Women Health: ಪಿಸಿಒಡಿ ಸಮಸ್ಯೆ ಯುವತಿಯರಲ್ಲಿ ಹೆಚ್ಚುವಿಕೆಗೆ ಕಾರಣವೇನು? ಸಮಸ್ಯೆಯ ಲಕ್ಷಣಗಳು ಮತ್ತು ಪರಿಹಾರ ವಿಧಾನ ಹೀಗಿದೆ

ಅನಿಯಮಿತ ಮುಟ್ಟಿನಿಂದಾಗಿ, ತೂಕ ಹೆಚ್ಚಳದಿಂದಾಗಿ ಪಿಸಿಒಡಿ ಸಮಸ್ಯೆ ಹೆಚ್ಚು ಕಾಡುತ್ತದೆ. ಪಿಸಿಒಡಿ ಸಮಸ್ಯೆಯು ಬಂಜೆತನಕ್ಕೆ ಕಾರಣವಾಗಬಹುದು. ಇದು ಮಹಿಳೆಯರು ಗರ್ಭಧರಿಸಲು ಕಷ್ಟವಾಗಬಹುದು.

Women Health: ಪಿಸಿಒಡಿ ಸಮಸ್ಯೆ ಯುವತಿಯರಲ್ಲಿ ಹೆಚ್ಚುವಿಕೆಗೆ ಕಾರಣವೇನು? ಸಮಸ್ಯೆಯ ಲಕ್ಷಣಗಳು ಮತ್ತು ಪರಿಹಾರ ವಿಧಾನ ಹೀಗಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Aug 26, 2021 | 7:53 AM

ಇತ್ತೀಚೆಗೆ ಯುವತಿಯರಲ್ಲಿ ಪಾಲಿಸಿಸ್ಟಿಕ್ ಅಂಡಾಶಯದ ಖಾಯಿಲೆ ಸಮಸ್ಯೆ ಹೆಚ್ಚುತ್ತಿದೆ. ಮೊದಲು 30 ರಿಂದ 35 ವರ್ಷದ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಕಂಡು ಬರುತ್ತಿತ್ತು. ಆದರೆ ಈಗೀಗ 18 ರಿಂದ 20 ವರ್ಷದ ಒಳಗಿನ ಹುಡುಗಿಯರಲ್ಲಿ ಪಿಸಿಒಡಿ ಸಮಸ್ಯೆ ಸಾಮಾನ್ಯವಾಗಿದೆ. ಈ ಸಮಸ್ಯೆಯನ್ನು ಪೊಸಿಒಎಸ್ ಎಂದೂ ಸಹ ಕರೆಯುತ್ತಾರೆ. ಪಿಸಿಒಡಿ ಹಾರ್ಮೋನುಗಳ ಸಮಸ್ಯೆಯಾಗಿದ್ದು ಅದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.

ಅನಿಯಮಿತ ಮುಟ್ಟಿನಿಂದಾಗಿ, ತೂಕ ಹೆಚ್ಚಳದಿಂದಾಗಿ ಈ ಸಮಸ್ಯೆ ಹೆಚ್ಚು ಕಾಡುತ್ತದೆ. ಪಿಸಿಒಡಿ ಸಮಸ್ಯೆಯು ಬಂಜೆತನಕ್ಕೆ ಕಾರಣವಾಗಬಹುದು. ಇದು ಮಹಿಳೆಯರು ಗರ್ಭಧರಿಸಲು ಕಷ್ಟವಾಗಬಹುದು. ಗರ್ಭಿಣಿಯಾಗಿದ್ದರೆ ಗರ್ಭಪಾತ ಸಂಭವಿಸಬಹುದು. ಈ ಸಮಸ್ಯೆಯ ರೋಗಲಕ್ಷಣಗಳು ಮತ್ತು ಈ ಸಮಸ್ಯೆಯನ್ನು ತಪ್ಪಿಸುವ ಮಾರ್ಗಗಳ ಬಗ್ಗೆ ತಿಳಿಯಿರಿ.

