಾ.ಸಂದೀಪ್ ನಾಯಕ್ ಸೂಕ್ತ ಉತ್ತರ ನೀಡಿದ್ದಾರೆ.

ಅಂಡರ್‌ ವೈಯರ್ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರಬಹುದೇ? ವೈದ್ಯರ ಸಲಹೆ ಏನು ತಿಳಿಯಿರಿ
ಸಾಂಕೇತಿಕ ಚಿತ್ರ
Follow us
TV9 Web
| Updated By: preethi shettigar

Updated on: Dec 17, 2021 | 3:23 PM

ಬಹಳಷ್ಟು ಮಹಿಳೆಯರಲ್ಲಿ ಅಂಡರ್‌ ವೈಯರ್ ಬ್ರಾ ಧರಿಸುವ ಬಗ್ಗೆ ಸಾಕಷ್ಟು ಗೊಂದಲ ಹಾಗೂ ಅನುಮಾನಗಳು ಇದ್ದೇ ಇವೆ. ಅಂಡರ್‌ ವೈಯರ್ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ (Breast cancer), ಪಕ್ಕೆಲುಗಳ ಸೆಳೆತ, ಮೂಳೆ ಸವೆತ, ಬೆನ್ನು ನೋವು ಸೇರಿದಂತೆ ಇತರೆ ಆರೋಗ್ಯ ಸಮಸ್ಯೆ ಬರಬಹುದು ಎಂಬ ಭಯದಲ್ಲಿಯೇ ಇಂತಹ ಬ್ರಾಗಳನ್ನು ಖರೀದಿ ಮಾಡಲು ಮಹಿಳೆಯರು ಹಿಂದೇಟು ಹಾಕುತ್ತಾರೆ. ಸಾಕಷ್ಟು ಮಹಿಳೆಯರು ಈ ಬಗೆಗಿನ ಊಹಾಪೋಹಗಳನ್ನೇ ನಿಜವೆಂದು ನಂಬಿ ಇಂತಹ ಬ್ರಾಗಳ ಖರೀದಿಗೂ ಮುಂದಾಗುವುದಿಲ್ಲ. ಹಾಗಿದ್ದರೆ ಅಂಡರ್‌ ವೈಯರ್ ಬ್ರಾ (Underwire Bra) ಧರಿಸುವುದರಿಂದ ಇಷ್ಟೆಲ್ಲಾ ಆರೋಗ್ಯ ಸಮಸ್ಯೆ ಬರಲಿದೆಯೇ? ಇದಕ್ಕೆ ಫೋರ್ಟಿಸ್ ಆಸ್ಪತ್ರೆ ಸರ್ಜಿಕಲ್ ಆಂಕೋಲಜಿ ನಿರ್ದೇಶಕರಾದ ಡಾ.ಸಂದೀಪ್ ನಾಯಕ್ ಸೂಕ್ತ ಉತ್ತರ ನೀಡಿದ್ದಾರೆ. ಅವರ ಸಲಹೆಗಳ ಬಗ್ಗೆ ಗಮನಹರಿಸಿ.

ಅಂಡರ್‌ ವೈಯರ್ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರಲಿದೆಯೇ? ಖಂಡಿತ ಇಲ್ಲ. ಅಂಡರ್‌ವೈಯರ್ ಬ್ರಾ ಹಾಗೂ ಕ್ಯಾನ್ಸರ್‌ಗೂ ಯಾವುದೇ ಸಂಬಂಧವಿಲ್ಲ. ಕ್ಯಾನ್ಸರ್ ಎನ್ನುವುದು ನಮ್ಮ ಜೀವನ ಶೈಲಿಯಲ್ಲಿನ ಬದಲಾವಣೆ ಹಾಗೂ ಡಿಎನ್‌ಎ ಬದಲಾವಣೆ ಇದರಿಂದಾಗಿ ಕ್ಯಾನ್ಸರ್ ಬರಲಿದೆ. ಅಂಡರ್‌ ವೈಯರ್ ಬ್ರಾ ಧರಿಸುವುದರಿಂದ ಆ ಭಾಗದಲ್ಲಿ ರಕ್ತ ಕಟ್ಟುವುದರಿಂದ ಕ್ಯಾನ್ಸರ್ ಬರಬಹುದು ಎನ್ನುವುದು ಊಹಾಪೋಹಗಳಷ್ಟೇ. ಹೀಗಾಗಿ ಯಾವುದೇ ಸಂಕೋಚವಿಲ್ಲದೇ ಅಂಡರ್‌ ವೈಯರ್ ಬ್ರಾಗಳನ್ನು ನಿಮ್ಮ ಇಚ್ಚೆಗನುಗುಣವಾಗಿ ಹಾಗೂ ದೇಹಕ್ಕನುಗುಣವಾಗಿ ಧರಿಸಬಹುದು ಎಂದು ಡಾ.ಸಂದೀಪ್ ನಾಯಕ್ ಹೇಳಿದ್ದಾರೆ.

