ಜನರ ಕುತೂಹಲ ತಣಿಸಿದ ಗೂಗಲ್!; 2021ರಲ್ಲಿ ರಿಲೇಷನ್​ಶಿಪ್​ ಬಗ್ಗೆ ಅತ್ಯಂತ ಹೆಚ್ಚು ಕೇಳಲಾದ ಪ್ರಶ್ನೆಗಳು ಇಲ್ಲಿವೆ ನೋಡಿ 

2021ರಲ್ಲಿ ಸಂಬಂಧಗಳ ಕುರಿತು ಗೂಗಲ್​ನಲ್ಲಿ ಅತ್ಯಂತ ಹೆಚ್ಚು ಹುಡುಕಾಟ ನಡೆಸಿದ ವಿಷಯಗಳಾವುವು? ಕುತೂಹಲಕರ ಮಾಹಿತಿ ಇಲ್ಲಿದೆ.

ಜನರ ಕುತೂಹಲ ತಣಿಸಿದ ಗೂಗಲ್!; 2021ರಲ್ಲಿ ರಿಲೇಷನ್​ಶಿಪ್​ ಬಗ್ಗೆ ಅತ್ಯಂತ ಹೆಚ್ಚು ಕೇಳಲಾದ ಪ್ರಶ್ನೆಗಳು ಇಲ್ಲಿವೆ ನೋಡಿ 
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: Dec 19, 2021 | 7:59 AM

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚಿನವರ ಸಂಬಂಧಗಳು ಏರಿಳಿತ ಕಂಡಿವೆ. ಬಹಳಷ್ಟು ಜನರಿಗೆ ಹಲವು ಕುತೂಹಲಕರ ಪ್ರಶ್ನೆಗಳು ಮನದಲ್ಲಿ ಮೂಡಿವೆ. ಈ ಎಲ್ಲವಕ್ಕೂ ಪರಿಹಾರವೇನು? ಅನಿವಾರ್ಯ ಸಂದರ್ಭಗಳಲ್ಲದ ಹೊರತು ಬಹುತೇಕ ಬಾರಿ ಎಲ್ಲರೂ ಮೊರೆ ಹೋಗುವುದು ಗೂಗಲ್​ಗೆ. 2021 ಅಂತ್ಯವಾಗುತ್ತಿರುವ ಈ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಹುಡುಕಾಟಕ್ಕೆ ಒಳಗಾದ ರಿಲೇಷನ್​ಶಿಪ್ ಕುರಿತಾದ ವಿಚಾರಗಳನ್ನು ವರದಿಗಳು ಬಿಡುಗಡೆ ಮಾಡಿವೆ. ಈ ಪಟ್ಟಿಯನ್ನು ನೋಡಿದಾಗ ನಿಮಗೆ ‘ಇಂಥದ್ದೂ ಜನರು ಹುಡುಕುತ್ತಾರಾ?’ ಎಂದನ್ನಿಸಬಹುದು. ಅಥವಾ ನೀವೇ ಈ ಪ್ರಶ್ನೆಗಳನ್ನು ಗೂಗಲ್ ಬಳಿ ಕೇಳಿರಬಹುದು. ಒಟ್ಟಿನಲ್ಲಿ ಕುತೂಹಲಕರ ವಿಚಾರ ನಿಮ್ಮ ಓದಿಗೆ ಇಲ್ಲಿದೆ.

1. ಉತ್ತಮ ಡೇಟಿಂಗ್ ಆಪ್​ಗಳಾವುವು? (What are the best dating apps?) ಹಲವು ವರದಿಗಳ ಪ್ರಕಾರ ಜನರು ಹೆಚ್ಚಾಗಿ ಹುಡುಕಾಟ ನಡೆಸಿರುವುದು ಯಾವುದು ಉತ್ತಮ ಡೇಟಿಂಗ್ ಆಪ್​ಗಳು ಎಂಬುದರ ಕುರಿತು. ಬಹುತೇಕರು ಲಾಕ್​ಡೌನ್, ವರ್ಕ್​ ಫ್ರಮ್ ಹೋಮ್ ಮೊದಲಾದ ಕಾರಣದಿಂದ ಮನೆಯಲ್ಲೇ ಉಳಿದರು. ಆದ್ದರಿಂದಲೇ ಆನ್​ಲೈನ್ ಡೇಟಿಂಗ್ ಮೊರೆ ಹೋದರು. ಬಹುರ್ಶ ಇದೇ ಕಾರಣಕ್ಕೆ ಜನರು ಈ ವಿಷಯದ ಕುರಿತು ಹೆಚ್ಚಾಗಿ ಹುಡುಕಾಟ ನಡೆಸಲು ಕಾರಣವಾಗಿದೆ ಎನ್ನುತ್ತವೆ ವರದಿಗಳು. ಅಂದಹಾಗೆ ಇದು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ವ್ಯಾಪ್ತಿಯಲ್ಲೂ ಹೆಚ್ಚು ಸರ್ಚ್​ಗೆ ಒಳಗಾಗಿದೆ.