ರೋಗ ಲಕ್ಷಣಗಳು ಅತಿಯಾದ ತೂಕ ಮೊಡವೆ ಹೊಟ್ಟೆ ನೋವು ಮುಖದ ಮೇಲೆ ಕೂದಲು

ಮಧುಮೇಹದಿಂದ ಕ್ಯಾನ್ಸರ್​ಗೆ ಅಪಾಯ ಪಿಸಿಒಡಿ ಸಮಸ್ಯೆ ಇದ್ದರೆ, ಅಂಡಾಶಯ ಕ್ಯಾನ್ಸರ್​ಗೆ ಮಧುಮೇಹದ ಅಪಾಯವಿದೆ. ತಜ್ಞರ ಪ್ರಕಾರ ಪಿಸಿಒಡಿ ಸಮಯದಲ್ಲಿ ಮೇದೋಜ್ಜೀರಕ ಗ್ರಂಥಿಯು ಹೆಚ್ಚು ಇನ್ಸುಲಿನ್ ಉತ್ಪಾದಿಸುತ್ತದೆ. ಅನೇಕ ಬಾರಿ ಮೇದೋಜ್ಜೀರಕ ಗ್ರಂಥಿಯು ಆಯಾಸಗೊಳ್ಳಬಹುದು. ಹೆಚ್ಚು ಇನ್ಸುಲಿನ್ ತಯಾರಿಸುವಾಗ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇನ್ಸುಲಿನ್ ಕೊರತೆಯಿಂದಾಗಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಏಳುವ ಗಡ್ಡೆಗಳು ಬಂಜೆತನ ಸಮಸ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ. ಜತೆಗೆ ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸುತ್ತದೆ.

ಪರಿಹಾರ ಕ್ರಮ ರೋಗ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ. ತಕ್ಷಣ ತಜ್ಞರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ. ಪಿಸಿಒಡಿ ಸಮಸ್ಯೆಯ ಬಗ್ಗೆ ಸಂಶಯವಿದ್ದರೆ ವೈದ್ಯರು ಸೋನೋಗ್ರಫಿಗಾಗಿ ಸಲಹೆ ನೀಡುತ್ತಾರೆ. ಅಗತ್ಯವಿದ್ದರೆ ರಕ್ತ ಪರೀಕ್ಷೆ ಮತ್ತು ಹಾರ್ಮೋನುಗಳ ಪರೀಕ್ಷೆ ಮಾಡಬಹುದು. ವೈದ್ಯರಿಂದ ಪಿಸಿಒಡಿ ಸಮಸ್ಯೆ ದೃಢಪಟ್ಟಿದ್ದರೆ ಚಿಕಿತ್ಸೆಯನ್ನು ಎಂದಿಗೂ ನಿರ್ಲಕ್ಷಿಸಬೇಡಿ ಮತ್ತು ಚಿಕಿತ್ಸೆ ಪಡೆಯಲು ತಡಮಾಡಬೇಡಿ.

ದೀರ್ಘಕಾಲೀನ ಸಮಸ್ಯೆ ಪಿಸಿಒಡಿ ಒಂದು ಹಾರ್ಮೋನ್ ಸಮಸ್ಯೆ. ಆದ್ದರಿಂದ ಚಿಕಿತ್ಸೆಯು ದೀರ್ಘಕಾಲದವರೆಗೆ ನಡೆಯುತ್ತದೆ. ಕನಿಷ್ಠ 12ರಿಂದ 18 ತಿಂಗಳ ಹಾರ್ಮೋನ್ ಚಿಕಿತ್ಸೆಯನ್ನು ನೀಡುತ್ತಾರೆ. ಅಲ್ಪವಧಿಯ ಮಧ್ಯಂತರದ ನಂತರ ನೀವು ಮತ್ತೆ ಚಿಕಿತ್ಸೆ ತೆಗೆದುಕೊಳ್ಳುವ ಸಂದರ್ಭ ಬರಬಹುದು.

ಅಧಿಕವಾಗಿ ಕೊಲೆಸ್ಟ್ರಾಲ್, ಅಧಿಕ ಕೊಬ್ಬು, ಕಾರ್ಬೋಹೈಡ್ರೇಟ್​ಗಳನ್ನು ಹೊಂದಿರುವ ಆಹಾರವನ್ನು ತಪ್ಪಿಸಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಸಮಯಕ್ಕೆ ಸರಿಯಾಗಿ ಔಷಧವನ್ನು ತೆಗೆದುಕೊಳ್ಳಿ. ಮದ್ಯ ಹಾಗೂ ಧೂಮಪಾನದಿಂದ ದೂರವಿರಿ. ನೀವು ಎಷ್ಟು ಹೆಚ್ಚು ದೈಹಿಕ ಚಟುವಟಿಕೆಗಳನ್ನು ಮಾಡುತ್ತೀರೋ ಮತ್ತು ದೇಹದ ತೂಕವನ್ನು ನಿಯಂತ್ರಿಸುತ್ತೀರೋ ಅಷ್ಟು ಆರೋಗ್ಯಕ್ಕೆ ಉತ್ತಮ.

ಇದನ್ನೂ ಓದಿ:

Women Health: ಗರ್ಭಪಾತಕ್ಕೆ ಕಾರಣಗಳೇನು? ಈ ಅಂಶಗಳನ್ನು ಮಹಿಳೆಯರು ತಿಳಿದಿರುವುದು ಒಳಿತು

Women Health: ಯುವತಿಯರಿಗಾಗಿಯೇ ಕೆಲವೊಂದಿಷ್ಟು ಟಿಪ್ಸ್​; ಹೊಟ್ಟೆಯ ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ವಿಧಾನಗಳು

(PCOD Problem increasing girls know about its symptoms and prevention)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್