ಬೆನ್ನು ನೋವಿಗೆ ಅಂಡರ್‌ ವೈಯರ್ ಬ್ರಾ ಕಾರಣವಾಗಬಹುದೇ? ಕೆಲವೊಮ್ಮೆ ನೀವು ಧರಿಸುವ ಬ್ರಾ ಹೆಚ್ಚು ಬಿಗಿಯಾಗಿದ್ದರೆ, ನಿಮ್ಮ ಸೈಜಿಗೆ ಹೊಂದಿಕೆಯಾಗದೇ ಇರುವ ಬ್ರಾಗಳಾದರೆ ಅದರಿಂದ ಬಿಗಿತ ಉಂಟಾಗಿ ಬೆನ್ನು ನೋವಿಗೆ ಕಾರಣವಾಗಬಹುದೇ ಹೊರತು ಅಂಡರ್‌ ವೈಯರ್ ಬ್ರಾಗಳಿಂದಲೇ ಬೆನ್ನು ನೀವು ಬರಲಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಡಾ.ಸಂದೀಪ್ ನಾಯಕ್ ತಿಳಿಸಿದ್ದಾರೆ.

ಅಂಡರ್‌ ವೈಯರ್ ಬ್ರಾ ದೀರ್ಘಾವಧಿಯವರೆಗೆ ಧರಿಸಲು ಒಳ್ಳೆಯದೇ? ಬ್ರಾ ಧರಿಸುವುದು ಅವರವರ ಕಂಫರ್ಟಬಲ್​ಗೆ ಸಂಬಂಧಿಸಿದ್ದು, ರಾತ್ರಿ ಮಲಗುವ ಹೊತ್ತು ಮನೆಯಲ್ಲಿ ಇರುವ ಸಂದರ್ಭದಲ್ಲಿ ಬ್ರಾ ಧರಿಸದೇ ಇದ್ದರೆ ರಕ್ತ ಸಂಚಲನ ಸರಾಗವಾಗಿ ಆಗಲು ಸಹಕಾರಿಯಾಗುತ್ತದೆ. ಹೊರಗಡೆ ಹೋಗುವ ಸಂದರ್ಭದಲ್ಲಿ ಯಾವುದೇ ರೀತಿಯ ಬ್ರಾಗಳನ್ನಾದರೂ ಧರಿಸಬಹುದು. ಅಂಡರ್‌ ವೈಯರ್ ಬ್ರಾಗಳಿಂದಲೇ ಆರೋಗ್ಯ ಸಮಸ್ಯೆ ಬರಬಹುದು ಎನ್ನುವ ಕಲ್ಪನೆ ತಪ್ಪು ಎಂದು ಡಾ.ಸಂದೀಪ್ ನಾಯಕ್ ಹೇಳಿದ್ದಾರೆ.

ಅಂಡರ್‌ ವೈಯರ್ ಬ್ರಾ ಧರಿಸುವುದರಿಂದ ಆರೋಗ್ಯ ಸಮಸ್ಯೆ ಬರಬಹುದೇ? ಯಾವುದೇ ರೀತಿಯ ಸಮಸ್ಯೆ ಇಲ್ಲ. ಯಾವ ವಸ್ತು ಅಥವಾ ಉಡುಪಾಗಲಿ ಅಗತ್ಯಕ್ಕಿಂತ ಹೆಚ್ಚಾಗಿ ಬಳಸುವುದು ಯೋಗ್ಯವಲ್ಲ. ಆದರೆ ಅಗತ್ಯಕ್ಕೆ ತಕ್ಕಂತೆ ಬಳಸುವುದು ಉತ್ತಮ. ಅಂಡರ್‌ ವೈಯರ್ ಬ್ರಾಗಳು ಸ್ತನಗಳು ಸಮತಟ್ಟಾಗಿ ಕೂರಲು ಸಹಾಯವಾಗಲಿ ಎಂಬ ಕಾರಣಕ್ಕಷ್ಟೇ ವೈಯರ್ ಬಳಕೆ ಮಾಡಲಾಗಿದೆ.ಇದರಿಂದ ಸ್ತನಕ್ಕಾಗಲಿ ಅಥವಾ ಇತರೆ ಭಾಗಗಳಿಗೆ ಸಮಸ್ಯೆ ಉಂಟುಮಾಡುವುದಿಲ್ಲ ಎಂದು ಡಾ.ಸಂದೀಪ್ ನಾಯಕ್ ತಿಳಿಸಿದ್ದಾರೆ.

ಇದನ್ನೂ ಓದಿ:

Women Health: ಹೆರಿಗೆಯ ನಂತರ ತಲೆ ಕೂದಲು ಉದುರುವ ಸಮಸ್ಯೆ ಎದುರಾಗಿದೆಯೇ; ಇಲ್ಲಿದೆ ಸೂಕ್ತ ಪರಿಹಾರ

Women Health: ಒಂದೇ ತಿಂಗಳಲ್ಲಿ ಎರಡು ಬಾರಿ ಮುಟ್ಟಾಗುತ್ತಿದೆಯೇ? ಅಪಾಯದ ಬಗ್ಗೆ ಇರಲಿ ಎಚ್ಚರ

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!