ಡಿಕೆ ಶಿವಕುಮಾರ್ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಡ್ಲೆಕಾಯಿ ಅಂದರೆ ಅಚ್ಚುಮೆಚ್ಚು. ಅವರ ನಿವಾಸದ ಬಳಿ ಸುಮಾರು 20-25 ವರ್ಷಗಳಿಂದ ಕಡ್ಲೆಕಾಯಿ ಮಾರುವ ವ್ಯಾಪಾರಿಯೊಬ್ಬರು ಡಿಕೆಶಿಗೆ ನಿರಂತರವಾಗಿ ಕಡ್ಲೆಕಾಯಿ ಪೂರೈಸುತ್ತಿದ್ದಾರೆ. ಈಗ ಸಿಎಂ ಆದರೂ ಅವರಿಗೆ ಕಡ್ಲೆಕಾಯಿ ತಲುಪಿಸುವೆ ಎಂದು ವ್ಯಾಪಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಡವರ ಬಾದಾಮಿ ಎಂದೇ ಕರೆಯಲ್ಪಡುವ ಕಡ್ಲೆಕಾಯಿಯೊಂದಿಗೆ ಡಿ.ಕೆ. ಶಿವಕುಮಾರ್ ಅವರ ಬಾಂಧವ್ಯ ಅನನ್ಯ.
ಬೆಂಗಳೂರು, ಜೂನ್ 03: ಡಿಕೆ ಶಿವಕುಮಾರ್ (DK Shivakumar) ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ ಶುರುವಾಗಿದೆ. ಡಿಕೆ ಶಿವಕುಮಾರ್ ಅವರಿಗೆ ಕಡ್ಲೆಕಾಯಿ ಅಂದರೆ ಅಚ್ಚುಮೆಚ್ಚು ಎಂಬುದು ಅನೇಕರಿಗೆ ಗೊತ್ತಿಲ್ಲ. ನಿತ್ಯ ಸದಾಶಿವನಗರದ ಡಿಕೆ ಶಿವಕುಮಾರ್ ನಿವಾಸದ ಬಳಿ ಬಂಡಿ ಹಾಕುತ್ತಿದ್ದ ಕಡಲೆಕಾಯಿ ವ್ಯಾಪಾರಿ ಏಳುಮಲೈ ಟಿವಿ9ಗೆ ಪ್ರತಿಕ್ರಿಯಿಸಿದ್ದು, ‘ಡಿಕೆ ಶಿವಕುಮಾರ್ ಅವರಿಗೆ ಕಡಲೆಕಾಯಿ ಅಂದರೆ ತುಂಬಾ ಇಷ್ಟ. ಕಡಲೆಕಾಯಿ ಕೊಟ್ಟಾಗಲೆಲ್ಲಾ ಐನೂರು, ಸಾವಿರ ರೂ ಕೊಡುತ್ತಿದ್ದರು. ಬೆಂಗಳೂರಿನಲ್ಲಿ ಇದ್ದಾಗಲೆಲ್ಲಾ ಕಡಲೆಕಾಯಿ ಕೊಡುತ್ತೇನೆ. ಇನ್ನು ಕೆಲವೊಮ್ಮೆ ನಾನೇ ಸ್ವತಃ ಹೋಗಿ ಕೊಟ್ಟು ಬರುತ್ತೇನೆ. ಅವರ ಮನೆಯವರು ಬಂದು ಖರೀದಿ ಮಾಡುತ್ತಾರೆ. ಅವರು ಮುಖ್ಯಮಂತ್ರಿ ಆಗುತ್ತಿರುವುದಕ್ಕೆ ಖುಷಿ ಇದೆ ಎಂದು ಹೇಳಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಕಳೆದ 25 ವರ್ಷಗಳಿಂದ ಏಳುಮಲೈ ಬಳಿಯೇ ಕಡಲೆಕಾಯಿ ಖರೀದಿ ಮಾಡುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