2. ಕಿಸ್ ಮಾಡೋದು ಹೇಗೆ? (How to kiss?) ಬಹಳಷ್ಟು ಮಂದಿಗೆ ಈ ವಿಷಯ ನೋಡಿದಾಗ, ಛೇ ಇದೆಂಥಾ ಪ್ರಶ್ನೆ ಎನ್ನಿಸಬಹುದು. ಆದರೆ ಜನರು ಬಹಳ ಕುತೂಹಲದಿಂದ ಈ ವಿಷಯವನ್ನು ಹುಡುಕಿದ್ದಾರೆ. ಚುಂಬನದಲ್ಲೂ ಹಲವು ಬಗೆಗಳಿವೆ. ಪ್ರತಿಯೊಂದಕ್ಕೂ ಬೇರೆ ಬೇರೆ ಅರ್ಥಗಳಿವೆ. ಇದೇ ಕಾರಣಕ್ಕೆ ಜನರು ಕುತೂಹಲದಿಂದ ಇದನ್ನು ಹೆಚ್ಚಾಗಿ ಹುಡುಕಿದ್ದಾರೆ.

Couple representational image

ಪ್ರಾತಿನಿಧಿಕ ಚಿತ್ರ

3. ಆಕೆಗೆ/ ಅವನಿಗೆ ನನ್ನನ್ನು ಕಂಡರೆ ಇಷ್ಟವೇ ಎಂದು ತಿಳಿಯೋದು ಹೇಗೆ? (Does he/she like me?) ಕೊರೊನಾ ಕಾಲದಲ್ಲಿ ಸಂಬಂಧಗಳ ವ್ಯಾಖ್ಯೆಯೂ ಬದಲಾಗಿದೆ. ಮೊದಲೆಲ್ಲಾ ಜತೆಯಲ್ಲೇ ಸುತ್ತಾಡುವಾಗ ಪ್ರೀತಿಯ ಸುಳಿವು ಗೊತ್ತಾಗಿಬಿಡುತ್ತಿತ್ತು. ಆದರೆ ಈಗ ಅನಿವಾರ್ಯವಾಗಿ ಆನ್​ಲೈನ್ ಎಂಬುದೇ ಪ್ರಪಂಚವಾಗಿದ್ದು, ಅದರಲ್ಲೇ ಪರಿಚಯ, ಸುತ್ತಾಟ ಎಂದಾಗಿದೆ. ಅದರೆ ಎದುರಿನವರಿಗೆ ನಾವು ಇಷ್ಟವೇ ಎಂದು ತಿಳಿಯೋದು ಹೇಗೆ? ಇದೇ ಪ್ರಶ್ನೆಯನ್ನು ಜನರು ಗೂಗಲ್​ ಬಳಿ ಕೇಳಿ, ಉತ್ತರ ಕಂಡುಕೊಂಡಿದ್ದಾರೆ.

4. ಲಾಂಗ್ ಡಿಸ್ಟೆನ್ಸ್ ಸಂಬಂಧಗಳನ್ನು ನಿರ್ವಹಿಸೋದು ಹೇಗೆ? (How to make a long distance relationship work?) ಪ್ರಸ್ತುತ ಅನಿವಾರ್ಯ ಕಾರಣಗಳಿಂದ ದಂಪತಿಗಳು, ಪ್ರೇಮಿಗಳು ದೂರದೂರುಗಳಲ್ಲಿ ಇರಬೇಕಾಗಿ ಬಂದಿದೆ. ಕೆಲವೊಮ್ಮೆ ಪರ ಊರುಗಳಲ್ಲಿ, ಕೆಲವೊಮ್ಮೆ ಬೇರೆ ದೇಶಗಳಲ್ಲಿ. ಆದರೆ ಕೆಲಸದ ನಡುವೆ ಕಳೆದು ಹೋಗಿರುವಾಗ, ಸಂಬಂಧವನ್ನು ನಿರ್ವಹಿಸೋದು ಹೇಗೆ? ಇದೇ ಪ್ರಶ್ನೆಯನ್ನು ಜನರು ಗೂಗಲ್​ ಬಳಿ ಕೇಳಿ, ಸಂಶಯ ಪರಿಹರಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಓಟಿಟಿಯಲ್ಲಿ ನೋಡಬಹುದು ‘ಭಜರಂಗಿ 2’ ಸಿನಿಮಾ; ಶಿವರಾಜ್​ಕುಮಾರ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​

BSNL: ಜಿಯೋ ಏರ್ಟೆಲ್ ಯಾವುದರಲ್ಲೂ ಇಲ್ಲ: ಬಿಎಸ್​ಎನ್​ಎಲ್​ನಿಂದ ಹೊಸ ಬಂಪರ್ ಪ್ಲಾನ್ ಘೋಷಣೆ