‘ನ್ಯಾಷನಲ್​ ಕ್ರಶ್​ ಅಂದಿದ್ದು ಯಾರು? ಬರೀ ಓವರ್​ ಆ್ಯಕ್ಟಿಂಗ್​’; ರಶ್ಮಿಕಾ ವಿಡಿಯೋಗೆ ನೆಗೆಟಿವ್​ ಕಮೆಂಟ್​ಗಳ ಸುರಿಮಳೆ

‘ನ್ಯಾಷನಲ್​ ಕ್ರಶ್​ ಅಂದಿದ್ದು ಯಾರು? ಬರೀ ಓವರ್​ ಆ್ಯಕ್ಟಿಂಗ್​’; ರಶ್ಮಿಕಾ ವಿಡಿಯೋಗೆ ನೆಗೆಟಿವ್​ ಕಮೆಂಟ್​ಗಳ ಸುರಿಮಳೆ
ರಶ್ಮಿಕಾ ಮಂದಣ್ಣ

‘ಪುಷ್ಪ’ ಚಿತ್ರದ ಪ್ರಚಾರದಲ್ಲಿ ಪಾಲ್ಗೊಂಡಿದ್ದ ರಶ್ಮಿಕಾ ಮಂದಣ್ಣ ಹಿಂದಿಯಲ್ಲಿ ಮಾತನಾಡಿ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆ ವಿಡಿಯೋ ವೈರಲ್​ ಆಗಿದೆ. ಅದನ್ನು ಕಂಡವರು ನೆಗೆಟಿವ್ ಕಮೆಂಟ್​ ಮಾಡಿದ್ದಾರೆ.

TV9kannada Web Team

| Edited By: Madan Kumar

Dec 19, 2021 | 9:47 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಸಖತ್ ಡಿಮ್ಯಾಂಡ್​ ಇದೆ. ಅನೇಕ ಸ್ಟಾರ್​ ಸಿನಿಮಾಗಳಿಗೆ ಅವರು ನಾಯಕಿ ಆಗುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಖ್ಯಾತಿ ಹೆಚ್ಚುತ್ತಿದೆ. ದಕ್ಷಿಣ ಭಾರತದಲ್ಲಿ ಯಶಸ್ಸು ಕಂಡ ಬಳಿಕ ಅವರು ಈಗ ಹಿಂದಿ ಚಿತ್ರರಂಗದಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್​ (Troll) ಮಾಡಲಾಗುತ್ತಿದೆ. ರಶ್ಮಿಕಾ ನಟಿಸಿರುವ ‘ಪುಷ್ಪ’ (Pushpa Movie) ಸಿನಿಮಾ ಇತ್ತೀಚೆಗೆ ರಿಲೀಸ್​ ಆಗಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದ ಅವರು ಹಿಂದಿಯಲ್ಲಿ ಮಾತನಾಡಲು ಪ್ರಯತ್ನಿಸಿದರು. ಆದರೆ ಅದನ್ನು ಕಂಡು ನೆಟ್ಟಿಗರು ಅಸಮಾಧಾನಗೊಂಡಿದ್ದಾರೆ. ರಶ್ಮಿಕಾ ಅವರದ್ದು ಬರೀ ಓವರ್​ ಆ್ಯಕ್ಟಿಂಗ್​ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ. ‘ನ್ಯಾಷನಲ್​ ಕ್ರಶ್​’ ಅಂತ ಬಿರುದುಕೊಟ್ಟಿದ್ದು ಯಾಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ರಶ್ಮಿಕಾ ಟ್ರೋಲ್​ ಆಗುತ್ತಿರುವುದು ಇದೇ ಮೊದಲೇನಲ್ಲ. ವಿಕ್ಕಿ ಕೌಶಲ್​ ಜತೆ ಅವರು ಕಾಣಿಸಿಕೊಂಡ ಪುರುಷರ ಒಳ ಉಡುಪಿನ ಜಾಹೀರಾತು ಕೂಡ ಸಿಕ್ಕಾಪಟ್ಟೆ ಟ್ರೋಲ್​ ಆಗಿತ್ತು. ಭಾಷೆಯ ವಿಚಾರಕ್ಕೆ ರಶ್ಮಿಕಾ ಆಗಾಗ ಜನರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇರುತ್ತಾರೆ. ‘ಪುಷ್ಪ’ ಸಿನಿಮಾದ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಹಿಂದಿಯಲ್ಲಿ ಮಾತನಾಡಿ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅದನ್ನು ಕಂಡವರು ನೆಗೆಟಿವ್ ಕಮೆಂಟ್​ ಮಾಡಿದ್ದಾರೆ.

‘ಇವರ ಅದೃಷ್ಟ ಚೆನ್ನಾಗಿತ್ತು. ಅದೇ ಕಾರಣಕ್ಕೆ ಗೀತಾ ಗೋವಿಂದಂ, ಡಿಯರ್​ ಕಾಮ್ರೇಡ್​ ರೀತಿಯ ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ತು. ಇವರು ಹೇಗೆ ನ್ಯಾಷನಲ್​ ಕ್ರಶ್​ ಆಗಲು ಸಾಧ್ಯ? ಇವರಿಗಿಂತ ಚೆನ್ನಾಗಿ ಬೇರೆ ನಟಿಯರು ಇದ್ದಾರೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ.

‘ರಶ್ಮಿಕಾ ಅವರದ್ದು ಬರೀ ಓವರ್​ ಆ್ಯಕ್ಟಿಂಗ್​’ ಎಂದು ಅನೇಕರು ಕಮೆಂಟ್​ಗಳ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಇವರು ಓವರ್​ ಆ್ಯಕ್ಟಿಂಗ್​ನ ನ್ಯಾಷನಲ್​ ಕ್ರಶ್​’ ಎಂದು ಒಬ್ಬರು ಹೇಳಿದ್ದರೆ, ‘ರಶ್ಮಿಕಾ ವರ್ತನೆ ಕಿರಿಕಿರಿ ಎನಿಸುತ್ತದೆ’ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ.

ಟ್ರೋಲ್​ ಮಾಡುವವರು ಏನೇ ಹೇಳಿದರೂ ಸದ್ಯಕ್ಕಂತೂ ರಶ್ಮಿಕಾಗೆ ಇರುವ ಡಿಮ್ಯಾಂಡ್​ ಕಡಿಮೆ ಆಗಿಲ್ಲ. ಅವರ ಕೈಯಲ್ಲೀಗ ಹಲವು ಸಿನಿಮಾಗಳಿವೆ. ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ಬೈ’, ‘ಸಿದ್ದಾರ್ಥ್​ ಮಲ್ಹೋತ್ರಾ ಜತೆ ‘ಮಿಷನ್​ ಮಜ್ನು’ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ‘ಪುಷ್ಟ’ ಸಿನಿಮಾದಿಂದ ಅವರಿಗೆ ಗೆಲುವು ಸಿಕ್ಕಿದೆ.

ಇದನ್ನೂ ಓದಿ:

ಮೊದಲ ದಿನವೇ ಲೀಕ್​ ಆಯ್ತು ರಶ್ಮಿಕಾ, ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾ; ಕಲೆಕ್ಷನ್​ ಮೇಲೆ ಬೀಳಲಿದೆ ಪೆಟ್ಟು 

‘ಈ ಲವ್​ ಅಪರಿಮಿತ’; ಫೋರ್ಬ್ಸ್​ ಪಟ್ಟಿಯಲ್ಲಿ ನಂ.1 ಆಗಿದ್ದಕ್ಕೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

Follow us on

Related Stories

Most Read Stories

Click on your DTH Provider to Add TV9 Kannada