Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health: ಒಂದೇ ತಿಂಗಳಲ್ಲಿ ಎರಡು ಬಾರಿ ಮುಟ್ಟಾಗುತ್ತಿದೆಯೇ? ಅಪಾಯದ ಬಗ್ಗೆ ಇರಲಿ ಎಚ್ಚರ

ಕೆಲವು ಮಹಿಳೆಯರು ನಿಯಮಿತವಾಗಿ ಎರಡು ವಾರಗಳ ಋತುಚಕ್ರವನ್ನು ಹೊಂದಿರುತ್ತಾರೆ. ಆದರೆ ಕೆಲವು ಮಹಿಳೆಯರಿಗೆ ಇದು ತಾತ್ಕಾಲಿಕ ಸಮಸ್ಯೆಯಾಗಿದೆ. ಇದು ನಿಮಗೆ ಮತ್ತೆ ಮತ್ತೆ ಸಂಭವಿಸುತ್ತಿದ್ದರೆ ಖಂಡಿತವಾಗಿಯೂ ನಿಮ್ಮ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ.

Women Health: ಒಂದೇ ತಿಂಗಳಲ್ಲಿ ಎರಡು ಬಾರಿ ಮುಟ್ಟಾಗುತ್ತಿದೆಯೇ? ಅಪಾಯದ ಬಗ್ಗೆ ಇರಲಿ ಎಚ್ಚರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Dec 11, 2021 | 7:35 AM

ಮುಟ್ಟು ಯಾವಾಗಲೂ 25 ರಿಂದ 28 ದಿನಗಳ ಮಧ್ಯಂತರದಲ್ಲಿ ಮಹಿಳೆಯರಲ್ಲಿ ಸಂಭವಿಸುತ್ತದೆ. ಹೀಗಾಗಿ 35 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಆಗುವ ಮುಟ್ಟನ್ನು(Periods) ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ಮಹಿಳೆಯು ತನ್ನದೇ ಆದ ಹಾರ್ಮೋನುಗಳನ್ನು ಹೊಂದಿರುತ್ತಾಳೆ ಮತ್ತು ಅದರ ಮೇಲೆ ಮುಟ್ಟಾಗುವುದು ಅವಲಂಬಿಸಿರುತ್ತದೆ ಅಥವಾ ಕೆಲವೊಮ್ಮೆ ಮುಟ್ಟು ತಿಂಗಳಿಗೆ ಎರಡು ಬಾರಿ ಸಂಭವಿಸುತ್ತದೆ. ಮಹಿಳೆಗೆ ತಿಂಗಳಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಾರಿ ಮುಟ್ಟಾದರೆ ಅದನ್ನು ಅನಿಯಮಿತ ಮುಟ್ಟು ಎಂದು ಕರೆಯಲಾಗುತ್ತದೆ.

ಈ ರೀತಿಯ ಗಂಭೀರ ಸಮಸ್ಯೆ ಸಂಭವಿಸುತ್ತಿದ್ದರೆ ಅದರ ಬಗ್ಗೆ ಎಚ್ಚರದಿಂದಿರುವುದು ಅವಶ್ಯಕ. ಏಕೆಂದರೆ ವಿವಾಹಿತ ಹುಡುಗಿಯರು ಸುಲಭವಾಗಿ ತಾಯಂದಿರಾಗಲು ಸಾಧ್ಯವಿಲ್ಲ. ಇದರೊಂದಿಗೆ ಇತರ ಆರೋಗ್ಯ ಸಂಬಂಧಿತ ಸಮಸ್ಯೆಗಳು ಸಹ ಮುಂಚೂಣಿಗೆ ಬರಬಹುದು. ಆದ್ದರಿಂದ ಅನಿಯಮಿತ ಮುಟ್ಟಾಗುವ ಸಮಸ್ಯೆಯಿಂದ ಹೊರಬರಬೇಕು. ಕೆಲವು ಮಹಿಳೆಯರು ನಿಯಮಿತವಾಗಿ ಎರಡು ವಾರಗಳ ಋತುಚಕ್ರವನ್ನು ಹೊಂದಿರುತ್ತಾರೆ. ಆದರೆ ಕೆಲವು ಮಹಿಳೆಯರಿಗೆ ಇದು ತಾತ್ಕಾಲಿಕ ಸಮಸ್ಯೆಯಾಗಿದೆ. ಇದು ನಿಮಗೆ ಮತ್ತೆ ಮತ್ತೆ ಸಂಭವಿಸುತ್ತಿದ್ದರೆ ಖಂಡಿತವಾಗಿಯೂ ನಿಮ್ಮ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ.

