BSNL: ಜಿಯೋ ಏರ್ಟೆಲ್ ಯಾವುದರಲ್ಲೂ ಇಲ್ಲ: ಬಿಎಸ್​ಎನ್​ಎಲ್​ನಿಂದ ಹೊಸ ಬಂಪರ್ ಪ್ಲಾನ್ ಘೋಷಣೆ

BSNL: ಜಿಯೋ ಏರ್ಟೆಲ್ ಯಾವುದರಲ್ಲೂ ಇಲ್ಲ: ಬಿಎಸ್​ಎನ್​ಎಲ್​ನಿಂದ ಹೊಸ ಬಂಪರ್ ಪ್ಲಾನ್ ಘೋಷಣೆ
BSNL New Plan

BSNL annual prepaid plan: ಜಿಯೋ, ಏರ್ಟೆಲ್ ಹಾಗೂ ವೋಡಾಫೋನ್ ಐಡಿಯಾ ತಮ್ಮ ಯೋಜನೆಗಳನ್ನು ದುಬಾರಿಗೊಳಿಸಿವೆ. ಈ ಪರಿಸ್ಥಿತಿಯ ಲಾಭ ಪಡೆಯಲು ಈಗ ಸರ್ಕಾರಿ ಸ್ವಾಮ್ಯದ BSNL ಮುಂದಾಗಿದೆ. ಬಿಎಸ್​ಎನ್​ಎಲ್​ನ ಈ ಹೊಸ ಪ್ಲಾನ್ ಇತರೆ ಯಾವುದೇ ಟೆಲಿಕಾಂ ಕಂಪನಿಗಳಲ್ಲಿ ಇಲ್ಲ ಎಂಬುವು ವಿಶೇಷ.

TV9kannada Web Team

| Edited By: Vinay Bhat

Dec 18, 2021 | 3:38 PM

ಒಂದು ಕಾಲದಲ್ಲಿ ಟೆಲಿಕಾಂ ಕಂಪನಿಗಳ (Telecom Company) ಎದುರು ಮೆರೆದಾಡಿ ನಂಬರ್ ಒನ್ ಸ್ಥಾನದಲ್ಲಿದ್ದ ಭಾರತೀಯ ಸಂಚಾರ್‌ ನಿಗಮ ಲಿಮಿಟೆಡ್ ಬಿಎಸ್​ಎನ್​ಎಲ್ (BSNL)​ ಇದೀಗ ಪಾತಾಳಕ್ಕೆ ಕುಸಿದಿದ್ದು ಮೇಲೇಳಲು ಹರಸಾಹಸ ಪಡುತ್ತಿದೆ. ಸರಕಾರದ ನೀತಿಗಳು, ಖಾಸಗಿ ಟೆಲಿಕಾಂ ಕಂಪನಿಗಳು ದರ ಸಮರ ಸೇರಿ ಅನೇಕ ಕಾರಣಗಳಿಂದ ಬಿಎಸ್​ಎನ್​ಎಲ್ ಸಾಕಷ್ಟು ಲಾಸ್​ನಲ್ಲಿದೆ. ಇದರ ನಡುವೆ ದೇಶದ ಪ್ರಮುಖ ಮೊಬೈಲ್ ಸೇವಾ ಸಂಸ್ಥೆಗಳಾದ ರಿಲಯನ್ಸ್ ಜಿಯೋ ( Reliance Jio), ಏರ್ಟೆಲ್ (Airtel) ಹಾಗೂ ವೋಡಾಫೋನ್ ಐಡಿಯಾ (Vodafone) ಇತ್ತೀಚೆಗೆ ಪೈಪೋಟಿಗೆ ಬಿದ್ದವರಂತೆ ತಮ್ಮ ಯೋಜನೆಗಳನ್ನು ದುಬಾರಿಗೊಳಿಸಿವೆ. ಇದು ಈ ಮೂರೂ ಸಂಸ್ಥೆಗಳ ಗ್ರಾಹಕರಿಗೆ ಶಾಕ್ ನೀಡಿದೆ. ಈ ಪರಿಸ್ಥಿತಿಯ ಲಾಭ ಪಡೆಯಲು ಈಗ ಸರ್ಕಾರಿ ಸ್ವಾಮ್ಯದ BSNL ಮುಂದಾಗಿದೆ. ಬಿಎಸ್​ಎನ್​ಎಲ್​ನ ಈ ಹೊಸ ಪ್ಲಾನ್ (BSNL New Plan) ಇತರೆ ಯಾವುದೇ ಟೆಲಿಕಾಂ ಕಂಪನಿಗಳಲ್ಲಿ ಇಲ್ಲ ಎಂಬುವು ವಿಶೇಷ.

ಹೌದು, ಬಿಎಸ್​ಎನ್​ಎಲ್ ತನ್ನ ದೀರ್ಘಾವಧಿ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ 425 ದಿನಗಳ ಮಾನ್ಯತೆಯನ್ನು ನೀಡುತ್ತಿದೆ. ಖಾಸಗಿ ಟೆಲಿಕಾಂಗಳು ಕೇವಲ 365 ದಿನಗಳ ಮಾನ್ಯತೆ ನೀಡಿದರೆ ಬಿಎಸ್‌ಎನ್‌ಎಲ್‌ ಅದಕ್ಕೂ ಮೀರಿದ ಹೆಜ್ಜೆಯನ್ನು ಹಾಕಿದೆ. 2399 ರೂ. ವಾರ್ಷಿಕ ಪ್ಲಾನ್ 365 ದಿನಗಳ ವರೆಗೆ ಸಾಮಾನ್ಯವಾಗಿ ಮಾನ್ಯತೆ ಹೊಂದಿರುತ್ತದೆ. ಆದರೆ ಇದೀಗ ಬಿಎಸ್‌ಎನ್‌ಎಲ್ ಡಿಸೆಂಬರ್ 31ರ ಒಳಗಾಗಿ ಈ ಪ್ರಿಪೇಯ್ಡ್ ಯೋಜನೆಯನ್ನು ಹಾಕಿಸಿದರೆ 60 ದಿನಗಳವರೆಗೆ ಉಚಿತ ವ್ಯಾಲಿಡಿಟಿಯನ್ನು ಪಡೆಯಬಹುದು ಎಂದು ಹೇಳಿದೆ.