ತಿಂಗಳಿಗೆ ಎರಡು ಬಾರಿ ಮುಟ್ಟಾಗಲು ಕಾರಣಗಳು ನಿಮ್ಮ ಕುಟುಂಬದಲ್ಲಿ ಯಾರಾದರೂ ಫೈಬ್ರಾಯ್ಡ್‌ಗಳು ಹಾಗೂ ಆರಂಭಿಕ ಋತುಬಂಧವನ್ನು ಹೊಂದಿದ್ದರೆ ನೀವು ತಿಂಗಳಿಗೆ ಎರಡು ಬಾರಿ ಮುಟ್ಟಾಗುವ ಸಾಧ್ಯತೆ ಹೆಚ್ಚು. ತಾಯಂದಿರು ಅನಿಯಮಿತ ರಕ್ತಸ್ರಾವ ಹೊಂದಿದ್ದರೆ ಕೆಲವೊಮ್ಮೆ ಮಕ್ಕಳಿಗೂ ಬರುವ ಸಾಧ್ಯತೆ ಇದೆ. ಅತಿಯಾದ ರಕ್ತಸ್ರಾವ ಉಂಟಾದರೂ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರಕ್ತಹೀನತೆಯ ರೂಪದಲ್ಲಿಯೂ ಈ ಸಮಸ್ಯೆ ಕಂಡುಬರುತ್ತದೆ.

ಹುಣ್ಣುಗಳು ಕಾರಣವಾಗಿರಬಹುದು ಮುಟ್ಟಿನ ಸಮಯದಲ್ಲಿ ಅಲ್ಸರ್ ಸಮಸ್ಯೆ ತೀವ್ರವಾಗುತ್ತದೆ. ಈ ಕಾರಣದಿಂದ ರಕ್ತಸ್ರಾವ ಹೆಚ್ಚಾಗುತ್ತದೆ. ಕೆಲವೊಮ್ಮೆ ಗರ್ಭಕೋಶದ ಸಮಸ್ಯೆಯಿಂದಲೂ ರಕ್ತಸ್ರಾವ ಹೆಚ್ಚಾಗುತ್ತದೆ.

ಗರ್ಭಪಾತ ಅನೇಕ ಬಾರಿ ಮಹಿಳೆಯರು ಗರ್ಭಪಾತ ಮಾಡುತ್ತಾರೆ. 15 ರಿಂದ 18 ರಷ್ಟು ಗರ್ಭಧಾರಣೆಗಳು ಗರ್ಭಪಾತದಲ್ಲಿ ಕೊನೆಗೊಳ್ಳುತ್ತವೆ. ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ಯೋನಿ ರಕ್ತಸ್ರಾವವನ್ನು ಅನುಭವಿಸುವುದು ಸಾಮಾನ್ಯವಾಗಿದೆ. ಆದರೆ ಇದು ಗರ್ಭಪಾತದ ಸಂಕೇತವೂ ಆಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.

ಹೆಚ್ಚು ಒತ್ತಡ ಮಹಿಳೆಯು ಹೆಚ್ಚಿನ ಒತ್ತಡದಲ್ಲಿದ್ದರೆ, ಅದು ನೇರವಾಗಿ ಮುಟ್ಟಿನ ಮೇಲೆ ಬೀಳುತ್ತದೆ. ವಾಸ್ತವವಾಗಿ ಒತ್ತಡದಿಂದಾಗಿ ಹಾರ್ಮೋನುಗಳು ರಕ್ತದಲ್ಲಿ ಹೆಚ್ಚಾಗುತ್ತವೆ. ಒತ್ತಡದಿಂದಾಗಿ ಮುಟ್ಟು ನಿರಂತರವಾಗಿರಬಹದು ಅಥವಾ ಬೇಗ ಮುಗಿಯಬಹುದು. ಕೆಲಸದ ಒತ್ತಡ ಅಥವಾ ಮಾನಸಿಕ ಸಮಸ್ಯೆಗಳಿಂದಾಗಿ ಅನಿಯಮಿತ ಮುಟ್ಟಿನ ಸಮಸ್ಯೆ ಎದುರಾಗಬಹದು.

ಇದನ್ನೂ ಓದಿ: Women Health: ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವಿನ ಪರಿಹಾರಕ್ಕೆ ಹೀಗೆ ಮಾಡಿ

Women Health: ಪಿಸಿಒಡಿ ಸಮಸ್ಯೆ ಯುವತಿಯರಲ್ಲಿ ಹೆಚ್ಚುವಿಕೆಗೆ ಕಾರಣವೇನು? ಸಮಸ್ಯೆಯ ಲಕ್ಷಣಗಳು ಮತ್ತು ಪರಿಹಾರ ವಿಧಾನ ಹೀಗಿದೆ

ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