ಭಾರತದಲ್ಲಿ ಬೇರೆ ಯಾವುದೇ ಟೆಲಿಕಾಂ ಕಂಪನಿ ಗ್ರಾಹಕರಿಗೆ 365 ದಿನಗಳನ್ನು ಮೀರಿ ಮಾನ್ಯತೆ ಹೊಂದಿರುವ ಯಾವುದೇ ಪ್ಲಾನ್‌ಗಳನ್ನು ನೀಡುವುದಿಲ್ಲ. ಬಿಎಸ್‌ಎನ್‌ಎಲ್‌ನ ಈ ಯೋಜನೆಯೂ ಹಿಂದೆ 365 ದಿನಗಳ ವರೆಗೆ ಮಾತ್ರವೇ ಮಾನ್ಯತೆ ಹೊಂದಿತ್ತು. ಆದರೆ ಬಿಎಸ್‌ಎನ್‌ಎಲ್ 60 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ನೀಡುತ್ತಿದೆ. ಬಿಎಸ್ಎನ್‌ಎಲ್‌ನ ದೀರ್ಘಾವಧಿ ವ್ಯಾಲಿಡಿಟಿ ನೀಡುವ 2399ರೂ ಪ್ಲಾನ್ ಇದೀಗ ಹೆಚ್ಚುವರಿಯಾಗಿ 60 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಅಂದರೆ ಈ ಪ್ಲಾನ್‌ ಮೂಲಕ ಬಳಕೆದಾರರು 425 ದಿನಗಳ ವ್ಯಾಲಿಡಿಟಿ ಸಿಗಲಿದೆ. ಇನ್ನು ಈ ಪ್ಲಾನ್‌ ದೈನಂದಿನ 3GB ಡೇಟಾ ಪ್ರಯೋಜನ ನೀಡಲಿದೆ. ಜೊತೆಗೆ 100 SMS ಪ್ರಯೋಜನವನ್ನು ನೀಡಲಿದೆ. ಅಲ್ಲದೆ BSNL ಟ್ಯೂನ್ಸ್ ಮತ್ತು Eros Now ವಿಷಯಕ್ಕೆ 425 ದಿನಗಳವರೆಗೆ ಪ್ರವೇಶವನ್ನು ನೀಡುತ್ತದೆ.

ಬಿಎಸ್‌ಎನ್ಎಲ್‌ ಟೆಲಿಕಾಂನ ಇತರೆ ದೀರ್ಘಾವಧಿ ಪ್ಲಾನ್‌ಗಳನ್ನು ಪರಿಗಣಿಸುವುದಾದರೆ 1499ರೂ. ಬೆಲೆಯ ವಾರ್ಷಿಕ ಪ್ಲಾನ್‌ ಕೂಡ ಸೇರಿದೆ. ಈ ಪ್ರಿಪೇಯ್ಡ್‌ ಪ್ಲಾನ್‌ 365 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದು ಉಚಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಪ್ರಯೋಜನ ನೀಡಲಿದೆ. ಇದಲ್ಲದೆ ಬಿಎಸ್ಎನ್‌ಎಲ್‌ 1999ರೂ. ಬೆಲೆಯ ವಾರ್ಷಿಕ ಪ್ಲಾನ್‌ ಹೊಂದಿದೆ. ಈ ಪ್ಲಾನ್‌ನಲ್ಲಿ 100GB ಹೆಚ್ಚುವರಿ ಡೇಟಾದೊಂದಿಗೆ 500GB ನಿಯಮಿತ ಡೇಟಾವನ್ನು ನೀಡುತ್ತದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ನೀಡುತ್ತದೆ. ಇದು 365 ದಿನಗಳವರೆಗೆ Eros Now ಮನರಂಜನಾ ಸೇವೆಗೆ ಪ್ರವೇಶವನ್ನು ನೀಡುತ್ತದೆ.

Best Smartphones 2021: 2021 ರಲ್ಲಿ ರಿಲೀಸ್ ಆದ ಸ್ಟೈಲಿಶ್ ಸ್ಮಾರ್ಟ್​ಫೋನ್​ ಯಾವುವು?: ಇಲ್ಲಿದೆ ನೋಡಿ

Amazon: ಅಮೆಜಾನ್​ನಲ್ಲಿ ಮೊಬೈಲ್ ಮತ್ತು ಟಿವಿ ಸೇವಿಂಗ್ ಡೇಸ್: ಈ ಆಫರ್ ಮಿಸ್ ಮಾಡಲೇ ಬೇಡಿ

(BSNL offering 425 days validity with its Rs 2399 prepaid plan end soon here are all the details)

Follow us on

Related Stories

Most Read Stories

Click on your DTH Provider to Add TV9 Kannada